Headlines

ರೀಲ್ಸ್ ಮಾಡಿ ಮತ್ತೆ ಇಕ್ಕಟ್ಟಿಕೆ ಸಿಲುಕಿದ ರಜತ್; ಮತ್ತೊಂದು ದೂರು ದಾಖಲು

ರೀಲ್ಸ್ ಮಾಡಿ ಮತ್ತೆ ಇಕ್ಕಟ್ಟಿಕೆ ಸಿಲುಕಿದ ರಜತ್; ಮತ್ತೊಂದು ದೂರು ದಾಖಲು


ಬಿಗ್ ಬಾಸ್ ಸ್ಪರ್ಧಿ ಹಾಗೂ ನಟ ರಜತ್ (ರಜತ್) ಅವರು ಈಗ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಮೊದಲು ಮಚ್ಚು ಹಿಡಿದು ರೀಲ್ಸ್ ಮಾಡಿ ಅವರು ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು. ಈಗ ಅವರು ಮತ್ತೆ ರೀಲ್ಸ್ ಮಾಡಿದ ಕಾರಣಕ್ಕೆ ತೊಂದರೆ ಅನುಭವಿಸಿದೆ. ಮೈಸೂರು ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ರಜತ್ ವಿಡಿಯೋ ಮಾಡಿದ್ದಾರೆ. ಈ ವೇಳೆ ಅವರು ಸಿಗರೇಟ್ ಹಚ್ಚಿದ್ದಾರೆ. ಇದರಿಂದ ಅವರ ವಿರುದ್ಧ ದೂರು ದಾಖಲಾಗಿದೆ.

ಇತ್ತೀಚೆಗೆ ರಜತ್ ಅವರು ವಿಡಿಯೋ ಒಂದನ್ನು ಮಾಡಿದರು. ಈ ವಿಡಿಯೋದಲ್ಲಿ ಅವರು ರೆಟ್ರೋ ಸ್ಟೈಲ್ ಕಾರಲ್ಲಿ ಬರುತ್ತಾರೆ. ಈ ವೇಳೆ ಅವರಿಗೆ ಸಿಗರೇಟ್ ಕೂಡ ಹಚ್ಚುತ್ತಾರೆ. ಈ ವಿಡಿಯೋ ಶೂಟ್ ಆಗಿದ್ದು ಮೈಸೂರು ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎದುರು. ಈ ಸಂಬಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನಲ್ಲಿ ಏನಿದೆ?

ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಈ ದೂರನ್ನು ತಿಳಿಸಿದ್ದಾರೆ. ರಾಜತ್ ವಿರುದ್ದ ಎಫ್ ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ. ‘ರಜತ್ ಪಾರಂಪರಿಕ ಕಟ್ಟಡದ ಮುಂದೆ ಅನುಮತಿ ಪಡೆಯದೆ ವಿಡಿಯೋ ಮಾಡಿದ್ದಾರೆ. ಸಿಗರೇಟ್ ಹಿಡಿದು ಇಳಿದಿದ್ದಾರೆ. ಇದು ಅವರ ಫಾಲೋರ್ಸ್‌ಗೆ ಕೆಟ್ಟ ಸಂದೇಶವನ್ನು ನೀಡಿದೆ. ಈ ಮೊದಲು ಕೂಡ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ಎಫ್ ಐಅರ್ದಿತ್ತು. ಈಗ ಮತ್ತೆ ಅದೇ ರೀತಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಕೋರಲಾಗಿದೆ.

ಇದನ್ನೂ ಓದಿ: ನಿಮಗೆ ಬೇಕಾದವರಿಗೆ ಕಿಚ್ಚನ ಚಪ್ಪಾಳೆ ಕೊಡೋಕೆ ಆಗತ್ತಾ? ರಜತ್ ಕಿಶನ್ ಖಡಕ್ ಪ್ರಶ್ನೆ

ಹಿಂದಿನ ಪ್ರಕರಣ

ಕಲರ್ಸ್ ರಿಯಾಲಿಟಿ ಶೋ ಒಂದರಲ್ಲಿ ರಜತ್ ಹಾಗೂ ವಿನಯ್ ಗೌಡ ಭಾಗಿ ಆಗಿದ್ದರು. ಶೋ ಶೂಟಿಂಗ್ ಮುಗಿದ ಬಳಿಕ ಸ್ಟುಡಿಯೋ ಹೊರಗೆ ವಿನಯ್ ಹಾಗೂ ರಜತ್ ನಿಜವಾದ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ಸಂಬಂಧ ಎಫ್ ಐಆರ್ ದಾಖಲಿಸಿ, ಇಬ್ಬರನ್ನೂ ಬಂಧಿಸಲಾಗಿದೆ. ಆ ಬಳಿಕ ಜಾಮೀನು ಪಡೆದು ಇಬ್ಬರೂ ಹೊರ ಬಂದಿದ್ದರು. ನಂತರ ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗದ ಕಾರಣ ಅವರನ್ನು ಮತ್ತೆ ಬಂಧಿಸಲಾಯಿತು. ಈ ಪ್ರಕರಣದ ನೆನಪು ಮಾಸುವ ಮುನ್ನವೇ ಅವರಿಗೆ ಮತ್ತೊಂದು ತೊಂದರೆ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *