17

Image Credit : Instagram
ರಕ್ಷಿತಾ ಶೆಟ್ಟಿ ಹವಾ
ರಕ್ಷಿತಾ ಶೆಟ್ಟಿ (Bigg Boss Rakshita Shetty) ಹವಾ ಬಿಗ್ಬಾಸ್ನಲ್ಲಿ ಜೋರಾಗಿಯೇ ನಡೆಯುತ್ತಿದೆ. ಈಕೆ ಫೈನಲಿಸ್ಟ್ ಎಂದೇ ಈಗ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದು, ರಕ್ಷಿತಾ ಅಭಿಮಾನಿಗಳ ಸಂಖ್ಯೆಯೂ ಅಷ್ಟೇ ದೊಡ್ಡದಾಗಿದೆ.
27
Image Credit : Instagram
ಅರೆಬರೆ ಕನ್ನಡ
ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಫೇಮಸ್ ಆಗಿದ್ದೇ ಅರೆಬರೆ ಕನ್ನಡದ ಮೂಲಕ. ಮುಂಬೈನಲ್ಲಿ ಹುಟ್ಟಿ ಬೆಳೆದ ತುಳುನಾಡಿನ ಯುವತಿ ರಕ್ಷಿತಾ ಶೆಟ್ಟಿ, ಕನ್ನಡವನ್ನು ಕಲಿತು ಎಲ್ಲಾ ಭಾಷೆಗಳನ್ನು ಮಿಕ್ಸ್ ಮಾಡಿ ಯುಟ್ಯೂಬ್ ಮಾಡಿದ ಆರೇ ತಿಂಗಳಿನಲ್ಲಿ ಫೇಮಸ್ ಆಗಿದ್ದಾರೆ ಎಂದರೆ ಅವರ ಜಾಣ್ಮೆ ಕಾಣಿಸುತ್ತದೆ. ಅದರಲ್ಲಿಯೂ ಮೀನಿನ ವಿಡಿಯೋಗಳಿಂದಲೇ ಈಕೆ ಫೇಮಸ್
37
Image Credit : Instagram
ಆರೇ ತಿಂಗಳಲ್ಲಿ ಫೇಮಸ್
ಯುಟ್ಯೂಬ್ ಓಪನ್ ಮಾಡಿ ಆರೇ ತಿಂಗಳಿನಲ್ಲಿ ಗಳಿಸಿದ ಖ್ಯಾತಿಯಿಂದ ಈಕೆ ಬಿಗ್ಬಾಸ್ ಮನೆಗೂ ಬಂದಿದ್ದಾರೆ. ಆದರೆ ಇವರ ಕನ್ನಡದ ಬಗ್ಗೆ ಉಳಿದ ಸ್ಪರ್ಧಿಗಳು ಡೌಟ್ ಪಡುತ್ತಿದ್ದರೂ ರಕ್ಷಿತಾ ಫ್ಯಾನ್ಸ್ಗೆ ಮಾತ್ರ ಆಕೆ ಮೇಲೆ ಇನ್ನಿಲ್ಲದ ಗೌರವ.
47
Image Credit : Instagram
ಮೀನು ಮಿಸ್
ಇದೀಗ ಬಿಗ್ಬಾಸ್ ಮನೆಯಲ್ಲಿ ನಾನ್ ವೆಜಿಟೇರಿಯನ್ಸ್ ಮೀನು, ಚಿಕನ್ನು ಎಲ್ಲಾ ಮಿಸ್ ಮಾಡಿಕೊಳ್ತಿದ್ದಾರೆ. ರಕ್ಷಿತಾ ಶೆಟ್ಟಿಯನ್ನು ಫೇಮಸ್ ಮಾಡಿದ್ದೇ ಮೀನು. ಮೀನಿನ ವಿಡಿಯೋ ಮಾತ್ರವಲ್ಲದೇ ಮೀನಿನ ಸಾಂಬಾರ್ ಅನ್ನೂ ರಕ್ಷಿತಾ ಮಿಸ್ ಮಾಡಿಕೊಳ್ತಿದ್ದಾರೆ.
57
Image Credit : Instagram
ಬಿಗ್ಬಾಸ್ ವಿಷ್
ಇದೀಗ ಅದೇ ಆಸೆಯನ್ನು ಅಶ್ವಿನಿ ಗೌಡ (Bigg Boss Ashwini Gowda) ಮತ್ತು ಸೂರಜ್ ಮುಂದೆ ಇಟ್ಟಿದ್ದಾರೆ ರಕ್ಷಿತಾ ಶೆಟ್ಟಿ. ಮೀನು ತಿನ್ನಬೇಕು ಎನ್ನಿಸ್ತಾ ಇದೆ. ಒಂದು ವೇಳೆ ಬಿಗ್ಬಾಸ್ ವಿಷ್ ಕೇಳಿದ್ರೆ, ಒಂದಷ್ಟು ಕೆ.ಜಿ ಮೀನು ಕಳುಹಿಸಿಕೊಡಲು ಹೇಳ್ತೇನೆ ಎಂದಿದ್ದಾರೆ.
67
Image Credit : instagram
ಮೀನಿನ ಸಾಂಬಾರ್
ಆಗ ಅಶ್ವಿನಿ ಗೌಡ, ತಂದು ಏನ್ ಮಾಡ್ತಿಯಾ ಕೇಳಿದಾಗ ಸಾಂಬಾರ್ ಮಾಡಿ ತಿಂತೇನೆ ಎಂದಿದ್ದಾರೆ.ನಮಗೆ ಕೊಡಲ್ವಾ ಎಂದು ಅಶ್ವಿನಿ ಕೇಳಿದಾಗ, ಎಲ್ಲರಿಗೂ ಕೊಟ್ಟೇ ತಿನ್ನೋದು ಎಂದಿದ್ದಾರೆ. ಒಟ್ಟಿನಲ್ಲಿ, ಎಲ್ಲಿ ಹೋದ್ರೂ ರಕ್ಷಿತಾಗೆ ಮೀನಿಂದೇ ಚಿಂತೆಯಲ್ಲಾ ಎಂದು ಫ್ಯಾನ್ಸ್ ಹೇಳಿಕೊಳ್ತಿದ್ದಾರೆ.
77
Image Credit : instagram
ಎಲ್ಲರಿಗೂ ಗೆಲ್ಲೋ ಚಿಂತೆ!
ಉಳಿದ ಎಲ್ಲರೂ ಬಿಗ್ಬಾಸ್ ಗೆಲ್ಲೋದು ಹೇಗೆ ಎನ್ನುವ ಚಿಂತೆಯಲ್ಲಿ ಇದ್ದರೆ ನಮ್ ಪುಟ್ಟಿ ಮಾತ್ರ ಮೀನಿನ ಚಿಂತೆಯಲ್ಲಿ ಇದ್ದಾಳೆ ಎನ್ನುತ್ತಿದ್ದಾರೆ ಅಭಿಮಾನಿಗಳು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.