ಬಿಗ್ಬಾಸ್ ಮನೆಗೆ ಸ್ಪಂದನಾ ಅವರ ಪಾಲಕರು ಆಗಮಿಸಿದ್ದಾರೆ. ಈ ವೇಳೆ, ಸ್ಪಂದನಾ ಅವರ ತಂದೆ ಮಗಳ ಶಾಲಾ ದಿನಗಳ ಆಘಾತಕಾರಿ ಘಟನೆಯೊಂದನ್ನು ಹಂಚಿಕೊಂಡಿದ್ದು, ರಾತ್ರಿ 10 ಗಂಟೆಯಾದರೂ ಶಾಲೆಯಿಂದ ಮನೆಗೆ ಬಾರದಿದ್ದ ಕ್ಷಣವನ್ನು ವಿವರಿಸಿದ್ದಾರೆ.
ಬಿಗ್ಬಾಸ್ನಲ್ಲಿ (Bigg Boss) ಇದೀಗ ಸ್ಪರ್ಧಿಗಳ ಮನೆಯವರ ಎಂಟ್ರಿ ಆಗುತ್ತಿದೆ. ಇದೀಗ ಸ್ಪಂದನಾ ಅವರ ಅಪ್ಪ- ಅಮ್ಮನ ಎಂಟ್ರಿ ಆಗಿದೆ.

ಈ ಸಂದರ್ಭದಲ್ಲಿ ಸ್ಪಂದನಾ (Bigg Boss Spandana) ಶಾಲಾ ದಿನಗಳ ಬಗ್ಗೆ ಅವರ ಅಪ್ಪ ಶಾಕಿಂಗ್ ವಿಷ್ಯವೊಂದನ್ನು ರಿವೀಲ್ ಮಾಡಿದ್ದಾರೆ. ಶಾಲೆಯಿಂದ ಸ್ಪಂದನಾ ರಾತ್ರಿ 10 ಗಂಟೆಯಾದರೂ ಮನೆಗೆ ಬಾರದ ವಿಷ್ಯ ಅದಾಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಸ್ಪಂದನಾ ಅವರ ಅಮ್ಮ ಎರಡನೆಯ ಡೆಲಿವರಿಗಾಗಿ ಅಮ್ಮನ ಮನೆಗೆ ಹೋದಾಗ ಸ್ಪಂದನಾ ಶಾಲೆಗೆ ಹೋಗಿದ್ದರು. ಆದರೆ ಅಪ್ಪನಿಗೆ ಜೋರಾಗಿ ನಿದ್ದೆ ಬಂದುಬಿಟ್ಟಿದ್ದರಿಂದ ಶಾಲೆಗೆ ಹೋಗುವುದೇ ನೆನಪಿರಲಿಲ್ಲವಂತೆ.

ಅದೇ ಇನ್ನೊಂದೆಡೆ ಅಪ್ಪ ಬಾರದೇ ಸ್ಪಂದನಾ ಶಾಲೆಯಲ್ಲಿಯೇ ಜೋರಾಗಿಯೇ ಅಳುತ್ತಾ ಕುಳಿತಿದ್ದರಂತೆ. ಅದು ಕಾನ್ವೆಂಟ್ ಆಗಿದ್ದರಿಂದ ಸಿಸ್ಟರ್ಸ್ ಆಕೆಯ ಬಳಿ ಮನೆಯ ಅಡ್ರೆಸ್ ಕೇಳಿದಾಗ ಸ್ಪಂದನಾ ಜೋರಾಗಿ ಅಳುತ್ತಾ ಇದ್ದರಂತೆ.

ಅಪ್ಪನಿಗೆ ಎಚ್ಚರವಾದಾಗ ರಾತ್ರಿ 10 ಗಂಟೆಯಾಗಿದೆ. ಒಳಗಡೆಯಿಂದ ಬಾಗಿಲು ಹಾಕಿ ಮಲಗಿದ್ದ ಅವರಿಗೆ ಮಗಳು ಇನ್ನೂ ಮನೆಗೆ ಬಂದಿಲ್ಲ ಎನ್ನುವುದು ಆ ರಾತ್ರಿಯಲ್ಲಿ ತಿಳಿಯಿತಂತೆ!

ಮುಂದೇನಾಯಿತು ಎನ್ನುವುದನ್ನು ಬಿಗ್ಬಾಸ್ ಷೋ ನೋಡಿಯೇ ತಿಳಿಯಬೇಕು. ಅವರ ಅಪ್ಪ ಅಷ್ಟು ವಿಷಯವನ್ನು ಹೇಳಿದ್ದು, ಅದರ ಪ್ರೊಮೋ ಅನ್ನು ಚಾನೆಲ್ ಶೇರ್ ಮಾಡಿದೆ.

Source link
Bigg Boss: ಶಾಲೆಗೆ ಹೋಗಿದ್ದ ಸ್ಪಂದನಾ ರಾತ್ರಿ 10 ಗಂಟೆಯಾದ್ರೂ ಪತ್ತೆಯಿಲ್ಲ! ಆ ಕರಾಳ ದಿನ ನೆನೆದ ಅಪ್ಪ