Bigg Boss Kannada Season 12 Episode: ಈ ವಾರ ಯಾರು ಮನೆಯ ಕ್ಯಾಪ್ಟನ್ ಆಗುತ್ತಾರೆ ಎನ್ನುವ ಪ್ರಶ್ನೆ ಎದ್ದಿದೆ. ಗ್ರ್ಯಾಂಡ್ ಫಿನಾಲೆ ಹತ್ತಿರ ಇರೋದರಿಂದ ಈ ವಾರ ಕ್ಯಾಪ್ಟನ್ ಆಗೋದು ಬಹಳಷ್ಟು ಪ್ಲಸ್ ಪಾಯಿಂಟ್ ಆಗುವುದು. ಹಾಗಾದರೆ ಯಾರದು?

ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್ ಮಾಡಿದೆ. ಅದರಲ್ಲ ಕ್ಯಾಪ್ಟನ್ಸಿ ಟಾಸ್ಕ್ ಕಾಳಗ ನೀಡಲಾಗಿತ್ತು. ಬಿಗ್ ಬಾಸ ಈಗ ಟಾಸ್ಕ್ ನೀಡಿದ್ದಾರೆ. ಅಶ್ವಿನಿ ಗೌಡ ಹಾಗೂ ಧನುಷ್ ಗೌಡ ಅವರು ಕ್ಯಾಪ್ಟನ್ ರೇಸ್‌ನಲ್ಲಿದ್ದರು. ಈಗ ಇವರಲ್ಲಿ ಒಬ್ಬರು ಆಟ ಗೆದ್ದು ಕ್ಯಾಪ್ಟನ್ ಆಗಲಿದ್ದಾರೆ. ಹಾಗಾದರೆ ಯಾರದು?

ಈ ಬಾರಿ ಕ್ಯಾಪ್ಟನ್ ಆದವರು ದೊಡ್ಮನೆಯ ಕಟ್ಟ ಕಡೆಯ ಮನೆಯ ಕ್ಯಾಪ್ಟನ್ ಆಗುತ್ತಾರೆ. ಹೀಗಾಗಿ ಇದು ನಿಜಕ್ಕೂ ತುಂಬ ವಿಶೇಷವಾದುದು. ಅಂದಹಾಗೆ ಅಶ್ವಿನಿ ಗೌಡ ಅವರು ಕೆಲವು ಬಾರಿ ಕ್ಯಾಪ್ಟನ್ಸಿ ಟಾಸ್ಕ್ ಆಡಿದ್ದರೂ ಕೂಡ ಕ್ಯಾಪ್ಟನ್ ಆಗಿರಲು ಸಾಧ್ಯವಾಗಿರಲಿಲ್ಲ.

ಈ ಬಾರಿ ಧನುಷ್ ಗೌಡ ಅವರೇ ಕ್ಯಾಪ್ಟನ್ ಆಗಿರುವ ಸಾಧ್ಯತೆ ಜಾಸ್ತಿ ಇದೆ. ಅಂದಹಾಗೆ 24/7 ಲೈವ್‌ನಲ್ಲಿ ಕೂಡ ಧನುಷ್ ಅವರೇ ಕ್ಯಾಪ್ಟನ್ ಆಗಿದ್ದಾರೆ ಎಂದು ಹೇಳಲಾಗಿದೆಯಂತೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿದೆ.

ಪ್ರೋಮೋದಲ್ಲಿ ಕೂಡ ಧನುಷ್ ಗೌಡ ಅವರು ಟಾಸ್ಕ್ ಗೆದ್ದು ಶಿರಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಆಮೇಲೆ ಆಟದ ನಿಯಮದ ಉಲ್ಲಂಘನೆ ಆಗಿದೆಯಾ ಎಂದು ಬಿಗ್ ಬಾಸ್ ಪ್ರಶ್ನೆ ಮಾಡುತ್ತಾರೆ. ಹೀಗಾಗಿ ಯಾರು ಕ್ಯಾಪ್ಟನ್ ಆಗಲಿದ್ದಾರೆ ಎಂಬ ಪ್ರಶ್ನೆ ಇದೆ.

ಅಂದಹಾಗೆ ಈ ಬಾರಿ ಕ್ಯಾಪ್ಟನ್ ಆದವರಿಗೆ ಟಿಕೆಟ್ ಟು ಫಿನಾಲೆ ಸಿಗಲಿದೆ ಎನ್ನಲಾಗ್ತಿದೆ. ಈ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಒಟ್ಟಿನಲ್ಲಿ ದಿನಗಳು ಕಡಿಮೆ ಇದ್ದು, ಯಾರು ಟ್ರೋಫಿ ಗೆಲ್ಲಲಿದ್ದಾರೆ ಎಂದು ಕಾದು ನೋಡಬೇಕಿದೆ.

Source link
ಈ ಬಾರಿ BBK 12 ಕ್ಯಾಪ್ಟನ್ ಆದವ್ರಿಗೆ ಬಂಪರ್ ಅವಕಾಶ; ಟಿಕೆಟ್ ಟು ಫಿನಾಲೆ ಪಡೆದವರು ಯಾರು?