BBK 12: ಕೊನೆಯ ಕಿಚ್ಚನ ಪಂಚಾಯಿತಿ; ಡಬಲ್‌ ಗೇಮ್ ರಕ್ಷಿತಾ ಶೆಟ್ಟಿಗೆ ಬೆಂಡೆತ್ತಿದ್ದ Kiccha Sudeep!

BBK 12: ಕೊನೆಯ ಕಿಚ್ಚನ ಪಂಚಾಯಿತಿ; ಡಬಲ್‌ ಗೇಮ್ ರಕ್ಷಿತಾ ಶೆಟ್ಟಿಗೆ ಬೆಂಡೆತ್ತಿದ್ದ Kiccha Sudeep!

BBK 12: ಕೊನೆಯ ಕಿಚ್ಚನ ಪಂಚಾಯಿತಿ; ಡಬಲ್‌ ಗೇಮ್ ರಕ್ಷಿತಾ ಶೆಟ್ಟಿಗೆ ಬೆಂಡೆತ್ತಿದ್ದ Kiccha Sudeep!

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನ ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ರಕ್ಷಿತಾ ಶೆಟ್ಟಿ ಅವರಿಗೆ ಕ್ಲಾಸ್‌ ತಗೊಳ್ಳಲಾಗಿದೆ. ಹೌದು, ಪೊಸೆಸ್ಸಿವ್‌ನಿಂದ ಬೇರೆಯವರ ಮನಸ್ಸಿಗೆ ನೋವು ಮಾಡುತ್ತಿದ್ದ ರಕ್ಷಿತಾಗೆ ಕಿಚ್ಚ ಸುದೀಪ್‌ ಕಿವಿ ಹಿಂಡಿದ್ದಾರೆ.

ಕಿಚ್ಚನ ಪಂಚಾಯಿತಿಯ ಪ್ರೋಮೋವೊಂದನ್ನು ವಾಹಿನಿಯು ರಿಲೀಸ್‌ ಮಾಡಿದೆ. ಅದರಲ್ಲಿ ಗಿಲ್ಲಿ, ರಘು ಅವರು ಬೇರೆಯವರ ಜೊತೆ ಕ್ಲೋಸ್‌ ಆದರೆ ನಿಮಗೆ ಆಗೋದಿಲ್ಲ ಎಂದು ಕಿಚ್ಚ ಸುದೀಪ್‌ ಅವರು ಹೇಳಿದ್ದರು. ಆಗ ರಕ್ಷಿತಾ ಸುಮ್ಮನಾಗಿದ್ದಾರೆ.

ಹೌದು, ರಾಶಿಕಾ ಶೆಟ್ಟಿ ಅವರು ರಘು ಪಕ್ಕ ಕೂತಿದ್ದರು. ಆಗ ರಕ್ಷಿತಾ ಅವರು “ನೀವು ರಘು ಅಣ್ಣನ ಪಕ್ಕ ಕೂತಿದ್ದಾರೆ, ಅವರಿಗೆ ಅನ್‌ಕಂಫರ್ಟೇಬಲ್‌ ಫೀಲ್‌ ಆಗ್ತಿದೆ” ಎಂದು ಹೇಳಿದ್ದರು. ಇದು ಕೂಡ ಚರ್ಚೆ ಆಗಿತ್ತು. ರಾಶಿಕಾ, ರಕ್ಷಿತಾ ಅವರು ಇದೇ ವಿಚಾರಕ್ಕೆ ಜಗಳ ಆಡಿದ್ದಾರೆ.

ಗಾರ್ಡನ್‌ ಏರಿಯಾದಲ್ಲಿ ಗಿಲ್ಲಿ ನಟ ಅವರು ಸೋಫಾ ಮೇಲೆ ಕೂತಿದ್ದರು. ಅಲ್ಲೇ ಪಕ್ಕದಲ್ಲಿದ್ದ ಬೀನ್‌ ಬ್ಯಾಗ್‌ನ್ನು ರಕ್ಷಿತಾ ಅವರು ತಗೊಂಡು ಬೇರೆ ಕಡೆ ಇಟ್ಟರು. ಗಿಲ್ಲಿ ಜೊತೆ ಯಾರೂ ಕೂರಬಾರದು ಎಂದು ರಕ್ಷಿತಾ ಹೀಗೆ ಮಾಡಿದ್ದಾರೆ ಎಂಬ ಕಾರಣ ಕೊಟ್ಟು ರಾಶಿಕಾ ಅವರು ರಕ್ಷಿತಾಗೆ ಕಳಪೆ ಕೊಟ್ಟಿದ್ದರು.

ರಕ್ಷಿತಾಗೆ ರಘು, ಗಿಲ್ಲಿ ಪಕ್ಕ ಬೇರೆಯವರು ಕೂತರೆ ಆಗೋದಿಲ್ಲ. ಹೀಗಾಗಿ ಕಿಚ್ಚ ಸುದೀಪ್‌ ಅವರು ಇದನ್ನೇ ಪ್ರಶ್ನೆ ಮಾಡಿದ್ದಾರೆ. ರಕ್ಷಿತಾ ಮನಸ್ಸಿನಲ್ಲಿ ತಾನೇ ಟ್ರೋಫಿ ಗೆಲ್ಲಬೇಕು ಎಂದಿದೆ, ಆದರೆ ಗಿಲ್ಲಿ, ರಘು ಪಕ್ಕ ಬೇರೆಯವರು ಕೂರಬಾರದು ಎಂದಿದ್ದಾರೆ.

“ಸಂಬಂಧ ಇಟ್ಟುಕೊಂಡು ಮನೆಯನ್ನು ನರಕ ಮಾಡುತ್ತಿದ್ದೇವೆ ಅಂದರೆ..” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ. ಅಷ್ಟೇ ಅಲ್ಲದೆ, “ರಘು, ಗಿಲ್ಲಿ, ಹಾಗೂ ನೀವು.. ನಿಮ್ಮ ಮೂರು ಜನರಲ್ಲಿ ಯಾರು ಗೆಲ್ಲಬೇಕು?” ಎಂದು ಪ್ರಶ್ನೆ ಮಾಡಿದ್ದಾರೆ. ಆಗ ರಕ್ಷಿತಾ ನಾನು ಎಂದಿದ್ದಾರೆ.

Source link

Leave a Reply

Your email address will not be published. Required fields are marked *