ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವಾರ-ವಾರವೂ ಎಲಿಮಿನೇಶನ್ ಇದ್ದೇ ಇರುತ್ತದೆ. ಕಳೆದ ಬಾರಿ ಮಾಳು ನಿಪನಾಳ ಅವರು ಎಲಿಮಿನೇಟ್ ಆಗಿದ್ದರು, ಆದರೆ ಸ್ಪಂದನಾ ಸೋಮಣ್ಣ ಹೊರಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಸ್ಪಂದನಾ ಯಾಕೆ ಹೊರಹೋಗಲಿಲ್ಲ ಎಂದು ರಕ್ಷಿತಾ ಕಾರಣ ನೀಡಿದ್ದಾರೆ.

ಕೆಲ ವಾರಗಳ ಹಿಂದೆ ಬಿಗ್ ಬಾಸ್ ಶೋನಲ್ಲಿ ಸ್ಪಂದನಾ ಸೋಮಣ್ಣ ಅವರು ಎಲಿಮಿನೇಟ್ ಆಗಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೂ ಕೂಡ ಅವರು ಈ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿಯೇ ಗಿಲ್ಲಿ ನಟ ಅವರು ಸ್ಪಂದನಾರನ್ನು ಲಕ್ಕಿ ಎಂದು ಹೇಳುತ್ತಿರುತ್ತಾರೆ.

ಸ್ಪಂದನಾ ಸೋಮಣ್ಣ ಅವರು ಮನೆಯಲ್ಲಿ ಅಡುಗೆ ಕೆಲಸ ಮಾಡೋದಿಲ್ಲ, ಟಾಸ್ಕ್ ಆಡೋದಿಲ್ಲ, ಸ್ಟ್ಯಾಂಡ್ ತಗೊಳೋದಿಲ್ಲ, ಒಟ್ಟಿನಲ್ಲಿ ಕಾಣಿಸಿಕೊಳ್ಳೋದಿಲ್ಲ. ಆದರೂ ಅವರು ಹೇಗೆ ಉಳಿದುಕೊಂಡರು ಎನ್ನೋದು ಬಹುತೇಕರ ಪ್ರಶ್ನೆಯಾಗಿದೆ.

ಅಂದಹಾಗೆ ಕಾವ್ಯ ಶೈವ, ಧನುಷ್ ಗೌಡ ಕೂಡ ಸ್ಪಂದನಾ ಸೋಮಣ್ಣ ಉಳಿದುಕೊಂಡಿದ್ದರ ಬಗ್ಗೆ ಕಾಮಿಡಿ ಮಾಡಿದ್ದರು. ಅದನ್ನು ಕೇಳಿ ಸ್ಪಂದನಾ ಅವರು ಕೂಡ ನಕ್ಕಿದ್ದರು.

ಬಿಗ್ ಬಾಸ್ ಮನೆಯನ್ನು ಈ ಬಾರಿ ಅರಮನೆ ಥರ ರೆಡಿ ಮಾಡಲಾಗಿದೆ. ಸ್ಪಂದನಾ ಅವರು ಮೈಸೂರಿನ ಹುಡುಗಿ, ಹೀಗಾಗಿ ಅವರನ್ನು ಉಳಿಸಿಕೊಳ್ಳಲಾಗಿದೆ ಎಂದು ಕಾವ್ಯ ಶೈವ ಕಾಮಿಡಿ ಮಾಡಿದ್ದಾರೆ.

ಈಗ ರಕ್ಷಿತಾ ಶೆಟ್ಟಿ ಅವರು, “ಸ್ಪಂದನಾ ಸೋಮಣ್ಣಗೆ ಬೆಂಗಳೂರಿನಲ್ಲಿ ಮನೆ ಇಲ್ಲ ಎಂದು ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಳ್ಳಲಾಗಿದೆ” ಎಂದು ಕಾಮಿಡಿ ಮಾಡಿದ್ದಾರೆ. ರಕ್ಷಿತಾ ಮಾತು ಕೇಳಿ ಎಲ್ಲರೂ ನಕ್ಕಿದ್ದಾರೆ.

Source link
ಇನ್ನೂ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದ್ಯಾಕೆ? ಗುಟ್ಟು ಬಿಚ್ಚಿಟ್ಟ Rakshita Shetty