ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಅಶ್ವಿನಿ ಅವರ ಅಬ್ಬರ ಜೋರಾಗಿದೆ. ಅದರಲ್ಲೂ ಬಿಗ್ಬಾಸ್ ಪ್ರಾರಂಭವಾದ ಮೊದಲ ಕೆಲ ವಾರಗಳಲ್ಲಿ ಅಶ್ವಿನಿ ಅವರು ಇಡೀ ಮನೆಯ ನಿಯಂತ್ರಣದಲ್ಲಿ ಇಟ್ಟಿದ್ದರು. ಆದರೆ ತಮ್ಮ ಧಮನಕಾರಿ ಮಾತುಗಳಿಂದ ಸುದೀಪ್ ಅವರಿಂದ ಟೀಕೆಗೆ ಸಹ ಗುರಿಯಾದರು. ರಕ್ಷಿತಾರ ಸ್ಟೇಟಸ್ ಬಗ್ಗೆ ಆಡಿದ ಮಾತು, ಗೆಜ್ಜೆ ವಿಷಯದಲ್ಲಿ ರಕ್ಷಿತಾರನ್ನು ಸಿಕ್ಕಿ ಹಾಕಿಸಿ ಮಜಾ ತೆಗೆದುಕೊಂಡಿದ್ದು, ಕೆಲವರನ್ನು ವೈಯಕ್ತಿಕವಾಗಿ ನಿಂದಿಸಿದ್ದು, ಹೀಗೆ ಹಲವು ವಿಷಯಗಳಿಗೆ ಸುದೀಪ್ ಅವರಿಂದ ಟೀಕೆಗೆ ಒಳಪಟ್ಟ ಬಳಿಕ ಅಶ್ವಿನಿ ತುಸು ಮೆತ್ತಗಾಗಿದ್ದರು. ಆದರೆ ಕಳೆದ ವಾರ ಮತ್ತೊಮ್ಮೆ ಅವರು ತಮ್ಮ ಹಳೆಯ ವರಸೆ ತೋರಿಸಿದ್ದಾರೆ.
ಕಳೆದ ವಾರ ನೀರಿನ ಟಬ್ನ ಟಾಸ್ಕ್ ಒಂದು ನಡೆದಿತ್ತು. ಈ ವೇಳೆ ಅಶ್ವಿನಿ ಹಾಗೂ ಕಾವ್ಯಾ ಅವರು ಪರಸ್ಪರ ಎದುರಾಳಿ ತಂಡಗಳಲ್ಲಿ ಇಬ್ಬರು. ಇಬ್ಬರೂ ಸಹ ಗೆಲ್ಲಲೇ ಬೇಕು ಆಟ ಆಡುವಂತೆ. ಈ ವೇಳೆ ಅಶ್ವಿನಿ ಅವರು ತಮ್ಮ ತೋಳ್ಬಲ ಬಳಸಿ ಕಾವ್ಯಾ ಅವರನ್ನು ಸೋಲಿಸಿದರು. ಆಗ ಸಿಟ್ಟಾದ ಕಾವ್ಯ ಚರ್ಚೆಯ ವೇಳೆ, ‘ಆಯ್ತು ಹೋಗಮ್ಮ’ ಎಂದೆನೋ ಹೇಳಿದರು. ಅದನ್ನು ತುಸು ಅಫೆನ್ಸಿವ್ ಆಗಿ ತೆಗೆದುಕೊಂಡ ಅಶ್ವಿನಿ, ‘ಅದನ್ನೆಲ್ಲ ನಿನ್ನ ಅಮ್ಮನ ಬಳಿ ಹೇಳಿಕೊ’ ಎಂದರು. ಇದು ಕಾವ್ಯಾರನ್ನು ಕೆರಳಿಸಿತು, ‘ನನ್ನ ಅಮ್ಮನ ಬಗ್ಗೆ ಮಾತನಾಡಬೇಡಿ, ಅವರ 10% ಸಹ ನೀವಿಲ್ಲ’ ಎಂದು ಕಿರುಚಾಡಲು ಆರಂಭಿಸಿದರು. ಆದರೆ ಅಶ್ವಿನಿ ‘ನಿನ್ನ ಅಮ್ಮನ ಬಳಿ ಹೇಳು ಹೋಗು’ ಎಂದು ಕೆಲ ಬಾರಿ ಹೇಳಿದರು.
