Bigg Boss Kannada Season 12 Winning Prize: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕೊನೆಗೂ ಮಂಡ್ಯದ ಗಂಡು ಗಿಲ್ಲಿ ನಟ ಅವರು ಗೆದ್ದಿದ್ದಾರೆ. ಹೀಗಿರುವಾಗ ಅವರು ಆ ಬಹುಮಾನದಲ್ಲಿ ಏನು ಮಾಡುತ್ತಾರೆ ಎಂಬ ಕುತೂಹಲ ಇತ್ತು. ಇದಕ್ಕೆ ಅವರು ಉತ್ತರ ಕೊಟ್ಟಿದ್ದಾರೆ.

ಗಿಲ್ಲಿ ನಟ ಅವರು, “ನಾನು ಗೆಲ್ಲುತ್ತೇನೆ ಎಂಬ ನಂಬಿಕೆ ಇರಲಿಲ್ಲ, 7-8 ವಾರ ಇರುತ್ತಿದ್ದೆ ಎಂದುಕೊಂಡೆ. ಆದರೆ ಟ್ರೋಫಿ ಗೆದ್ದಿದ್ದು ತುಂಬ ಖುಷಿ. ಅದರಲ್ಲಿಯೂ ಜನರು ನನ್ನ ಇಷ್ಟಪಟ್ಟಿದ್ದು, ಶಿವರಾಜ್‌ಕುಮಾರ್, ರಾಜಕಾರಣಿಗಳು ಕೂಡ ವಿಶ್ ಮಾಡಿದ್ದು ಕೂಡ ಖುಷಿ ಕೊಡ್ತಿದೆ” ಎಂದಿದ್ದಾರೆ.

“ಜನರು ಟ್ಯಾಟೂ ಹಾಕಿಸಿದ್ದು, ಕಟೌಟ್ ಹಾಕಿಸಿದ್ದು ನೋಡಿ ಖುಷಿಯಾಯ್ತು. ನನಗೆ ಇದೆಲ್ಲ ನಂಬಲಾಗಲಿಲ್ಲ. ಆಮೇಲೆ ನನ್ನನ್ನು ನಾನೇ ಗಿಲ್ಲಿಕೊಂಡೆ. ಅಷ್ಟು ಆಶ್ಚರ್ಯ ಆಯ್ತು” ಎಂದು ಗಿಲ್ಲಿ ನಟ ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರಿಗೆ 50 ಲಕ್ಷ ರೂಪಾಯಿ, ಒಂದು ಕಾರ್, ಕಿಚ್ಚ ಸುದೀಪ್ ಅವರಿಂದ 10 ಲಕ್ಷ ರೂಪಾಯಿ, ಆಮೇಲೆ ಶರವಣ ಅವರಿಂದ 10 ಲಕ್ಷ ರೂಪಾಯಿ ಹಣ ಸಿಕ್ಕಿದೆ.

ಬಹುಮಾನದ ಹಣದ ಜೊತೆಗೆ ಗಿಲ್ಲಿ ನಟನಿಗೆ ವಾರಕ್ಕೆ ಇಂತಿಷ್ಟು ಎಂದು ಸಂಭಾವನೆ ಕೂಡ ಕೊಡುತ್ತಾರೆ. ಆ ಹಣ ಕೂಡ ಸಿಗುವುದು.

“ಗಿಲ್ಲಿ ನಟ ಅವರು ಊರಿನಲ್ಲಿ ಒಂದು ಫಾರ್ಮ್‌ಹೌಸ್ ಮಾಡಬೇಕು, ಜಮೀನು ತಗೋಬೇಕು, ವ್ಯವಸಾಯ ಮಾಡಬೇಕು. ನನಗೆ ಊರಿನಲ್ಲಿ ಇರೋದು ಇಷ್ಟ” ಎಂದು ಹೇಳಿದ್ದಾರೆ.

Source link
BBK 12: ಒಟ್ಟೂ 60 ಲಕ್ಷ ಹಣವನ್ನು ಏನ್ ಮಾಡ್ತೀನಿ ಎಂದೇ ಹೇಳಿಬಿಟ್ರು Gilli Nata!