Bigg Boss Kannada today episode: ತೂಕ ಎತ್ತುವ ಟಾಸ್ಕ್ ಗೆದ್ದ ರಾಶಿಕಾ ಮತ್ತು ಕಾವ್ಯಾ ಶೈವ, ನಾಮಿನೇಷನ್ನಿಂದ ಪಾರಾಗಲು ಹೊಸ ಟಾಸ್ಕ್ ಆಡುತ್ತಿದ್ದಾರೆ. ಹಲಗೆಗಳ ಮೇಲಿರುವ ಕಾರ್ಡ್ಗಳನ್ನು ತಮ್ಮ ಬಣ್ಣಕ್ಕೆ ತಿರುಗಿಸುವ ಆಟ.

ಮಂಗಳವಾರದ ಸಂಚಿಕೆಯ ತೂಕ ಎತ್ತುವ ಟಾಸ್ಕ್ನಲ್ಲಿ ರಾಶಿಕಾ ಮತ್ತು ಕಾವ್ಯಾ ಶೈವ ಗೆದ್ದು ಮುಂದಿನ ಆಟವನ್ನು ಆಡುತ್ತಿದ್ದಾರೆ. ಸ್ಟ್ರಾಂಗ್ ಸ್ಪರ್ಧಿಗಳಾಗಿದ್ದ ಧನುಷ್ ಮತ್ತು ಅಭಿಷೇಕ್ ತಕ್ಕಡಿಗೆ ಪದೇ ಪದೇ ಭಾರ ಹಾಕಿದ್ದರಿಂದ ಇಬ್ಬರು ಟಾಸ್ಕ್ ಸೋತಿದ್ದರು.

ಅಂತಿಮವಾಗಿ ಉಳಿಯುವ ಇಬ್ಬರು ಮುಂದಿನ ಟಾಸ್ಕ್ ಆಡಲು ಅರ್ಹರಾಗಿರುತ್ತಾರೆ ಎಂದು ಬಿಗ್ಬಾಸ್ ಹೇಳಿದ್ದರು. ತೂಕದ ಟಾಸ್ಕ್ ಗೆದ್ದಿರುವ ಕಾವ್ಯಾ ಮತ್ತು ರಾಶಿಕಾ ನಡುವೆ ಯಾರು ನಾಮಿನೇಷನ್ನಿಂದ ಸೇವ್ ಆಗ್ತಾರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಬಿಗ್ಬಾಸ್ ಆವರಣದಲ್ಲಿ ಹಲವು ಹಲಗೆಗಳನ್ನು ಜೋಡಿಸಲಾಗಿದೆ. ಇವುಗಳ ಮೇಲೆ ಎರಡು ಬಣ್ಣದ ವೃತ್ತಾಕಾರದ ಕಾರ್ಡ್ ಇರಿಸಲಾಗಿದೆ. ಇಬ್ಬರು ಸ್ಪರ್ಧಿಗಳು ತಮಗೆ ಸೂಚಿಸಲಾಗಿರುವ ಬಣ್ಣದ ಕಾರ್ಡ್ ಬರುವಂತೆ ಮಾಡಬೇಕು. ಒಂದು ಹಲಗೆಯಿಂದ ಮತ್ತೊಂದು ಹಲಗೆಗೆ ಹೋಗಲು ಕೋಲು ಬಳಸಿಕೊಳ್ಳಬೇಕು.

ಇದನ್ನೂ ಓದಿ: ಮಕ್ಕಳ ಪ್ರಶ್ನೆಗಳಿಗೆ ಸಮಚಿತ್ತದಿಂದ ಉತ್ತರಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್!

ಕಾವ್ಯಾ ಶೈವಾಗೆ ಹಳದಿ ಮತ್ತು ರಾಶಿಕಾಗೆ ಹಸಿರು ಕಾರ್ಡ್ ನೀಡಲಾಗಿದೆ. ಮನೆಯ ಇನ್ನುಳಿದ ಬಹುತೇಕ ಸದಸ್ಯರು ಕಾವ್ಯಾ ಅವರನ್ನು ಫೈನಲಿಸ್ಟ್ ಆಗಿ ನೋಡಲು ಇಷ್ಟಪಡುತ್ತೇವೆ ಎಂದು ಹೇಳಿದ್ದಾರೆ. ಎಲ್ಲಾ ಟಾಸ್ಕ್ಗಳಿಂದ ಹೊರಗೆ ಉಳಿದಿರುವ ಧ್ರುವಂತ್, ಆಟದ ಉಸ್ತುವಾರಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ಕನ್ನಡ ಬೆನ್ನಲ್ಲೇ ಮತ್ತೊಂದು ಬಿಗ್ ಬಾಸ್ ಶೋ ಸ್ಥಗಿತಗೊಳ್ಳುವ ಆತಂಕ, ಸ್ಪೀಕರ್ ಮುಂದೆ ಪ್ರಸ್ತಾವನೆ

ಆಟದ ಮಧ್ಯ ಕಾವ್ಯಾ ಎಲ್ಲಾ ಕಾರ್ಡ್ಗಳನ್ನು ಕೈಯಲ್ಲಿ ತೆಗೆದುಕೊಳ್ಳುತ್ತಾರೆ. ಇದು ಆಟದ ನಿಯಮದಲ್ಲಿ ಇಲ್ಲ. ನಿಮ್ಮಿಷ್ಟದಂತೆ ಆಟವ ಆಟವಾಡಿದ್ರೆ ನಾನು ಪರ್ಮಿಷನ್ ಕೊಡಲ್ಲ. ಇದು ಪೌಲ್ ಎಂದು ಧ್ರುವಂತ್ ಹೇಳುತ್ತಾರೆ. ಈ ಇಬ್ಬರ ನಡುವೆ ಆಟ ಗೆದ್ದಿದ್ದು ಯಾರು ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಇದನ್ನೂ ಓದಿ: ಅಮಿತಾಬ್ ಬಚ್ಚನ್ಗೆ ಪಂಚೆ ಗಿಫ್ಟ್ ಕೊಟ್ಟ ರಿಷಬ್ ಶೆಟ್ಟಿ, ಜಾರಿದ್ರೆ ಇಂಟರ್ನ್ಯಾಶಲ್ ಎಂದ ಬಿಗ್ ಬಿ

Source link
ಕೊನೆಗೂ ಗಿಲ್ಲಿಯೂ ಸೋತ, ಸಪೋರ್ಟ್ ಸಿಕ್ರೂ ಕಾವ್ಯಾ ಮಾಡಿಕೊಂಡ್ರಾ ಎಡವಟ್ಟು!