Headlines

ವರ್ತೂರು ಸಂತೋಷ್​ರಿಂದ ಹಣನೇ ತಗೊಂಡಿಲ್ಲ, ಹಿಂಗ್​ ಕೇಳಿದ್ರೆ ಎಂತಾ ಹೇಳೋದು? Rakshita Shetty ಬೇಸರ

ವರ್ತೂರು ಸಂತೋಷ್​ರಿಂದ ಹಣನೇ ತಗೊಂಡಿಲ್ಲ, ಹಿಂಗ್​ ಕೇಳಿದ್ರೆ ಎಂತಾ ಹೇಳೋದು? Rakshita Shetty ಬೇಸರ

ವರ್ತೂರು ಸಂತೋಷ್​ರಿಂದ ಹಣನೇ ತಗೊಂಡಿಲ್ಲ, ಹಿಂಗ್​ ಕೇಳಿದ್ರೆ ಎಂತಾ ಹೇಳೋದು? Rakshita Shetty ಬೇಸರ

ಬಿಗ್​ಬಾಸ್​ 10ರ ಸ್ಪರ್ಧಿ ವರ್ತೂರು ಸಂತೋಷ್, ಬಿಗ್​ಬಾಸ್​ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ 2 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಕ್ಷಿತಾ, ತಾವಿನ್ನೂ ಹಣ ಪಡೆದಿಲ್ಲವೆಂದೂ, ವರ್ತೂರು ಅವರ ಮನೆಗೆ ಹೋಗಿ ಅಡುಗೆ ಮಾಡುವುದಾಗಿ ಹೇಳಿದ್ದಾರೆ.

ಬಿಗ್​ಬಾಸ್​ 12 (Bigg Boss 12) ಮುಗಿದರೂ ಕೆಲವು ಸ್ಪರ್ಧಿಗಳ ಹವಾ ಇನ್ನೂ ನಿಂತಿಲ್ಲ. ಅವರಲ್ಲಿ ಒಬ್ಬರು ರಕ್ಷಿತಾ ಶೆಟ್ಟಿ (Rakshita Shetty). ಈ ಬಾರಿಯ ಬಿಗ್​ಬಾಸ್​ನಲ್ಲಿ ಮೊದಲ ರನ್ನರ್​ ಅಪ್​ಗೆ ಎರಡು ಲಕ್ಷ ರೂಪಾಯಿ ನೀಡುವುದಾಗಿ, ಬಿಗ್​ಬಾಸ್​ 10ರ ಸ್ಪರ್ಧಿ ವರ್ತೂರು ಸಂತೋಷ್​ ಘೋಷಣೆ ಮಾಡಿದ್ದರು. ಅದರಂತೆ ಅವರು ಈಗ ರಕ್ಷಿತಾ ಶೆಟ್ಟಿ ಅವರಿಗೆ ಹಣ ನೀಡಬೇಕಿದೆ.

ಅದರಂತೆಯೇ, ವರ್ತೂರು ಅವರು ರಕ್ಷಿತಾ ಶೆಟ್ಟಿ ಕೆಲ ದಿನಗಳ ಹಿಂದೆ ಅವರು ಕರೆ ಮಾಡಿ ಹಣವನ್ನು ನೀಡುವುದಾಗಿ ಹೇಳಿದ್ದಾರೆ. ವರ್ತೂರು ಸಂತೋಷ್​ ಬಗ್ಗೆ ಅರಿವಿಲ್ಲದ ರಕ್ಷಿತಾ ಶೆಟ್ಟಿ ಅವರಿಗೆ ತಮ್ಮ ಪರಿಚಯವನ್ನು ಫೋನ್​ ಮೂಲಕ ಮಾಡಿಕೊಂಡಿರುವ ವರ್ತೂರು ಅವರು ಹಣ ನೀಡುವುದಾಗಿ ಹೇಳಿದ್ದಾರೆ.

ಇದೇ 12ರ ಬಳಿಕ ಬೆಂಗಳೂರಿಗೆ ಬಂದು, ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿರುವ ವರ್ತೂರು ಸಂತೋಷ್​, ಹಣ ನೀಡುವುದಾಗಿ ಹೇಳಿದ್ದಾರೆ. ಆದರೆ ಕೊನೆಯವರೆಗೂ ರಕ್ಷಿತಾ ಶೆಟ್ಟಿ ಕನ್​ಫ್ಯೂಷನ್​ನಲ್ಲಿಯೇ ಇದ್ದ ಹಾಗೆ ಕಾಣಿಸುತ್ತಿದೆ. ಏಕೆಂದರೆ, ಅವರಿಗೆ ಈ ಬಗ್ಗೆ ಗೊತ್ತೇ ಇಲ್ಲದ ಕಾರಣ, 2 ಲಕ್ಷ ಯಾಕೆ ಕೊಡುತ್ತಿದ್ದಾರೆ ಎನ್ನುವುದು ತಿಳಿದಿರಲಿಲ್ಲ. ಆದರೆ ಕೊನೆಗೆ ರಕ್ಷಿತಾ ಹಣ ಪಡೆದುಕೊಂಡರು ಎಂದು ಸುದ್ದಿಯಾಗಿತ್ತು.

ಇದೀಗ ರಕ್ಷಿತಾ ಶೆಟ್ಟಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಇನ್ನೂ ದುಡ್ಡು ಪಡೆದುಕೊಂಡಿಲ್ಲ. ಏಕೆಂದ್ರೆ ನಾನಿನ್ನೂ ಅವರ ಮನೆಗೆ ಹೋಗಲಿಲ್ಲ.ಅವರು ಕಾಲ್​ ಮಾಡಿ ಪ್ರೀತಿಯಿಂದ ಕರೆದಿದ್ದಾರೆ. ಖಂಡಿತವಾಗಿಯೂ ದುಡ್ಡು ಪಡೆದುಕೊಳ್ಳುತ್ತೇನೆ. ಆದರೆ ಈಗಲೇ ಸುದ್ದಿ ಆಗಿರುವ ಹಾಗೆ ನಾನಿನ್ನೂ ಪಡೆದುಕೊಂಡಿಲ್ಲ ಎಂದಿದ್ದಾರೆ. ಎಲ್ಲರೂ ಫೋನ್​ ಮಾಡಿ ದುಡ್ಡು ಏನು ಮಾಡಿದೆ ಎಂತ ಕೇಳ್ತಾರೆ. ಎಂತ ಮಾಡೋದು, ಹಣನೇ ತೆಗೆದುಕೊಂಡಿಲ್ಲ ಎಂದಿದ್ದಾರೆ.

ಮನೆಗೆ ಬಂದಾಗ, ಮೀನು ತರಿಸಿ ಇಡುತ್ತೇನೆ. ಫ್ರೈ ಮಾಡಿಕೊಡಬೇಕು ಎಂದು ವರ್ತೂರು ಹೇಳಿದ್ದರು. ಆ ಬಗ್ಗೆ ಹೇಳಿರೋ ರಕ್ಷಿತಾ ಶೆಟ್ಟಿ (Bigg Boss Raskhita Shetty) ವರ್ತೂರು ಸಂತೋಷ್​ ಅವರ ಮನೆಗೆ ಹೋಗಿ ಅಡುಗೆ ಮಾಡ್ತೇನೆ. ಆಮೇಲೆ ಹಣ ಪಡೆಯುತ್ತೇನೆ ಎಂದಿದ್ದಾರೆ.

ಅಷ್ಟಕ್ಕೂ ವರ್ತೂರು ಸಂತೋಷ್​ ಅವರು ಮೊದಲು ಬಿಗ್​ಬಾಸ್​ 12ರ 2ನೇ ರನ್ನರ್​ ಅಪ್​ಗೆ ಹಣ ನೀಡುವುದಾಗಿ ಹೇಳಿದ್ದರು. ಆದರೆ, ಷರತ್ತು ವಿಧಿಸಿದ್ದ ಅವರು, ಬಿಗ್​ಬಾಸ್​ ವೇದಿಕೆಯ ಮೇಲೆ ನನ್ನನ್ನು ಕರೆಯಬೇಕು. ಅಲ್ಲಿಯೇ 2ನೇ ರನ್ನರ್​ ಅಪ್​ಗೆ ಹಣವನ್ನು ನೀಡುತ್ತೇನೆ. ನನ್ನ ಜೊತೆ ನನ್ನ ಹಳ್ಳಿಕಾರ್​ ಹಸುವನ್ನೂ ಕರೆಸಬೇಕು ಎಂದಿದ್ದರು. ಆದರೆ ಅದಕ್ಕೆ ಅನುಮತಿ ಸಿಕ್ಕದಿದ್ದ ಹಿನ್ನೆಲೆಯಲ್ಲಿ, ಕೊನೆಗೆ ಮೊದಲ ರನ್ನರ್​ ಅಪ್​ಗೆ 2 ಲಕ್ಷ ಕೊಡುವುದಾಗಿ ಘೋಷಿಸಿದ್ದರು.

Source link

Leave a Reply

Your email address will not be published. Required fields are marked *