ದೊಡ್ಮನೆಯಲ್ಲಿ ಭರ್ಜರಿ ಲಾಟರಿ ಹೊಡೆದ ರಕ್ಷಿತಾ ಶೆಟ್ಟಿ: ಬಹುದೊಡ್ಡ ಕನಸು ನನಸು ಮಾಡಿದ Bigg Boss!

ದೊಡ್ಮನೆಯಲ್ಲಿ ಭರ್ಜರಿ ಲಾಟರಿ ಹೊಡೆದ ರಕ್ಷಿತಾ ಶೆಟ್ಟಿ: ಬಹುದೊಡ್ಡ ಕನಸು ನನಸು ಮಾಡಿದ Bigg Boss!

ದೊಡ್ಮನೆಯಲ್ಲಿ ಭರ್ಜರಿ ಲಾಟರಿ ಹೊಡೆದ ರಕ್ಷಿತಾ ಶೆಟ್ಟಿ: ಬಹುದೊಡ್ಡ ಕನಸು ನನಸು ಮಾಡಿದ Bigg Boss!

ತಮ್ಮ ಮೀನಿನ ಅಡುಗೆಗಳಿಂದಲೇ ಪ್ರಸಿದ್ಧರಾದ ಬಿಗ್​ಬಾಸ್​ ಸ್ಪರ್ಧಿ ರಕ್ಷಿತಾ ಶೆಟ್ಟಿ,  ತಮ್ಮ ಬಹುದೊಡ್ಡ ಆಸೆಯನ್ನು ವ್ಯಕ್ತಪಡಿಸಿದ್ದರು. ಇದೀಗ ಬಿಗ್‌ಬಾಸ್, ರಕ್ಷಿತಾ ಅವರ ಈ ಕನಸನ್ನು ನನಸು ಮಾಡಿದೆ. ಏನದು ಕನಸು? ರಕ್ಷಿತಾ ಶೆಟ್ಟಿಗೆ ಲಾಟರಿ ಹೊಡೆದದ್ದೇಕೆ?

ತುಳುನಾಡಿನ ಕಣ್ಮಣಿ ಎಂದೇ ಬಿಗ್​ಬಾಸ್​ನಲ್ಲಿ ಫೇಮಸ್​ ಆಗಿರುವವರು ರಕ್ಷಿತಾ ಶೆಟ್ಟಿ (Bigg Boss Rakshita Shetty). ಅರೆಬರೆ ಕನ್ನಡದಲ್ಲಿ ಮಾತನಾಡುತ್ತಾ, ಕೆಲವೇ ದಿನಗಳಲ್ಲಿ ಅಸಂಖ್ಯ ಅಭಿಮಾನಿಗಳನ್ನು ಯುಟ್ಯೂಬ್​ನಲ್ಲಿ ಗಳಿಸಿರುವ ಖ್ಯಾತಿ ಇವರದ್ದು.

ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಹೆಚ್ಚು ಫೇಮಸ್​ ಆಗಿದ್ದೇ ಮೀನಿನ ಅಡುಗೆಗಳ ಮೂಲಕ. ಮೀನು, ಏಡಿ, ಸೀಗಡಿ ಹೀಗೆ ಸಮುದ್ರದ ಆಹಾರಗಳನ್ನು ತಮ್ಮದೇ ಆದ ರೀತಿಯಲ್ಲಿ ತೋರಿಸುತ್ತಾ, ಅವುಗಳ ಅಡುಗೆ ಮಾಡುತ್ತಾ ಫೇಮಸ್​ ಆದವರು ರಕ್ಷಿತಾ ಶೆಟ್ಟಿ.

ಬಿಗ್​ಬಾಸ್​ (Bigg Boss) ಮನೆಯಲ್ಲಿ ಕೂಡ ಅವರು ಅಡುಗೆಗೇ ಫೇಮಸ್ಸು. ಎಷ್ಟೇ ಸುಸ್ತಾದರೂ ಅಡುಗೆ ಮಾಡಿ ಬಡಿಸುತ್ತಾಳೆ ಎಂದೇ ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿ ಬಂದವರು ಹೇಳುವುದು ಉಂಟು. ಆದ್ದರಿಂದ ಅಡುಗೆಗೂ ರಕ್ಷಿತಾಗೂ ಎಲ್ಲಿಲ್ಲದ ನಂಟು.

ಬಿಗ್​ಬಾಸ್​ ಮನೆಯಲ್ಲಿ ಕೆಲವು ದಿನಗಳ ಹಿಂದೆ ಬಹುದೊಡ್ಡ ಆಸೆಯನ್ನು ಅವರು ವ್ಯಕ್ತಪಡಿಸಿದ್ದರು. ಅದೇನೆಂದರೆ ಬಿಗ್​ಬಾಸ್​ಗೆ ಬಂದಾಗಿನಿಂದಲೂ ಮೀನಿನ ಅಡುಗೆ ತಿಂದಿರಲಿಲ್ಲ ರಕ್ಷಿತಾ. ಇದೇ ಕಾರಣಕ್ಕೆ ಉಳಿದವರೆಲ್ಲರೂ ಬಿಗ್​ಬಾಸ್ ಗೆಲ್ಲುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದರೆ, ರಕ್ಷಿತಾ ಮಾತ್ರ ನನಗೇನಾದರೂ ಒಂದು ವರವನ್ನು ಬಿಗ್​ಬಾಸ್​ ಕೇಳಿದ್ರೆ ಮೀನಿನ ಸಾಂಬಾರ್​ ಕೇಳುತ್ತೇನೆ ಎಂದಿದ್ದರು.

ಇದೀಗ ಆ ಬಹುದೊಡ್ಡ ಆಸೆಯನ್ನು ಬಿಗ್​ಬಾಸ್​ ನೆರವೇರಿಸಿದೆ. ರಕ್ಷಿತಾ ಶೆಟ್ಟಿ ಅವರ ಅಮ್ಮ ಬಿಗ್​ಬಾಸ್​​ ಮನೆಗೆ ಎಂಟ್ರಿ ಕೊಟ್ಟಿದ್ದು, ಮೀನಿನ ಅಡುಗೆಯನ್ನು ಮಾಡಿಕೊಂಡು ಬಂದಿದ್ದಾರೆ. ಇದನ್ನು ನೋಡಿ ರಕ್ಷಿತಾ ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ಮೀನಿನ ಅಡುಗೆಯ ಬಗ್ಗೆ ಯುಟ್ಯೂಬ್​ ಚಾನೆಲ್​ಗೆ ವ್ಲಾಗ್ ಮಾಡುವಂತೆ ಇಲ್ಲಿಯೂ ಮಾಡಲು ಬಿಗ್​ಬಾಸ್​ ಅವರಿಗೆ ಅವಕಾಶವನ್ನೂ ಕಲ್ಪಿಸಿತು.

ಒಟ್ಟಿನಲ್ಲಿ ಮೀನಿನ ಅಡುಗೆ ತಿಂದ ಮೇಲೆ ರಕ್ಷಿತಾ ಶೆಟ್ಟಿ ಫುಲ್ ಖುಷ್​ ಆಗಿದ್ದಾರೆ. ಬಿಗ್​ಬಾಸ್​ ಗೆದ್ದಷ್ಟೇ ಖುಷಿ ಅವರ ಮೊಗದಲ್ಲಿ ಕಾಣಬಹುದಾಗಿದೆ.

Source link

Leave a Reply

Your email address will not be published. Required fields are marked *