Bigg Boss ಹಬ್ಬದ ಬಗ್ಗೆ ರಕ್ಷಿತಾ ಶೆಟ್ಟಿ ಕಿಡಿ: ಗಿಲ್ಲಿ-ಕಾವ್ಯಾ ಜಪ ಮಾಡ್ತಿದ್ರು; ನಾನ್ ಮಾತಾಡಿದ್ರೆ ಕಿವಿ ಮುಚ್ಕೊಂಡ್ರು!

Bigg Boss ಹಬ್ಬದ ಬಗ್ಗೆ ರಕ್ಷಿತಾ ಶೆಟ್ಟಿ ಕಿಡಿ: ಗಿಲ್ಲಿ-ಕಾವ್ಯಾ ಜಪ ಮಾಡ್ತಿದ್ರು; ನಾನ್ ಮಾತಾಡಿದ್ರೆ ಕಿವಿ ಮುಚ್ಕೊಂಡ್ರು!

Bigg Boss ಹಬ್ಬದ ಬಗ್ಗೆ ರಕ್ಷಿತಾ ಶೆಟ್ಟಿ ಕಿಡಿ: ಗಿಲ್ಲಿ-ಕಾವ್ಯಾ ಜಪ ಮಾಡ್ತಿದ್ರು; ನಾನ್ ಮಾತಾಡಿದ್ರೆ ಕಿವಿ ಮುಚ್ಕೊಂಡ್ರು!

ಬಿಗ್​ಬಾಸ್​ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರು ‘ದೊಡ್ಮನೆ ಹಬ್ಬ’ ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ಆ್ಯಂಕರ್ ತಮಗೆ ಮಾತನಾಡಲು ಅವಕಾಶ ನೀಡದೆ, ಗಿಲ್ಲಿ ಮತ್ತು ಕಾವ್ಯಾ ಅವರಿಗೆ ಮಾತ್ರ ಮಣೆ ಹಾಕಿದ್ದಾರೆ ಎಂದು ರಕ್ಷಿತಾ ನೇರ ಆರೋಪ ಮಾಡಿದ್ದಾರೆ.

ಬಿಗ್​ಬಾಸ್​ 12 (Bigg Boss 12) ಹಿಂದೆಂದಿನ ಬಿಗ್​ಬಾಸ್​ಗಿಂತಲೂ ಸಕತ್​ ಸದ್ದು ಮಾಡುತ್ತಿದೆ. ಪ್ರತಿ ಬಾರಿ, ಒಂದಿಷ್ಟು ದಿನ ಆದ ಮೇಲೆ ಆ ಸೀಸನ್​ ಹವಾ ಕಡಿಮೆಯಾದರೆ ಈ ಬಾರಿ ಮಾತ್ರ ಇನ್ನೂ ಅದರ ಸ್ಪರ್ಧಿಗಳ ಹವಾ ಜೋರಾಗಿಯೇ ಇದೆ. ಅದರಲ್ಲಿ ಒಬ್ಬರು ರಕ್ಷಿತಾ ಶೆಟ್ಟಿ (Bigg Boss Rakshita Shetty).

