ಬಿಗ್ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ತಮ್ಮ ಅರೆಬರೆ ಕನ್ನಡದಿಂದಲೇ ಸದಾ ಸುದ್ದಿಯಲ್ಲಿದ್ದು, ಕರಿಬಸಪ್ಪ ಹಾಗೂ ಹಾಡಿನ ಸಾಲುಗಳ ನಂತರ ಇದೀಗ ವರ್ತೂರು ಸಂತೋಷ್ ಅವರ ಹೆಸರನ್ನೂ ಬದಲಿಸಿಬಿಟ್ಟಿದ್ದಾರೆ. ಅಯ್ಯೋ ಅವರ ಹೆಸರಿಗೆ ಕಳಂಕ ತಂದ್ಯಾ ಕೇಳ್ತಿದ್ದಾರೆ ಫ್ಯಾನ್ಸ್.

ಅರೆಬರೆ ಕನ್ನಡದಿಂದಲೇ ಲಕ್ಷಾಂತರ ಮಂದಿಗೆ ಹುಚ್ಚು ಹಿಡಿಸಿರುವ, ಅಪಾರ ಅಭಿಮಾನಿಗಳನ್ನು ಪಡೆದಿರುವ ಮಂಗಳೂರು ಪುಟ್ಟಿ ಎಂದೇ ಫೇಮಸ್ ಆದವರು ಬಿಗ್ಬಾಸ್ ರಕ್ಷಿತಾ ಶೆಟ್ಟಿ (Bigg Boss Rakshita Shetty).

ಈಕೆ ಮಾತನಾಡಲು ಶುರು ಮಾಡಿದ್ರು ಎಂದರೆ, ಅದನ್ನು ಜನರು ಫುಲ್ ಕೇಳದೇ ಇರುವುದೇ ಇಲ್ಲ. ಏಕೆಂದರೆ, ಏನೋ ಹೇಳಲು ಹೋಗಿ ಇನ್ನೇನೋ ಹೇಳಿ, ಅಲ್ಲೊಂದು ತಮಾಷೆ ತಂದಿಡುವಲ್ಲಿ ರಕ್ಷಿತಾದು ಎತ್ತಿದ ಕೈ. ಕನ್ನಡ ಸರಿಯಾಗಿ ಬರದ ಕಾರಣದಿಂದಾಗಿ ರಕ್ಷಿತಾ ಆಡುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತದೆ.

ಈ ಹಿಂದೆ ಬಿಗ್ಬಾಸ್ನ ಕರಿಬಸಪ್ಪ ಅವರಿಗೆ ಕರಿಬಸೊಪ್ಪು ಹೇಳುವ ಮೂಲಕ, ಈಗ ಕರಿಬಸಪ್ಪ ಅವರನ್ನು ಎಲ್ಲರೂ ಕರಿಬೇವಿನಸೊಪ್ಪು ಎಂದೇ ಕರೆಯುವಂತೆ ಮಾಡಿರೋರು ಇದೇ ರಕ್ಷಿತಾ. ಬಿಗ್ಬಾಸ್ ಮುಗಿದ ಮೇಲೂ ನನ್ನನ್ನು ಜನರು ನೆನಪಿಸಿಕೊಳ್ಳುವಂತೆ ರಕ್ಷಿತಾ ಮಾಡಿರೋದಕ್ಕೆ ಥ್ಯಾಂಕ್ಸ್ ಎಂದು ಕರಿಬಸಪ್ಪ ತಮಾಷೆಯನ್ನೂ ಮಾಡಿದ್ದರು.

ಅಷ್ಟೇ ಅಲ್ಲದೇ, ಈಚೆಗೆ ವೇದಿಕೆಯ ಮೇಲೆ, ರಕ್ಷಿತಾ ಶೆಟ್ಟಿ (Bigg Boss Rakshita Shetty) ಸೇವಂತಿಯೇ ಸೇವಂತಿಯೇ ಹಾಡಿನಲ್ಲಿ ಮಲ್ಲಿಗೆಗಿಂತ ಬಲು ಅಂದ ನೀನು ಎಂದು ವೇದಿಕೆ ಮಾಡಿ ಹಾಡುವಾಗ ರಕ್ಷಿತಾ ಶೆಟ್ಟಿ, ಮಲ್ಲಿಗೆಗಿಂತ ಹನುಮಂತ ನೀನು ಎಂದಿದ್ದರು. ಇದು ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇದೆ.

ಬಿಗ್ಬಾಸ್ 12 (Bigg Boss 12) ರ ರನ್ನರ್ ಅಪ್ಗೆ 2 ಲಕ್ಷ ರೂಪಾಯಿ ಕೊಡುವುದಾಗಿ ಬಿಗ್ಬಾಸ್ ಖ್ಯಾತಿಯ ವರ್ತೂರು ಸಂತೋಷ್ ((Bigg Boss Varthur Santhosh)) ಘೋಷಣೆ ಮಾಡಿದಂತೆ ಅದನ್ನು ರಕ್ಷಿತಾ ಅವರಿಗೆ ಕೊಡಲು ಆಹ್ವಾನಿಸಿದ್ದಾರೆ. ಇದರ ಬದಲು ಎರಡು ಹಳ್ಳಿಕಾರ್ ಹಸುಗಳನ್ನು ನೀಡುವಂತೆ ರಕ್ಷಿತಾ ಕೇಳಿದ್ದಾರೆ ಎನ್ನಲಾಗಿದೆ.

ಅದೇನೇ ಇದ್ದರೂ, ಇದೀಗ ರಕ್ಷಿತಾ ಶೆಟ್ಟಿ ವರ್ತೂರು ಸಂತೋಷ್ ಅವರ ಹೆಸರಿಗೂ ಕಳಂಕ ತಂದುಬಿಟ್ಟಿದ್ದಾರೆ. ಹಾಗೆಂದು ರಕ್ಷಿತಾ ಕೆಟ್ಟದ್ದೇನೂ ಮಾಡಿಲ್ಲ ಮತ್ತೆ. ಸಂದರ್ಶನವೊಂದರಲ್ಲಿ ವರ್ತೂರು ಸಂತೋಷ್ ಎನ್ನುವ ಬದಲು ವರ್ತೂರು ಸಂತೂರು ಎಂದಿದ್ದಾರೆ. ಇದೀಗ ಸಂತೂರ್ ಸೋಪಿನ ಜಾಹೀರಾತಿನ ಜೊತೆ ವರ್ತೂರು ಅವರ ವಿಡಿಯೋ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ರಕ್ಷಿತಾ ಶೆಟ್ಟಿ ಇನ್ಯಾರ ಹೆಸರುಗಳನ್ನು ಬದಲಿಸ್ತಾರೋ ಗೊತ್ತಿಲ್ಲ!

Source link
ಪ್ರೀತಿಯಿಂದ 2 ಲಕ್ಷ ಕೊಟ್ಟ ವರ್ತೂರು ಸಂತೋಷ್ ಹೆಸರಿಗೇ ಕಳಂಕ ತರೋದಾ Rakshita Shetty?