Bigg Boss ಮನೆಯಲ್ಲಿರುವವರಲ್ಲಿ ಇಬ್ಬರು ಸ್ಪರ್ಧಿಗಳೇ ಅಲ್ಲ; ಈ ವಾರ ಹೊರಬಂದ್ರೂ ಆಶ್ಚರ್ಯವಿಲ್ಲ! | Bigg Boss Kannada Season 12 Two Wild Card Contestants Out

Bigg Boss ಮನೆಯಲ್ಲಿರುವವರಲ್ಲಿ ಇಬ್ಬರು ಸ್ಪರ್ಧಿಗಳೇ ಅಲ್ಲ; ಈ ವಾರ ಹೊರಬಂದ್ರೂ ಆಶ್ಚರ್ಯವಿಲ್ಲ! | Bigg Boss Kannada Season 12 Two Wild Card Contestants Out


15

ಅಬ್ಬರಿಸಿ, ಒಳಗಡೆ ಹೋಗಿದ್ದ ರಿಷಾ ಗೌಡ

Image Credit : colors kannada

ಅಬ್ಬರಿಸಿ, ಒಳಗಡೆ ಹೋಗಿದ್ದ ರಿಷಾ ಗೌಡ

ಆರಂಭದಲ್ಲಿ ರಘು, ಸೂರಜ್‌ ಸಿಂಗ್‌, ರಿಷಾ ಗೌಡ ಅವರು ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಿದ್ದರು. ಇವರ ಮಧ್ಯೆ ರಿಷಾ ಗೌಡ ಎಲಿಮಿನೇಟ್‌ ಆಗಿದ್ದಾರೆ. ಬೇರೆಯವರ ಮುಖವಾಡ ಕಳಚುವೆ ಎಂದು ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡಿ ಒಳಗಡೆ ಹೋಗಿದ್ದ ರಿಷಾ, ಸಾಕಷ್ಟು ಬಾರಿ ಕಿಚ್ಚ ಸುದೀಪ್‌ ಅವರ ಬಳಿ ಕಿವಿ ಹಿಂಡಿಸಿಕೊಂಡಿದ್ದರು.

25

ಆದಷ್ಟು ಬೇಗ ಮನೆಯಿಂದ ಹೊರಬರ್ತಾರೆ

Image Credit : colors kannada

ಆದಷ್ಟು ಬೇಗ ಮನೆಯಿಂದ ಹೊರಬರ್ತಾರೆ

ಅಂದಹಾಗೆ ಸೂರಜ್‌ ಸಿಂಗ್‌ ಅವರು ಟಾಸ್ಕ್‌ಗಳನ್ನು ಚೆನ್ನಾಗಿ ಆಡುತ್ತಾರೆ, ಮನೆ ಕೆಲಸ ಮಾಡುತ್ತಾರೆ, ಆದರೆ ರಾಶಿಕಾ ಶೆಟ್ಟಿ ಜೊತೆಗೆ ಸ್ನೇಹ ಜಾಸ್ತಿ ಆಗಿದೆ. ಹೀಗಾಗಿ ಇವರು ಕೂಡ ಆದಷ್ಟು ಬೇಗ ಮನೆಯಿಂದ ಹೊರಗಡೆ ಬರುತ್ತಾರೆ ಎಂದು ವೀಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ.

35

ಎಲಿಮಿನೇಶನ್‌ ಆದವರು ಯಾರು?

Image Credit : colors kannada

ಎಲಿಮಿನೇಶನ್‌ ಆದವರು ಯಾರು?

ಈಗಾಗಲೇ ಕರಿಬಸಪ್ಪ, ಸತೀಶ್‌ ಕ್ಯಾಡಬಮ್ಸ್‌, ಆರ್‌ಜೆ ಅಮಿತ್‌, ರಿಷಾ ಗೌಡ, ಕಾಕ್ರೋಚ್‌ ಸುಧಿ, ಜಾಹ್ನವಿ, ಮಂಜು ಭಾಷಿಣಿ, ಅಶ್ವಿನಿ ಎಸ್‌ಎನ್‌ ಅವರು ಔಟ್‌ ಆಗಿದ್ದಾರೆ.

45

ದೊಡ್ಮನೆಯೊಳಗಡೆ ಎಂಟ್ರಿ

Image Credit : colors kannada

ದೊಡ್ಮನೆಯೊಳಗಡೆ ಎಂಟ್ರಿ

ಮ್ಯಾಕ್ಸ್‌ ಮಂಜು, ತ್ರಿವಿಕ್ರಮ್‌, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ರಜತ್‌ ಕಿಶನ್‌ ಅವರು ದೊಡ್ಮನೆಯೊಳಗಡೆ ಎಂಟ್ರಿ ಕೊಟ್ಟಿದ್ದರು. ಒಂದು ವಾರಗಳ ಬಳಿಕ ಇವರು ಹೊರಗಡೆ ಬಂದಿದ್ದಾರೆ. ಆ ಬಳಿಕ ರಜತ್‌, ಚೈತ್ರಾ ಕುಂದಾಪುರ ಅವರು ಸ್ಪರ್ಧಿಗಳು ಎಂದು ಘೋಷಣೆ ಮಾಡಲಾಗಿತ್ತು.

55

ಈಗ ಹೊರಬರೋರು ಯಾರು?

Image Credit : colors kannada

ಈಗ ಹೊರಬರೋರು ಯಾರು?

ಈಗ ಚೈತ್ರಾ ಕುಂದಾಪುರ, ರಜತ್‌ ಅವರು ಸ್ಪರ್ಧಿಗಳಲ್ಲ, ಅತಿಥಿಗಳು ಗುರುವಾರ ಮನೆಯಿಂದ ಹೊರಗಡೆ ಬರುತ್ತಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಒಟ್ಟಿನಲ್ಲಿ ಇವರು ಔಟ್‌ ಆಗ್ತಾರಾ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *