BBK 12: ರಕ್ಷಿತಾ ಶೆಟ್ಟಿ ಬಾಯ್‌ಫ್ರೆಂಡ್‌ ಕಥೆ ಮುಗೀತು; ಇರೋ ಸತ್ಯ ಬಿಚ್ಚಿಟ್ಟ ರಘು!

BBK 12: ರಕ್ಷಿತಾ ಶೆಟ್ಟಿ ಬಾಯ್‌ಫ್ರೆಂಡ್‌ ಕಥೆ ಮುಗೀತು; ಇರೋ ಸತ್ಯ ಬಿಚ್ಚಿಟ್ಟ ರಘು!

BBK 12: ರಕ್ಷಿತಾ ಶೆಟ್ಟಿ ಬಾಯ್‌ಫ್ರೆಂಡ್‌ ಕಥೆ ಮುಗೀತು; ಇರೋ ಸತ್ಯ ಬಿಚ್ಚಿಟ್ಟ ರಘು!

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ತಮ್ಮ ಸ್ವಭಾವದಿಂದಲೇ ಅನೇಕರ ಮನಸ್ಸು ಗೆದ್ದಿದ್ದಾರೆ. ಕೆಲವೊಮ್ಮೆ ಇವರ ನಿರ್ಧಾರಗಳು, ತೀರ್ಮಾನ, ವರ್ತನೆ ಅನೇಕರಿಗೆ ಟೀಕೆ ಆಗಿದ್ದುಂಟು. ಈಗ ಇವರ ಬಾಯ್‌ಫ್ರೆಂಡ್‌ ಬಗ್ಗೆ ಮಾಹಿತಿ ಹೊರಬಿದ್ದಿದೆ.

ರಕ್ಷಿತಾ ಶೆಟ್ಟಿ ಅವರಿಗೆ ಬಾಯ್‌ಫ್ರೆಂಡ್‌ ಇದ್ದಾರೆ, ಅವರು ಬಿಟ್ಟು ಹೋದರು ಎಂದು ರಕ್ಷಿತಾ ಬಿಗ್‌ ಬಾಸ್‌ ಮನೆಯಲ್ಲಿ ಹೇಳಿಕೊಂಡು ಅತ್ತಿದ್ದರಂತೆ ಎಂಬ ಪೋಸ್ಟ್‌ವೊಂದು ವೈರಲ್‌ ಆಗಿತ್ತು. ಆದರೆ ಇದಂತೂ ಸುಳ್ಳು. ಈ ರೀತಿ ಮಾಹಿತಿಯನ್ನು ರಕ್ಷಿತಾ ಹಂಚಿಕೊಂಡಿಲ್ಲ.

ರಕ್ಷಿತಾ ಶೆಟ್ಟಿ ಅವರು ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ, ಅದಿಕ್ಕೆ ಉತ್ತರ ಕೊಟ್ಟಿದ್ದುಂಟು. ನನಗೆ ಮದುವೆ ಆಗಲು ಗಿಲ್ಲಿ ನಟನಂಥ ಹುಡುಗ ಬೇಕು, ಗಿಲ್ಲಿ ಬೇಡ, ಆರಾಮಾಗಿ ಕಾಲೆಳೆದುಕೊಂಡು ಇರುವ ಹುಡುಗ ಬೇಕು ಎಂದು ಅವರು ಹೇಳಿದ್ದರು.

ರಕ್ಷಿತಾ ಶೆಟ್ಟಿ ಅವರಿಗೆ ಗಿಲ್ಲಿ ನಟ, ರಘು ಎಂದರೆ ತುಂಬ ಇಷ್ಟ. ರಘು ಪಕ್ಕ ರಕ್ಷಿತಾ ಶೆಟ್ಟಿ ಕೂತರೂ ಕೂಡ ಅವರಿಗೆ ಇಷ್ಟ ಆಗೋದಿಲ್ಲ. ಇದನ್ನು ಅವರು ಮಾತನಾಡಿದ್ದರು. ರಘು ಪಕ್ಕ ರಾಶಿಕಾ ಕೂತಿರೋದು ನನಗೆ ಅನ್‌ಕಂಫರ್ಟೇಬಲ್‌ ಫೀಲ್‌ ಆಗ್ತಿದೆ ಎಂದು ಹೇಳಿದ್ದರು.

ಅಂದಹಾಗೆ ರಕ್ಷಿತಾ ಶೆಟ್ಟಿ ಅವರು ಗಿಲ್ಲಿ ನಟನ ವಿಚಾರದಲ್ಲಿ ಕೂಡ ಪೊಸೆಸ್ಸಿವ್‌ ಆಗಿದ್ದಾರೆ. ಗಿಲ್ಲಿ ಹಾಗೂ ಕಾವ್ಯ ನಡುವೆ ಮನಸ್ತಾಪ ಬರಲಿ, ಅವರು ದೂರ ಆಗಲಿ ಎನ್ನೋದು ರಕ್ಷಿತಾ ಉದ್ದೇಶ. ಇದನ್ನು ಕಿಚ್ಚ ಸುದೀಪ್‌ ಕೂಡ ವೀಕೆಂಡ್‌ ಎಪಿಸೋಡ್‌ನಲ್ಲಿ ಹೇಳಿದ್ದಾರೆ.

ಈ ಪೊಸೆಸ್ಸಿವ್‌ನೆಸ್‌ ಬಗ್ಗೆ ತಿಳಿದುಕೊಂಡಿರುವ ರಘು ಅವರು ರಕ್ಷಿತಾ ಶೆಟ್ಟಿ ಬಾಯ್‌ಫ್ರೆಂಡ್‌ ಕಥೆ ಮುಗೀತು ಎಂದಿದ್ದಾರೆ. ರಕ್ಷಿತಾಗೆ ಯಾವುದೇ ಬಾಯ್‌ಫ್ರೆಂಡ್‌ ಇಲ್ಲ, ಆದರೆ ರಘು ಅವರು ರಕ್ಷಿತಾ ಮನಸ್ಥಿತಿ ಬಗ್ಗೆ ಮಾತನಾಡಿದ್ದಾರೆ.

Source link

Leave a Reply

Your email address will not be published. Required fields are marked *