Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಿಚ್ಚ ಸುದೀಪ್ ಅವರು ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‌ನಲ್ಲಿ ಟಾಸ್ಕ್‌ಗಳ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಟಾಸ್ಕ್‌ಗಳಲ್ಲಿ ಸಾಕಷ್ಟು ಗೊಂದಲ ಮಾಡಿಕೊಂಡಿದ್ದರು.

ಅಂದಹಾಗೆ ಕ್ಯಾಪ್ಟನ್ ಆಗಬೇಕು ಎಂದು ರಾಶಿಕಾ ಶೆಟ್ಟಿ ಮೊದಲ ವಾರದಿಂದ ಒದ್ದಾಡಿದ್ದರು. ಒಮ್ಮೆ ಅವರು ಕ್ಯಾಪ್ಟನ್ಸಿ ಟಾಸ್ಕ್ ಆಡಬೇಕು ಎಂದಾಗ, ಅದಿಕ್ಕೆ ಗಿಲ್ಲಿ ನಟ ಮತ ಹಾಕಿರಲಿಲ್ಲ. ಆಗಂತೂ ರಾಶಿಕಾ ಶೆಟ್ಟಿ ಸಿಕ್ಕಾಪಟ್ಟೆ ಅತ್ತಿದ್ದರು, ಪ್ರಶ್ನೆ ಮಾಡಿದ್ದರು. ಈಗ ಅವರು ಕ್ಯಾಪ್ಟನ್ ಆಗಿಯೂ, ಸೋತಿದ್ದಾರೆ.

ಟಾಸ್ಕ್ ಅರ್ಥ ಆಯ್ತಾ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಆಗ ರಾಶಿಕಾ ಶೆಟ್ಟಿ ಅವರು ನಾನು ಕನ್ಫ್ಯೂಸ್ ಆಗಿದ್ದೆ, ಆದರೆ ಎಲ್ಲರೂ ಮಾತನಾಡಿದರು” ಎಂದು ಹೇಳಿದ್ದಾರೆ. ಸದ್ಯ ವಾಹಿನಿಯು ಪ್ರೋಮೀ ರಿಲೀಸ್ ಮಾಡಿದ್ದು, ಯಾರು ಯಾರು ಏನೇನು ಮಾತನಾಡಿದರು ಎಂದು ಕಾದು ನೋಡಬೇಕಿದೆ.

“ಯಾರೂ ಸರಿ ಇರಲಿಲ್ಲ, ಉಸ್ತುವಾರಿ ಸರಿ ಇರಲಿಲ್ಲ, ಇದನ್ನು ಉಳಿದವರು ಬಳಸಿಕೊಂಡು ಮ್ಯಾನಿಪ್ಯುಲೇಟ್ ಮಾಡಿದರು” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ರಾಶಿಕಾ ಶೆಟ್ಟಿಗೆ ಟಾಸ್ಕ್ ನಿಯಮ ಗೊತ್ತಿಲ್ಲ, ಅಂದಹಾಗೆ ಗಿಲ್ಲಿ ನಟ, ಕಾವ್ಯ ಶೈವ ಗೆಲ್ಲಬಾರದು ಎನ್ನೋದು ಕೂಡ ಇತ್ತು. ಇದನ್ನು ಸುದೀಪ್ ಪ್ರಶ್ನೆ ಮಾಡಬೇಕಿತ್ತು ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಹೇಳಿದ್ದಾರೆ.

ಈ ಆಟ ಹದಗೆಡಿಸಲು ಚೈತ್ರಾ ಕಾರಣ ಎಂದು ರಜತ್ ಹೇಳಿದ್ದರು. ಈ ಮಧ್ಯೆ ಗಿಲ್ಲೋದು, ಪರಚೋದು, ಎಂಜಲು ಉಗಿಯೋದು ಮಾಡಿದ್ದಾರೆ, ನಾವು ಹತ್ತು, ಹ್ನೆರಡು ವರ್ಷದವರಾ? ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಅಶ್ವಿನಿ ಗೌಡ, ರಜತ್ ಕೂಡ ಚೈತ್ರಾ ಕುಂದಾಪುರ ಜೊತೆ ಟಾಸ್ಕ್ ವಿಚಾರವಾಗಿ ಜಗಳ ಆಡಿದ್ದರು.

ಈ ವಾರ ಕಿಚ್ಚ ಸುದೀಪ್ ಅವರು ಯಾವ ಯಾವ ಟಾಪಿಕ್ ಬಗ್ಗೆ ಮಾತನಾಡಲಿದ್ದಾರೆ? ಏನಾಗಲಿದೆ? ಎಂಬ ಕುತೂಹಲ ಇದೆ. ಈ ವಾರ ಪೂರ್ತಿ ಟಾಸ್ಕ್‌ಗಳ ಬಗ್ಗೆ ಗಮನ ಹರಿಸಲಾಗಿತ್ತು. ಅಂದಹಾಗೆ ಸೀಕ್ರೆಟ್ ರೂಮ್‌ನಲ್ಲಿ ರಕ್ಷಿತಾ, ಧ್ರುವಂತ್ ಇದ್ದು, ಅವರ ಕಡೆಗೆ ಗಮನ ಕೊಡಬೇಕಿದೆ.

Source link
BBK 12: ಈ ಬಾರಿ ಕಡ್ಡಿ ತುಂಡು ಮಾಡಿದಂತೆ ಖಡಕ್ ಆಗಿ, ಇದ್ದಿದ್ದನ್ನು ಇದ್ದಹಾಗೆ ಹೇಳಿದ ಕಿಚ್ಚ ಸುದೀಪ್