BBK 12: ನೀನು ಫ್ರೀ ಪ್ರೊಡಕ್ಟ್‌, ಏನೂ ಮಾಡದೆ ಇಲ್ಲಿದ್ದೀಯಾ? ಕೊನೆಗೂ ಕಾವ್ಯ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ | Bigg Boss Kannada Season 12 Kavya Shaiva Cries For Gilli Nata For His Words

BBK 12: ನೀನು ಫ್ರೀ ಪ್ರೊಡಕ್ಟ್‌, ಏನೂ ಮಾಡದೆ ಇಲ್ಲಿದ್ದೀಯಾ? ಕೊನೆಗೂ ಕಾವ್ಯ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ | Bigg Boss Kannada Season 12 Kavya Shaiva Cries For Gilli Nata For His Words


15

ನಾಮಿನೇಟ್‌ ಮಾಡಿರುವ ಕಾವ್ಯ ಶೈವ

Image Credit : colors kannada

ನಾಮಿನೇಟ್‌ ಮಾಡಿರುವ ಕಾವ್ಯ ಶೈವ

“ನಾನು ಎಷ್ಟು ಹೇಳಿದರೂ ಕೇಳದೆ ಗಿಲ್ಲಿ ನನ್ನನ್ನು ರೇಗಿಸುತ್ತಾನೆ. ಇದರಿಂದ ಸಮಸ್ಯೆ ಆಗುವುದು. ನಾನು ಸ್ನೇಹಿತೆ ಆಗಿ ತುಂಬ ಸಲ ಹೇಳಿದೀನಿ, ಆಮೇಲೆ ತಪ್ಪು ತಿದ್ದುಕೊಳ್ತೀನಿ ಎಂದು ಹೇಳಿದರೂ ಕೂಡ ಮತ್ತೆ ಅದೇ ಮಾಡ್ತಾನೆ. ನಾಮಿನೇಟ್‌ ಮಾಡಿದರೆ, ಅದರ ಸೀರಿಯಸ್‌ನೆಸ್‌ ಅರ್ಥ ಆಗಲಿ ಎಂದು ನಾಮಿನೇಟ್‌ ಮಾಡ್ತೀನಿ” ಎಂದು ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ಹೇಳಿದ್ದರು.

25

ಗಿಲ್ಲಿಗೆ ಸೀಕ್ರೇಟ್‌ ಟಾಸ್ಕ್‌ ಕೊಟ್ಟಿದ್ದರು

Image Credit : colors kannada

ಗಿಲ್ಲಿಗೆ ಸೀಕ್ರೇಟ್‌ ಟಾಸ್ಕ್‌ ಕೊಟ್ಟಿದ್ದರು

ಇದಾದ ಬಳಿಕ ಬಿಗ್‌ ಬಾಸ್‌ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರಿಗೆ ಸೀಕ್ರೇಟ್‌ ಟಾಸ್ಕ್‌ ಕೊಟ್ಟಿದ್ದರು. ಅದರಲ್ಲಿ ಗಿಲ್ಲಿ ನಟ ಅವರು ಕಾವ್ಯ ಶೈವಗೆ ಕಣ್ಣೀರು ಹಾಕಿಸಬೇಕಿತ್ತು. ಇದರಲ್ಲಿ ಗೆದ್ದರೆ ಗಿಲ್ಲಿ ಅವರು ಕ್ಯಾಪ್ಟನ್ಸಿ ಟಾಸ್ಕ್‌ ಆಡಲು ನೇರವಾಗಿ ಆಯ್ಕೆ ಆಗುತ್ತಾರೆ.

35

ಅಡುಗೆ ಮಾಡಬೇಕು

Image Credit : colors kannada

ಅಡುಗೆ ಮಾಡಬೇಕು

ಬಿಗ್‌ ಬಾಸ್‌ ಅಲ್ಲ, ವಿಲನ್‌ ಆದೇಶದಂತೆ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಸೇರಿಕೊಂಡು ಇಡೀ ಮನೆಯವರಿಗೋಸ್ಕರ ಅಡುಗೆ ಮಾಡಬೇಕಿತ್ತು. ಉಳಿದಂತೆ ಯಾರೂ ಕೂಡ ಅಡುಗೆ ಮನೆಗೆ ಹೋಗೋ ಹಾಗಿರಲಿಲ್ಲ. ಗಿಲ್ಲಿ ನಟ ಅವರ ಬಳಿ ಕೆಲಸ ಮಾಡಿಸೋದು ದೊಡ್ಡ ಟಾಸ್ಕ್.‌ ಅದರಲ್ಲಿ ಗಿಲ್ಲಿ ಏನು ಅಡುಗೆ ಮಾಡುತ್ತಾರೋ ಏನೋ!

45

 ಕಾವ್ಯ ಶೈವ ಅಳುತ್ತಿದ್ದಾರೆ

Image Credit : colors kannada

ಕಾವ್ಯ ಶೈವ ಅಳುತ್ತಿದ್ದಾರೆ

ಈಗ ಕಲರ್ಸ್‌ ಕನ್ನಡ ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್‌ ಮಾಡಿದೆ. ಅದರಲ್ಲಿ ಗಿಲ್ಲಿ ಅವರು ಕಾವ್ಯರನ್ನು ರೇಗಿಸಿದ್ದು, ಕಾವ್ಯ ಕಣ್ಣೀರು ಹಾಕಿದ್ದಾರೆ. “ಬೆನ್ನಿಗೆ ಚೂರು ಹಾಕಿದ್ರು, ರೇಗಿಸಿದ್ದೀನಂತೆ, ನಾಮಿನೇಶನ್‌ ಮಾಡಿದ್ನಂತೆ. ನಾನು ಜಂಟಿಯಾಗಿ ಬರಬಾರದಿತ್ತು, ನಾನು ಅಲ್ಲೇ ತಪ್ಪು ಮಾಡಿದೆ. ಸ್ಪಂದನಾ ಲಕ್ಕಿ ಅಲ್ಲ, ನೀವು ಲಕ್ಕಿ. ನೀವು ಪ್ರಿ ಪ್ರೊಡಕ್ಟ್.‌ ಫ್ರೀ.. ಫ್ರೀ..ನೀನು ಏನೂ ಮಾಡುತ್ತಿಲ್ಲ” ಎಂದು ಗಿಲ್ಲಿ ನಟ ಹೇಳಿದ್ದಾರೆ.

55

ನನಗೆ ತಡೆದುಕೊಳ್ಳೋಕೆ ಆಗಲಿಲ್ಲ

Image Credit : colors kannada

ನನಗೆ ತಡೆದುಕೊಳ್ಳೋಕೆ ಆಗಲಿಲ್ಲ

ಗಿಲ್ಲಿ ನಟ ಅವರ ಮಾತುಗಳನ್ನು ಕೇಳಿ ಕಾವ್ಯ ಶೈವ ಅವರು, “ನೀನು ಇದನ್ನೆಲ್ಲ ಮೊದಲೇ ಹೇಳಬೇಕಿತ್ತು, ಇಷ್ಟೊಂದೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಕೂತಿದ್ಯಾ?” ಎಂದು ಹೇಳಿದ್ದಾರೆ. ಆ ಬಳಿಕ ಅವರು ಸ್ಪಂದನಾ ಬಳಿ ಬಂದು, “ಇಂದು ಅವನು ಹೇಳಿರೋದನ್ನೆಲ್ಲ ನನಗೆ ತಗೊಳೋಕೆ ಆಗಲಿಲ್ಲ” ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *