
ಬಿಗ್ ಬಾಸ್ ಮನೆಗೆ ತೆರಳಿದ್ದ ರಜತ್ ಹಾಗೂ ಚೈತ್ರಾ ಒಟ್ಟಿಗೆ ಎಲಿಮಿನೇಟ್ ಆದರು. ಅಶ್ವಿನಿಗೆ ಠಕ್ಕರ್ ಕೊಡೋಕೆ ಚೈತ್ರಾ, ಗಿಲ್ಲಿಗೆ ಠಕ್ಕರ್ ಕೊಡೋಕೆ ರಜತ್ ಹೋಗಿದ್ದರು ಎಂಬ ಮಾತಿತ್ತು. ಈ ಮಾತನ್ನು ಚೈತ್ರಾ ಅವರು ಅಲ್ಲಗಳೆದಿದ್ದಾರೆ. ‘ಆ ರೀತಿ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇವರು ಹೊರಗಿನಿಂದ ಆಟ ನೋಡಿಕೊಂಡು ಹೋಗುತ್ತಾರೆ. ಯಾವುದಾದರೂ ಸ್ಪರ್ಧಿಗಳಿಗೆ ಏನಾದರೂ ಬದಲಾವಣೆ ಬೇಕು ಎಂದಾಗ ಅದನ್ನು ಮಾಡುವ ಕೆಲಸವನ್ನು ಇವರು ಮಾಡಿದ್ದಾರೆ.