15

Image Credit : colors kannada facebook
ಮನೆ ಬಿಟ್ಟು ಹೋಗಬೇಕು ಎನ್ನೋದು ಯಾಕೆ?
ಮನೆ ಬಿಟ್ಟು ಹೋಗುವಂಥದ್ದು ಏನಾಯ್ತು ಎಂದು ವೀಕ್ಷಕರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಧ್ರುವಂತ್ ಅವರು ಉತ್ತರ ನೀಡಿದ್ದಾರೆ.
“ನಿರಂತರವಾಗಿ ಕೆಲವೊಂದಿಷ್ಟು ಆರೋಪಗಳನ್ನು ಮಾಡಲಾಯ್ತು, ಅದರಲ್ಲಿರುವ ಡ್ಯಾಮೇಜ್ ನನಗೆ ಬೇಕಾ?” ಎಂದು ಧ್ರುವಂತ್ ಅವರು ಹೇಳಿದ್ದಾರೆ.
25
Image Credit : colors kannada facebook
ಅಸಭ್ಯವಾಗಿ ವರ್ತಿಸುತ್ತಾರಾ?
ಆಗ ರಜತ್ ಅವರು, “ಧ್ರುವಂತ್ ಅವರೇ ಡ್ಯಾಮೇಜ್ ಮಾಡಿಕೊಳ್ಳುತ್ತಿದ್ದಾರೆ. ಅಸಭ್ಯವಾಗಿ ಮಾತನಾಡೋದು, ಅಸಭ್ಯವಾಗಿ ವರ್ತಿಸೋದು ಮಾಡುತ್ತಿದ್ದಾನೆ” ಎಂದಿದ್ದಾರೆ. ಈ ಜಗಳ ಮತ್ತೆ ಮುಂದುವರೆದಿದೆ. ಕೊನೆಯಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
35
Image Credit : colors kannada facebook
ಇದು ತಪ್ಪು ಹೇಳಿಕೆ
ಧ್ರುವಂತ್, “ಇದು ತಪ್ಪು ಹೇಳಿಕೆ” ಎಂದಿದ್ದಾರೆ. ಆಗ ರಜತ್ ಅವರು, “ನಾನು ಮಾತನಾಡುವಾಗ ತಡೆದುಕೋ” ಎಂದಿದ್ದಾರೆ. ಆಗ ಧ್ರುವಂತ್, “ನೀನು ಇದನ್ನೆಲ್ಲ ನನ್ನ ಹತ್ರ ಮಾತಾಡಬೇಡ. ಎಷ್ಟರಲ್ಲಿ ಇರಬೇಕೋ ಅಷ್ಟು ಇರು” ಎಂದು ಹೇಳಿದ್ದಾರೆ.
45
Image Credit : colors kannada facebook
ಜಗಳ ಆಡಿಕೊಂಡ ರಜತ್, ಧ್ರುವಂತ್
ಕಿಚ್ಚ ಸುದೀಪ್ ಮುಂದೆ ಧ್ರುವಂತ್, ರಜತ್ ಅವರು ಜಗಳ ಆಡಿಕೊಂಡಿದ್ದಾರೆ. ಇಷ್ಟುದಿನಗಳ ಕಾಲ ವೀಕ್ ಡೇಸ್‌ಗಳಲ್ಲಿ ಕೂಗಾಡಿಕೊಂಡು, ಜಗಳ ಆಡುತ್ತಿದ್ದವರು, ಈಗ ಕಿಚ್ಚ ಸುದೀಪ್ ಮುಂದೆ ಕೂಗಾಡಿದ್ದಾರೆ. ಆಗ ಸುದೀಪ್ ಏನು ಹೇಳಲಿದ್ದಾರೆ ಎಂದು ಕಾದು ನೋಡಬೇಕಿದೆ.
55
Image Credit : colors kannada facebook
ಧ್ರುವಂತ್ ವರ್ತನೆ ಬಗ್ಗೆ ಸುದೀಪ್ ಏನಂದ್ರು?
ಧ್ರುವಂತ್ ಅವರು ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇವರ ಜೊತೆ ಅವರ ಜಗಳ ಆಗಿದೆ. ರಕ್ಷಿತಾ ಮುಖವಾಡ ಹಾಕಿಕೊಂಡಿದ್ದಾಳೆ, ವಯಸ್ಸಿಗೆ ತಕ್ಕಂತೆ ಮಾತನಾಡೋದಿಲ್ಲ, ವರ್ತಿಸೋದಿಲ್ಲ ಎಂದಿದ್ದರು. ಇನ್ನು ಜಗಳ ಆಡುವಾಗ ವಿಚಿತ್ರವಾಗಿ ಡ್ಯಾನ್ಸ್ ಕೂಡ ಮಾಡಿದ್ದರು. ಇವೆಲ್ಲವೂ ಟ್ರೋಲ್ ಆಗಿತ್ತು.
ಕಿಚ್ಚ ಸುದೀಪ್ ಏನು ಹೇಳ್ತಾರೆ? ಎಪಿಸೋಡ್ ನೋಡಬೇಕಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.