ಬಿಗ್​ಬಾಸ್​ ಮುಗಿದ ಮೇಲೆ ಈ ಸೀಸನ್​ನ ಎಲ್ಲಾ ಸ್ಪರ್ಧಿಗಳನ್ನು ಒಟ್ಟುಗೂಡಿಸಿ ಬಿಗ್​ಬಾಸ್​ ದೊಡ್ಮನೆ ಹಬ್ಬ ಮಾಡಲಾಗಿತ್ತು. ಇದರಲ್ಲಿ ಸ್ಪರ್ಧಿಗಳು ಸಕತ್​ ಮೋಜು ಮಸ್ತಿ ಮಾಡಿದ್ದರು. ಆದರೆ ಈ ಷೋ ಬಗ್ಗೆ ಇದೀಗ ರಕ್ಷಿತಾ ಶೆಟ್ಟಿ ಗರಂ ಆಗಿದ್ದಾರೆ. ಸಿಕ್ಕಾಪಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಂಪೂರ್ಣ ನ್ಯೂಸ್’ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ, ರಕ್ಷಿತಾ ಅವರು ಆ್ಯಂಕರ್​ ವಿರುದ್ಧವೇ ನೇರ ಆರೋಪ ಮಾಡಿದ್ದಾರೆ. ಅಲ್ಲಿ ಇದ್ದವರು ಗಿಲ್ಲಿ-ಕಾವ್ಯಾ ಜಪ ಮಾಡುತ್ತಿದ್ದರು. ಅವರಿಗೆ ಮಾತ್ರ ಮಾತನಾಡಲು ಅವಕಾಶ ಕಲ್ಪಸಿದರು. ನನಗೂ ಮಾತನಾಡುವುದು ತುಂಬಾ ಇತ್ತು. ಆದರೆ ನಾನು ಮಾತನಾಡಲು ಹೋದಾಗಲೆಲ್ಲಾ ಬ್ರೇಕ್​ ಹಾಕುತ್ತಿದ್ದರು ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಆ್ಯಂಕರ್​ ಅವರು ನನಗೆ ಮಾತಾಡೋಕೆ ಅವಕಾಶ ನೀಡಲಿಲ್ಲ.ಬರೀ ಗಿಲ್ಲಿ ಮತ್ತು ಕಾವ್ಯಾಗೆ ಮಾತ್ರ ನೀಡುತ್ತಿದ್ದರು. ನಾವು ಮಾತ್ರ ಸುಮ್ಮನೆ ನಿಂತುಕೊಂಡಿದ್ವಿ. ನಮ್ಮ ಮಾತು ಕೇಳಲಿಲ್ಲ. 10 ನಿಮಿಷ ಸುಮ್ನೇ ಇರಬಾಕೇಯ್ತು ಎಂದು ಕೋಪಗೊಂಡಿರುವ ರಕ್ಷಿತಾ ಶೆಟ್ಟಿ, ತಾವು ಮಾತನಾಡಲು ಹೋದಾಗ ಇದು ನಾಮಿನೇಷನ್​ ಅಲ್ಲ ಅನ್ನುತ್ತಿದ್ದ ಗಿಲ್ಲಿ ನಟನ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದಾರೆ.

ನನಗಷ್ಟೇ ಅಲ್ಲ, ಕರಿಬಸಪ್ಪ ಅವರು ಮಾತನಾಡುವಾಗ ಕೂಡ ನಿಮ್ಮ ಮೋಟಿವೇಷನ್ ಸಾಕು ಅಂದರು. ನಾವು ಮಾತಾಡುವಾಗ ಕಿವಿ ಮುಚ್ಚಿಕೊಳ್ತಿದ್ರು. ಆದರೆ ಗಿಲ್ಲಿ – ಕಾವ್ಯ ಮಾತಾಡೋವಾಗ ಸಮಸ್ಯೆ ಆಗಲಿಲ್ಲ. ಹೀಗೆ ಮಾಡಿದ್ದು ಸರಿನಾ ಎಂದು ಪ್ರಶ್ನಿಸಿದ್ದಾರೆ.

ಗಿಲ್ಲಿ, ಕಾವ್ಯಾ ಜೊತೆ ಮಾತನಾಡಲಿ ಸಮಸ್ಯೆ ಇಲ್ಲ. ಆದರೆ ನಾವು 10 ನಿಮಿಷ ಸುಮ್ನೆ ನಿಂತಿದ್ದೀವಿ. ನಮಗೂ ಮಾತನಾಡೋಕೆ ಇತ್ತು. ಅದಕ್ಕೆ ಬೇಸರವಾಯಿತು ಎಂದು ರಕ್ಷಿತಾ ತಿಳಿಸಿದ್ದಾರೆ. "ನಾನು ಮತ್ತು ಕರಿಬಸಪ್ಪ ಕೊಂಚ ಹೆಚ್ಚು ಮಾತನಾಡ್ತೀವಿ. ಆ ರೀತಿ ಮಾತನಾಡುವಾಗ ಕಿವಿ ಮುಚ್ಚಿಕೊಳ್ಳುವುದು, ಕೆಳಗೆ ಕೂರುವುದು ಹೀಗೆ ಏನೇನೊ ಮಾಡ್ತಿದ್ರು. ಅವರಿಬ್ಬರು ಮಾತನಾಡುವಾಗ ಸಮಸ್ಯೆ ಇಲ್ವಾ?" ಎಂದು ರಕ್ಷಿತಾ ಪ್ರಶ್ನಿಸಿದ್ದಾರೆ.

Source link

Leave a Reply

Your email address will not be published. Required fields are marked *