‘ಬಿಗ್ ಬಾಸ್’ ಮನೆಯಲ್ಲಿ ಪ್ರೀತಿ-ಪ್ರಣಯ ಸಾಮಾನ್ಯ. ಇಲ್ಲಿ ಹುಟ್ಟಿದ ಪ್ರೀತಿ ಮದುವೆ ಹಂತಕ್ಕೆ ಹೋಗೋದು ತುಂಬಾ ಕಡಿಮೆ. ಸಾಕಷ್ಟು ಇದನ್ನು ವೀಕ್ಷಿಸಲು ಗಮನ ಸೆಳೆಯುವ ಉದ್ದೇಶಕ್ಕಾಗಿ ಬಳಸುತ್ತಾರೆ. ರಾಶಿಕಾ ಶೆಟ್ಟಿ (ರಾಶಿಕಾ ಶೆಟ್ಟಿ) ಹಾಗೂ ಸೂರಜ್ ಆಪ್ತತೆ ಕೂಡ ಇದೆ ರೀತಿ ಎಂದು ಹೇಳಲಾಗದು. ಈಗ ಸೂರಜ್ ಅವರು ರಾಶಿಗೆ ಪ್ರಪೋಸ್ ಮಾಡಿದ್ದಾರೆ.
ರಾಶಿಕಾ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಗಮನ ಸೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ, ಅವರು ಆಯ್ಕೆ ಮಾಡಿಕೊಂಡ ಲವ್ ಟ್ರ್ಯಾಕ್. ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದ ಸೂರಜ್ ಸಿಂಗ್ ಜೊತೆ ಆಪ್ತತೆ ಬೆಳೆಸಿಕೊಂಡರು. ಅವರನ್ನು ನೋಡಿದ ತಕ್ಷಣ ಫ್ಲ್ಯಾಟ್ ಆಗಿದ್ದರು. ರಾಶಿಕಾ ಹಾಗೂ ಸೂರಜ್ ಆಪ್ತತೆ ದಿನ ಕಳೆದಂತೆ ಹೆಚ್ಚುತ್ತಿದೆ.
‘ಬಿಗ್ ಬಾಸ್’ ಮನೆಯಲ್ಲಿ ಜೋರಾಗಿ ಜಗಳ ನಡೆಯುತ್ತಿತ್ತು. ಅತ್ತ ರಾಶಿ ಹಾಗೂ ಸೂರಜ್ ಲೋಕದಲ್ಲಿ ಮುಳುಗಿ ಹೋಗಿದ್ದರು. ಈ ರೀತಿ ಮುಳುಗಿ ಹೋಗುವಾಗಲೇ ಸೂರಜ್ ಪ್ರಪೋಸ್ ಮಾಡಿಯೇ ಬಿಟ್ಟರು. ನೇರವಾಗಿ ‘ಐ ಲವ್ ಯೂ’ ಎಂದು ಸೂರಜ್ ಹೇಳಿದ್ದಾರೆ. ಇದನ್ನು ಕೇಳಿ ರಾಶಿಕಾ ಶಾಕ್ ಆದರು. ನನಗೆ ಅದರಲ್ಲಿ ಆಸಕ್ತಿ ಇಲ್ಲ.
ಇದನ್ನೂ ಓದಿ
ಸೂರಜ್ ಪ್ರಪೋಸ್ ಮಾಡಿದ್ದರಿಂದ ಅವರು ಒಪ್ಪಿಕೊಳ್ಳುತ್ತಾರೆ ಎಂಬುದು ಅನೇಕರ ಊಹೆಯಾಗಿದೆ. ಆದರೆ, ಅವರು ಆ ರೀತಿ ಮಾಡಿಲ್ಲ. ಈ ಮೂಲಕ ಸೂರಜ್ ಜೊತೆಗಿನ ಆಪ್ತತೆ ಕೇವಲ ಒಂದು ಗೇಮ್ ತಂತ್ರ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇದು ಅವರ ಆಟಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ತಂಡದ ರಾಶಿಗೆ ಮಣ್ಣು ಮುಕ್ಕಿಸಿದ ಗಿಲ್ಲಿ ನಟ
ಸೂರಜ್ ಅವರು ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿದರು. ಆದರೆ, ಇತ್ತೀಚೆಗೆ ಏಕೋ ಅವರು ಪ್ರೀತಿ-ಪ್ರೇಮದ ವಿಚಾರದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ರಾಶಿಕಾ ಅವರು ಪ್ರಪೋಸ್ ಮಾಡಿದ ಮೇಲೂ ಒಪ್ಪಿಕೊಂಡಿಲ್ಲ. ಹೀಗಾಗಿ, ಸೂರಜ್ ತಮ್ಮ ಆಟದ ಮೇಲೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.