ಇದನ್ನೂ ಓದಿ:ಸುದೀಪ್ ಎದುರೇ ಧ್ರುವಂತ್ ಗೆ ಬೆದರಿಕೆ ಹಾಕಿದ ರಕ್ಷಿತಾ ಶೆಟ್ಟಿ
ಶನಿವಾರದ ಎಪಿಸೋಡ್ ನಲ್ಲಿ ಸುದೀಪ್ ಅವರು ಈ ವಿಷಯ ಚರ್ಚೆ ನಡೆಸಿದರು. ಟಾಸ್ಕ್ ವಿಚಾರವಾಗಿ ಚರ್ಚೆ ಮಾಡಿ, ರಾಶಿಕಾ ಅವರು ಕೆಟ್ಟದಾಗಿ ಉಸ್ತುವಾರಿ ಮಾಡಿದ ರೀತಿಯನ್ನು ಟೀಕೆ ಮಾಡಿದರು. ಆ ನಂತರ ರಘು, ಚೈತ್ರಾ ಇನ್ನಿತರ ಟಾಸ್ಕ್ ಅನ್ನು ತಪ್ಪಾಗಿ ಅರ್ಥೈಸಿಕೊಂಡು, ತಪ್ಪಾಗಿ ಆಡಿದ್ದರ ಬಗ್ಗೆ ಟೀಕೆ ಮಾಡಿದರು. ‘ನೀವೆಲ್ಲ 10-12 ವರ್ಷ ಮಕ್ಕಳಿಗಿಂತ ಕಡೆಯಾಗಿ ವರ್ತಿಸಿದಿರಿ. ಪರಸ್ಪರ ಬೈಯ್ಯುವುದು, ಗಿಲ್ಲುವುದು, ಕೂಡಲೆಳೆಯುವುದು, ಉಗಿಯುವುದು ಇದೆಲ್ಲ ಆಡುವ ರೀತಿಯೇ?’ ಎಂದು ಸುದೀಪ್ ಪ್ರಶ್ನೆ ಮಾಡಿದರು.
ಅಂತಿಮವಾಗಿ ಅಶ್ವಿನಿ ವಿಷಯಕ್ಕೆ ಬಂದ ಸುದೀಪ್, ‘ಮನೆಯಲ್ಲಿ ಇರುವವರನ್ನು ಬಿಗ್ಬಾಸ್ ಮನೆಗೆ ಏಕೆ ತರುತ್ತೀರಿ, ಕಾವ್ಯಾ ಅವರ ತಾಯಿಯ ವಿಷಯ ನಿಮಗೆ ಯಾಕೆ? ನಿಮ್ಮ ಜಗಳ ಕಾವ್ಯ ಜೊತೆಗೆ, ಅವರೊಟ್ಟಿಗೆ ಜಗಳ ಮಾಡಿ, ಅವರ ಮನೆಯವರ ವಿಷಯ ನಿಮಗೆ ಯಾಕೆ? ಅವರ ತಾಯಿಯೂ ಸಹ ಶೋ ನೋಡುತ್ತಿರುತ್ತಾರೆ. ಬಹುಷಃ ಕಾವ್ಯಾರ ತಾಯಿ, ನಿಮ್ಮ ಅಭಿಮಾನಿಯೇ ಆಗಿರಬಹುದು? ಆದರೆ ನೀವು ಆಡಿದ ಮಾತಿನಿಂದ ಅವರ ಮನಸ್ಸಿಗೆ ಎಷ್ಟು ಬೇಸರವಾಗಬಹುದು’ ಎಂದರು. ಅಶ್ವಿನಿ, ಸ್ಪಷ್ಟನೆ ನೀಡುವ ಪ್ರತಯ್ನ ಮಾಡಿದರಾದರೂ ಸುದೀಪ್ ಅದನ್ನು ಒಪ್ಪಲಿಲ್ಲ, ‘ನೀವು ಏನೇ ಹೇಳಿದರೂ ನಾನು ಒಪ್ಪುವುದಿಲ್ಲ’ ಎಂದರು. ಬಳಿಕ ಅಶ್ವಿನಿ, ಕ್ಷಮೆ ಕೇಳಿದರು. ನಾನು ತಪ್ಪು ಮಾಡಿದೆ, ಅವರ ತಾಯಿಯ ವಿಷಯ ಎತ್ತಬಾರದಿತ್ತು ಎಂದು ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 10:57 pm, ಶನಿ, 20 ಡಿಸೆಂಬರ್ 25