Bigg Boss ರಕ್ಷಿತಾ ಶೆಟ್ಟಿ- ರಘು Fish Fry ಮಾಡುವಾಗಿ ಧಗ್ಗನೆ ಬಂದ ಬೆಂಕಿ : ಶಾಕಿಂಗ್​ ವಿಡಿಯೋ ವೈರಲ್

Bigg Boss ರಕ್ಷಿತಾ ಶೆಟ್ಟಿ- ರಘು Fish Fry ಮಾಡುವಾಗಿ ಧಗ್ಗನೆ ಬಂದ ಬೆಂಕಿ : ಶಾಕಿಂಗ್​ ವಿಡಿಯೋ ವೈರಲ್

Bigg Boss ರಕ್ಷಿತಾ ಶೆಟ್ಟಿ- ರಘು Fish Fry ಮಾಡುವಾಗಿ ಧಗ್ಗನೆ ಬಂದ ಬೆಂಕಿ : ಶಾಕಿಂಗ್​ ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಕ್ಷಿತಾ ಶೆಟ್ಟಿ ಮತ್ತು ಮ್ಯೂಟಂಟ್ ರಘು, ಫಿಶ್ ಫ್ರೈ ಮಾಡುವ ವಿಡಿಯೋವೊಂದನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ, ರಘು ಮೀನು ಫ್ರೈ ಮಾಡುವಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡು ರಕ್ಷಿತಾ ಗಾಬರಿಗೊಂಡಿದ್ದು, ರಘು ಅವರ ಕಾಲಿಗೆ ಬೆಂಕಿಯ ಕಿಡಿ ತಗುಲಿದೆ.
ಬಿಗ್​ಬಾಸ್​ ರಕ್ಷಿತಾ ಶೆಟ್ಟಿ (Bigg Boss Rakshita Shetty) ಮತ್ತು ಮ್ಯೂಟಂಟ್​ ರಘು ಅವರ ಜೊತೆಗೂಡಿ ಸೋಷಿಯಲ್​​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ರಘು ಅವರು ಅತ್ಯಂತ ಅಲ್ಪ ಅವಧಿಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಲಕ್ಷ ಲಕ್ಷ ಫಾಲೋವರ್ಸ್​ ಅನ್ನು ಗಳಿಸುವಲ್ಲಿ ರಕ್ಷಿತಾ ಅವರ ಪಾಲೂ ಬಹು ದೊಡ್ಡದು ಇದೆ.

ರಕ್ಷಿತಾ ಶೆಟ್ಟಿ ಅವರು ಇದಾಗಲೇ ತಮ್ಮ ಯುಟ್ಯೂಬ್​ ಚಾನೆಲ್​ ಮೂಲಕ ಸಕತ್​ ಫೇಮಸ್​ ಆಗಿದ್ದು, ಒಳ್ಳೆಯ ಆದಾಯವನ್ನೂ ಗಳಿಸುತ್ತಿದ್ದಾರೆ. ಇದೀಗ ರಘು ಅವರ ಜೊತೆಗೂಡಿಯೂ ವಿಡಿಯೋ ಮಾಡುವ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸುತ್ತಿದ್ದಾರೆ.

ರಕ್ಷಿತಾ ಶೆಟ್ಟಿ ಫ್ಯಾನ್ಸ್​ಗೆ ತಿಳಿದಿರುವಂತೆ, ಅವರು ಮೀನಿನ ಅಡುಗೆಯಲ್ಲಿ ಸಕತ್​ ಫೇಮಸ್​. ಅದೇ ರೀತಿ ರಘು ಅವರು ಕೂಡ ಇದಾಗಲೇ ತಮ್ಮ ಚಾನೆಲ್​ನಲ್ಲಿ ಕೆಲವು ನಾನ್​ವೆಜ್​ ಡಿಶ್​ ಮಾಡಿ, ನಾನ್​ವೆಜ್​ ಪ್ರಿಯರ ಬಾಯಲ್ಲಿ ನೀರೂರಿಸಿದ್ದಾರೆ.

ಆದರೆ, ಇದೀಗ ಇಬ್ಬರೂ ಸೇರಿ ಫಿಶ್​ ಫ್ರೈ ಮಾಡುವಾಗಿನ ಶಾಕಿಂಗ್​ ವಿಡಿಯೋ ಒಂದು ವೈರಲ್​ ಆಗಿದೆ. ಇದರಲ್ಲಿ ರಘು ಅವರು ಮೀನನ್ನು ಹೆಂಚಿನ ಮೇಲೆ ಹಾಕಿ ಫ್ರೈ ಮಾಡುವ ಸಮಯದಲ್ಲಿ ಬೆಂಕಿ ಭುಗ್​ ಎಂದು ಕೆನ್ನಾಲಿಗೆ ಚಾಚಿದೆ.

ಸಾಮಾನ್ಯವಾಗಿ ಇಂಥ ದೃಶ್ಯಗಳು ಹೋಟೆಲ್​ಗಳಲ್ಲಿ ಮಾಮೂಲು. ಆದರೆ ಈ ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯ ನೋಡುಗರನ್ನು ಶಾಕ್​ಗೆ ತಳ್ಳುತ್ತದೆ. ಬೆಂಕಿಯನ್ನು ನೋಡಿ ರಕ್ಷಿತಾ ಶೆಟ್ಟಿ ಗಾಬರಿಬಿದ್ದು ಹೋಗಿದ್ದಾರೆ.

ರಘು ಅವರು ವಿಚಲಿತರಾಗದೇ ಇದ್ದರೂ, ಅವರ ಕಾಲಿಗೆ ಬೆಂಕಿಯ ಕಿಡಿ ತಗುಲಿರುವುದು ಈ ವಿಡಿಯೋದಲ್ಲಿ ತಿಳಿಯುತ್ತದೆ. Ragu anna almost got burnt ಎಂದು ರಘು ಅವರು ಇದಕ್ಕೆ ಶೀರ್ಷಿಕೆ ಕೊಟ್ಟಿರುವುದರಿಂದ ಅಭಿಮಾನಿಗಳು ಆತಂಕದಲ್ಲಿ ಈ ವಿಡಿಯೋ ನೋಡಿದ್ದಾರೆ.

Source link

Leave a Reply

Your email address will not be published. Required fields are marked *