ವಿಡಿಯೋ ಹಾಕಿ ಮೂರೇ ಗಂಟೆಗಳಲ್ಲಿ Bigg Boss ರಘುಗೆ ಬಂದೇ ಬಿಟ್ಟು ಯುಟ್ಯೂಬ್​ ದುಡ್ಡು! ಸಿಕ್ಕಿತು ಬೆಳ್ಳಿ ಬಟನ್​

ವಿಡಿಯೋ ಹಾಕಿ ಮೂರೇ ಗಂಟೆಗಳಲ್ಲಿ Bigg Boss ರಘುಗೆ ಬಂದೇ ಬಿಟ್ಟು ಯುಟ್ಯೂಬ್​ ದುಡ್ಡು! ಸಿಕ್ಕಿತು ಬೆಳ್ಳಿ ಬಟನ್​

ವಿಡಿಯೋ ಹಾಕಿ ಮೂರೇ ಗಂಟೆಗಳಲ್ಲಿ Bigg Boss ರಘುಗೆ ಬಂದೇ ಬಿಟ್ಟು ಯುಟ್ಯೂಬ್​ ದುಡ್ಡು! ಸಿಕ್ಕಿತು ಬೆಳ್ಳಿ ಬಟನ್​
ಬಿಗ್​ಬಾಸ್​ ಖ್ಯಾತಿಯ ಮ್ಯೂಟಂಟ್​ ರಘು ತಮ್ಮ ದಶಕಗಳ ಕನಸಾಗಿದ್ದ ‘ಮ್ಯೂಟೆಂಟ್​ ಶೆಫ್’​ ಯುಟ್ಯೂಬ್​ ಚಾನೆಲ್ ಆರಂಭಿಸಿದ್ದಾರೆ. ಈ ಚಾನೆಲ್, ವಿಡಿಯೋ ಹಾಕಿದ ಮೂರೇ ಗಂಟೆಗಳಲ್ಲಿ ಮಾನಿಟೈಸ್​ ಆಗಿದ್ದು, ಕೆಲವೇ ವಾರಗಳಲ್ಲಿ ಒಂದು ಲಕ್ಷ ಸಬ್​ಸ್ಕ್ರೈಬರ್​ಗಳನ್ನು ಪಡೆದು ಸಿಲ್ವರ್​ ಬಟನ್​ ಗಳಿಸಿದೆ.
ಕೆಲವೊಮ್ಮೆ ಅದೃಷ್ಟ ಅಂದರೆ ಹಾಗೆನೇ. ಬಂದರೆ ಒಂದರ ಹಿಂದೆ ಒಂದರಂತೆ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ. ಇದಕ್ಕೀಗ ತಾಜಾ ಉದಾಹರಣೆ ಬಿಗ್​ಬಾಸ್​ ಖ್ಯಾತಿಯ ಮ್ಯೂಟಂಟ್​ ರಘು (Bigg Boss Mutant Raghu)

ಬಿಗ್​ಬಾಸ್​ನಲ್ಲಿ ಕೊನೆಯ ವಾರದವರೆಗೆ ಉಳಿಯುವ ಅವಕಾಶ ಸಿಗದಿದ್ದರೂ ಅಲ್ಲಿಂದ ಬಂದ ಮೇಲೆ ಸೆಲೆಬ್ರಿಟಿಯಾಗಿದ್ದಾರೆ. ದಶಕಗಳ ಕನಸನ್ನು ನನಸು ಮಾಡಿಕೊಂಡು  ಕಿಚನ್​ ಯುಟ್ಯೂಬ್​ ಚಾನೆಲ್​ ಓಪನ್​ ಮಾಡಿದ್ದರು. ಮಂಗಳೂರು ಪುಟ್ಟಿ ರಕ್ಷಿತಾ ಶೆಟ್ಟಿ ಕೂಡ ಇದಕ್ಕೆ ಸಾಥ್​ ಕೊಟ್ಟಿದ್ದರು.

ಇದೀಗ ಚಾನೆಲ್​ ಆರಂಭಿಸಿ ಕೆಲವೇ ವಾರವಾಗಿದೆ. ಆದರೆ ವಾರ ದೂರದ ಮಾತು. ವಿಡಿಯೋ ಹಾಕಿ ಮೂರೇ ಗಂಟೆಗಳಲ್ಲಿ ಮಾನಿಟೈಸ್​ ಆಗಿದೆ ಅರ್ಥಾತ್​ ದುಡ್ಡು ಬರಲು ಆರಂಭವಾಗಿದೆ ಎಂದು ರಘು ಅವರು ಸೋಷಿಯಲ್​​ ಮೀಡಿಯಾದಲ್ಲಿ ಹೇಳಿದ್ದಾರೆ.

4-5 1 ಲಕ್ಷ ಸಬ್​ಸ್ಕೈಬ್​ ಆಗಿದ್ದಾರೆ. ಇನ್ನೂ ನಂಬಲು ಆಗ್ತಿಲ್ಲ. ಇಷ್ಟೊಂದು ಪ್ರೀತಿ ನನಗೆ ಸಿಗತ್ತೆ ಎಂದು ಅಂದುಕೊಂಡಿರಲಿಲ್ಲ. ಯುಟ್ಯೂಬ್​ ಚಾನೆಲ್​ ಆರಂಭಿಸಬೇಕು ಎನ್ನುವುದು 10 ವರ್ಷಗಳ ಕನಸಾಗಿತ್ತು. ಅದು ಈಡೇರಿ ಇಷ್ಟು ಬೇಗ ಇವೆಲ್ಲಾ ಆಗಿ ಹೋಗಿದೆ ಎಂದು ರಘು ಹೇಳಿಕೊಂಡಿದ್ದಾರೆ.

ಒಂದು ಲಕ್ಷ ಸಬ್​ಸ್ಕ್ರೈಬರ್​ ಆಗಿರುವ ಕಾರಣಕ್ಕೆ ಯುಟ್ಯೂಬ್​ನವರು ಸಿಲ್ವರ್​ ಬಟನ್​ ಕೊಟ್ಟಿದ್ದಾರೆ ಎಂದಿರುವ ರಘು ಅದನ್ನು ಓಪನ್​ ಮಾಡಿ ತೋರಿಸಿದರು. ಮ್ಯೂಟೆಂಟ್​ ಶೆಫ್​ ಎಂದು ಬರೆದಿದ್ದಾರೆ. ಇದು ನನ್ನ ದೊಡ್ಡ ಅಚೀವ್​ಮೆಂಟ್​ ಎಂದಿದ್ದಾರೆ ರಘು.

ನನ್ನ ಮುಂದಿನ ಗೋಲ್​ ಬಂದು 10 ಲಕ್ಷ ಸಬ್​ಸ್ಕ್ರೈಬರ್​ ಮಾಡುವುದು. ಖಂಡಿತ ನಾನು ಅದನ್ನು ಅಚೀವ್​ ಮಾಡುತ್ತೇನೆ ಎಂದು ಗೊತ್ತಿದೆ. ನಿಮ್ಮ ಪ್ರೀತಿ, ಸಪೋರ್ಟ್​ ಹೀಗೆಯೇ ಇರಲಿ ಎಂದಿದ್ದಾರೆ. ​

Source link

Leave a Reply

Your email address will not be published. Required fields are marked *