15

Image Credit : colors kannada
ವಿಡಿಯೋ ವೈರಲ್ ಆಗಿತ್ತು
ಈ ವಿಡಿಯೋ ವೈರಲ್ ಆಗಿತ್ತು. ರಕ್ಷಿತಾ ಅವರು ಕನ್ನಡ ವಿರೋಧಿ ಎಂದು ಹೇಳಲಾಗಿತ್ತು. ರಕ್ಷಿತಾ ಈ ಬಗ್ಗೆ ಮಾತನಾಡಬೇಕು ಎಂದು ಹೇಳಲಾಗಿತ್ತು. ಆದರೆ ಈ ವಿಡಿಯೋದ ಮುಂದುವರೆದ ಭಾಗ ಈಗ ವೈರಲ್ ಆಗ್ತಿದೆ. ಈ ಮೂಲಕ ಸತ್ಯ ಹೊರಬಿದ್ದಿದೆ.
25
Image Credit : colors kannada
ಕನ್ನಡದಿಂದಲೇ ಇಲ್ಲಿಗೆ ಬಂದ್ರು
ರಕ್ಷಿತಾ ಶೆಟ್ಟಿ ತಪ್ಪಾದ ಕನ್ನಡ ಮಾತುಗಳನ್ನಾಡಿದ್ದರಿಂದಲೇ ಬಿಗ್ ಬಾಸ್ ಶೋಗೆ ಬಂದಿದ್ದರು. ಬಿಗ್ ಬಾಸ್ ಶೋಗೆ ಬಂದಾಗಲೂ ಕನ್ನಡ ಕಲಿಯೋಕೆ ಬಂದಿದ್ದೀನಿ ಎಂದಿದ್ದರು. ಅಂದಹಾಗೆ ಬಿಗ್ ಬಾಸ್ ಶೋನಲ್ಲಿ ಆರಂಭದಲ್ಲಿ ಕಷ್ಟಪಟ್ಟು ಕನ್ನಡ ಮಾತನಾಡುತ್ತಿದ್ದ ರಕ್ಷಿತಾ, ಈಗ ಸಾಕಷ್ಟು ಕನ್ನಡ ವಾಕ್ಯಗಳನ್ನು ಮಾತನಾಡುತ್ತಾರೆ.
35
Image Credit : colors kannada
ಕನ್ನಡದ ಬಗ್ಗೆ ಹೇಳಿದ್ದೇನು?
ಮುಂದುವರೆದ ವಿಡಿಯೋದಲ್ಲಿ “ಮಂಗಳೂರಿನಲ್ಲಿ ಎಲ್ಲರೂ ತುಳು ಮಾತನಾಡುತ್ತಾರೆ, ಕನ್ನಡ ಮಾತನಾಡೋದು ಕಡಿಮೆ. ನಾನು ತುಳು ಭಾಷೆಗೆ ಎಷ್ಟು ಬೆಲೆ ಕೊಡ್ತೀನೋ ಅಷ್ಟೇ ಕನ್ನಡಕ್ಕೂ ಬೆಲೆ ಕೊಡ್ತೀನಿ. ನಾನು ಕನ್ನಡದಲ್ಲಿ ನಿರೂಪಣೆ ಮಾಡೋಣ ಅಂದರೆ ಅನುಶ್ರೀ ಇದ್ದಾರೆ. ನಾನು ಮುಂಬೈನಲ್ಲಿ ಹುಟ್ಟಿದೀನಿ. ಅನುಶ್ರೀ ಅವರು ಮಂಗಳೂರಿನಲ್ಲಿ ಹುಟ್ಟಿ ಬೆಳೆದರು” ಎಂದು ರಕ್ಷಿತಾ ಹೇಳಿದ್ದಾರೆ.
45
Image Credit : colors kannada facebook
ಫೋನ್ ಮಾಡಿ, ಕನ್ನಡ ಮಾತಾಡೋಣ
“ನಾನು ಬೆಂಗಳೂರಿಗೆ ಬರೋದು ಅಪರೂಪ. ಬೆಂಗಳೂರಿನಲ್ಲಿರುವಾಗ ಬೇರೆಯವರ ಬಳಿ ಮಾತನಾಡುತ್ತ ಕನ್ನಡ ಬರುತ್ತದೆ. ಆದರೆ ನಾನು ಜಾಸ್ತಿ ಬೆಂಗಳೂರಿನಲ್ಲಿ ಇರೋದಿಲ್ಲ. ನೀವು ನನಗೆ ನಿತ್ಯವೂ ಫೋನ್ ಮಾಡಿ, ನಾನು ಕನ್ನಡದಲ್ಲಿ ಮಾತನಾಡ್ತೀನಿ” ಎಂದು ರಕ್ಷಿತಾ ಹೇಳಿದ್ದಾರೆ.
55
Image Credit : colors kannada
ಮಂಗಳೂರು ಟ್ರಿಪ್ ಮಾಡೋಣ
“ನೀವು ಈ ಆಟೋ ತಗೊಂಡು ಮಂಗಳೂರಿಗೆ ಬನ್ನಿ. ನಾವು ಮಂಗಳೂರು ಟ್ರಿಪ್ ಮಾಡೋಣ. ನನ್ನ ಹೆಸರು ಹೇಳಿದ್ರೆ ಸಾಕು, ಮಂಗಳೂರು ಪೂರ್ತಿ ತಿರುಗಾಡಬಹುದು” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.