15

Image Credit : colors kannada facebook
ಮಾಳು ನಿಪನಾಳ ಮಾತಾಡೋದು ಕಮ್ಮಿ
ಮಾಳು ನಿಪನಾಳ ಮಾತನಾಡೋದಿಲ್ಲ, ಮಾತೇ ಬರಲ್ಲ ಎಂದುಕೊಂಡಿದ್ದರು. ಆದರೆ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ವೀಕ್ಷಕರ ಮುಂದೆ ಭರ್ಜರಿಯಾಗಿ ಮಾತನಾಡಿದ್ದರು. ಇದು ಎಲ್ಲರಿಗೂ ಆಶ್ಚರ್ಯ ಆಗಿತ್ತು. ಅವರೇ ಕ್ಯಾಪ್ಟನ್ ಕೂಡ ಆಗಿದ್ದರು.
25
Image Credit : colors kannada facebook
ಮಾಳು ಮಾತು ಕೇಳೋದು ಅಪರೂಪ
ಬಿಗ್ ಬಾಸ್ ಮನೆಯಲ್ಲಿ ಮಾಳು ಮಾತು ಕೇಳೋದು ತುಂಬ ಅಪರೂಪ. ಈಗ ಕಿಚನ್ ಏರಿಯಾದಲ್ಲಿ ರಿಷಾ ಗೌಡ ನಕ್ಕಿದ್ದಾರೆ. ಅದನ್ನು ಕೇಳಿ ಮಾಳು ಅವರು, “ಸುಮ್ ಸುಮ್ನೆ ನಕ್ಕಿದ್ರೆ ಹುಚ್ಚರು ಅಂತಾರೆ” ಎಂದಿದ್ದಾರೆ.
35
Image Credit : colors kannada facebook
ನಿಂದೇ ದೊಡ್ಡ ಸಮಸ್ಯೆ
ಆಗ ರಿಷಾ ಅವರು, “ಡೇ ಒನ್ನಿಂದ ನಿಮಗೆ ಏನು ಸಮಸ್ಯೆ ಅಂತ ಗೊತ್ತಿಲ್ಲ” ಎಂದಿದ್ದಾರೆ. ಆಗ ಮಾಳು ಅವರು, “ನಿಂದೇ ದೊಡ್ಡ ಸಮಸ್ಯೆ, ನಿನ್ನನ್ನು ಯಾರು ಮಾತನಾಡಿಸಿದ್ರು?” ಎಂದಿದ್ದಾರೆ.
45
Image Credit : colors kannada facebook
ಏನು ಕಿರುಚೋದು?
ರಿಷಾ ಅವರು, “ಇದನ್ನೆಲ್ಲ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮನೇನಾ? ಏನು ಕಿರುಚೋದು?” ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಮಾಳು ಅವರು, “ಮನೆ ಅಂತ ಮಾಡೋಕೆ ಶುರು ಮಾಡಿದ್ರೆ? ಲಾಸ್ಟ್ ವಾರ್ನಿಂಗ್ ಕೊಡ್ತಿದೀನಿ” ಎಂದಿದ್ದಾರೆ.
55
Image Credit : colors kannada facebook
ವೈಲ್ಡ್ಕಾರ್ಡ್ ಎಂಟ್ರಿ ಕೊಟ್ಟ ರಿಷಾ ಗೌಡ
ಅಂದಹಾಗೆ ಅಭಿಷೇಕ್ ಅಬರು ಈ ಗಲಾಟೆಯನ್ನು ನಿಲ್ಲಿಸಿದ್ದಾರೆ. ವೈಲ್ಡ್ಕಾರ್ಡ್ ಎಂಟ್ರಿ ಕೊಟ್ಟ ರಿಷಾ ಗೌಡ ಅವರು ಈಗಾಗಲೇ ಸಾಕಷ್ಟು ಜಗಳ ಆಡಿದ್ದರು. ಗಿಲ್ಲಿ ನಟನಿಗೆ ಹೊಡೆದಿದ್ದರು. ಅಷ್ಟೇ ಅಲ್ಲದೆ ಧ್ರುವಂತ್ ಹೆಸರು ಬಂದಾಗ ವಾಮಿಟ್ ಮಾಡೋ ಥರ ಮಾಡಿದ್ದರು. ಸಾಕಷ್ಟು ಬಾರಿ ಅವರು ಕಿಚ್ಚ ಸುದೀಪ್ರಿಂದ ಕಿವಿ ಹಿಂಡಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.