BBK 12: ಕೊನೆಗೂ ಸತ್ಯ ಒಪ್ಪಿಕೊಂಡ್ರಾ ಸ್ಪಂದನಾ ಸೋಮಣ್ಣ? ಜಾಲತಾಣದಲ್ಲಿ ಏನಿದು ಬಿಸಿಬಿಸಿ ಚರ್ಚೆ?

BBK 12: ಕೊನೆಗೂ ಸತ್ಯ ಒಪ್ಪಿಕೊಂಡ್ರಾ ಸ್ಪಂದನಾ ಸೋಮಣ್ಣ? ಜಾಲತಾಣದಲ್ಲಿ ಏನಿದು ಬಿಸಿಬಿಸಿ ಚರ್ಚೆ?

BBK 12: ಕೊನೆಗೂ ಸತ್ಯ ಒಪ್ಪಿಕೊಂಡ್ರಾ ಸ್ಪಂದನಾ ಸೋಮಣ್ಣ? ಜಾಲತಾಣದಲ್ಲಿ ಏನಿದು ಬಿಸಿಬಿಸಿ ಚರ್ಚೆ?

ಬಿಗ್‌ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು ಸ್ಪಂದನಾ ಸೋಮಣ್ಣ ಇನ್ನೂ ಮನೆಯಲ್ಲಿರುವುದರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ನಡುವೆ, ‘ಬಿಗ್‌ಬಾಸ್ ಮನೆ ನನ್ನದೇ’ ಎಂದು ಸ್ಪಂದನಾ ತಮಾಷೆಯಾಗಿ ಹೇಳಿದ್ದು, ಇದು ವೀಕ್ಷಕರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಬಿಗ್​ಬಾಸ್​ (Bigg Boss 12) ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವ ನಡುವೆಯೇ ಮನೆಯೊಳಕ್ಕೆ ಪೈಪೋಟಿಯೂ ಅಷ್ಟೇ ಜೋರಾಗಿಯೇ ನಡೆಯುತ್ತಿದೆ. ಅದರ ನಡುವೆಯೇ, ಬಿಗ್​ಬಾಸ್​ ಫೈನಲಿಸ್ಟ್​ಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಆದರೆ ಒಂದು ಕುತೂಹಲದ ವಿಷ್ಯ ಏನಪ್ಪಾ ಎಂದರೆ, ಇದಾಗಲೇ ಬಹುತೇಕ ಎಲಿಮಿನೇಟ್​ ಆಗಿ ಹೊರಬಂದಿರೋ ಸ್ಪರ್ಧಿಗಳು ಹೇಳ್ತಿರೋ ವಿಷಯ ಅದೊಂದೇ. ಅದೇನೆಂದರೆ, ಸ್ಪಂದನಾ ಸೋಮಣ್ಣ ಯಾಕೆ ಇನ್ನೂ ಬಿಗ್​ಬಾಸ್​ನಲ್ಲಿ ಉಳಿಸಿಕೊಳ್ಳಲಾಗಿದೆ ಎನ್ನುವ ಪ್ರಶ್ನೆ!

ಈ ಮೊದಲು ಮನೆಯಲ್ಲಿ ಇದ್ದಾಗಲೇ ಜಾಹ್ನವಿ ನೇರಾನೇರವಾಗಿ ವಾಹಿನಿ ವಿರುದ್ಧವೇ ಆರೋಪ ಮಾಡಿ ಸಾಕಷ್ಟು ತೊಂದರೆಗೂ ಒಳಗಾಗಿದ್ದರು. ಕೊನೆಗೆ ಹೊರಬಂದಾಗ ಅವರು, ನಾನು ಹೇಳಿದ ಸಂಪೂರ್ಣ ಮಾತುಗಳನ್ನು ಪ್ರಸಾರ ಮಾಡಲಿಲ್ಲ, ಆದ್ದರಿಂದ ನನ್ನ ಮೇಲೆಯೇ ಆರೋಪ ಹೊರಿಸುವ ರೀತಿ ಆಯ್ತು ಎಂದಿದ್ದರು.

ಇದಾದ ಬಳಿಕ ಮೊನ್ನೆಯಷ್ಟೇ ಹೊರಬಂದಿರುವ ಮಾಳು ಮತ್ತು ಸೂರಜ್​ ಸಿಂಗ್​ ಕೂಡ ಸ್ಪಂದನಾ ಸೋಮಣ್ಣ ಮನೆಯಲ್ಲಿ ಇರಲು ಅರ್ಹರೇ ಅಲ್ಲ. ಅವರು ಇನ್ನೂ ನಾಮಿನೇಟ್​ ಆಗದೇ ಇರುವುದು ಅಚ್ಚರಿ ಎಂದಿದ್ದರು. ಅವರು ಯಾವ ಟಾಸ್ಕ್​ ಅನ್ನೂ ಚೆನ್ನಾಗಿ ಆಡಲ್ಲ, ಆದರೆ ಎಲಿಜಿಬಲ್​ ಇರೋರನ್ನು ಹೊರಕ್ಕೆ ಹಾಕಿ ಅವರನ್ನು ಯಾಕೆ ಉಳಿಸಿಕೊಂಡಿದ್ದಾರೆ ಎನ್ನೋದೇ ತಿಳಿಯುವುದಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳುತ್ತಲೇ ಇದ್ದಾರೆ.

ಇದೀಗ ಜಿಯೋಹಾಟ್​ಸ್ಟಾರ್​ನಲ್ಲಿ ಶೇರ್​ ಮಾಡಲಾದ ವಿಡಿಯೋ ಒಂದರಲ್ಲಿ ಸ್ಪಂದನಾ, ಮ್ಯೂಟೆಂಟ್​ ರಘು ಮತ್ತು ಧನುಷ್​ ಅವರು ಹೀಗೆಯೇ ಮಾತನಾಡುತ್ತಿರುವ ಸಂದರ್ಭದಲ್ಲಿ ಸ್ಪಂದನಾ ಸೋಮಣ್ಣ (Bigg Boss Spandana Somanna) ಅವರು, ಬಿಗ್​ಬಾಸ್​ ಮನೆ ನನ್ನದೇ, ಇದು ನನಗಾಗಿಯೇ ಇರುವುದು, ನನಗಾಗಿಯೇ ಮಾಡಿರೋದು ಎಂದು ತಮಾಷೆಯ ರೂಪದಲ್ಲಿ ಹೇಳಿದ್ದಾರೆ.

ಆದರೆ ಟ್ರೋಲಿಗರು ಮಾತ್ರ ಈ ಮಾತು ಅಕ್ಷರಶಃ ನಿಜ ಎನ್ನುತ್ತಿದ್ದಾರೆ. ಇದನ್ನು ತಮಾಷೆ ಮಾತು ಎನ್ನೋದನ್ನು ಮರೆತು, ವೀಕ್ಷಕರು ಕೊನೆಗೂ ಸತ್ಯ ಒಪ್ಪಿಕೊಂಡ್ರಾ ಎಂದು ಕೇಳ್ತಿದ್ದಾರೆ! ಇದಾಗಲೇ ಹೊರಬಂದಿರೋ ಸ್ಪರ್ಧಿಗಳೂ ಅದೇ ಮಾತನ್ನು ಹೇಳುತ್ತಿದ್ದಾರೆ. ನೀವು ಸದ್ಯ ಹೊರಬರಲ್ಲ ಬಿಡಿ, ಬಿಗ್​ಬಾಸ್​ ನಿಮ್ಮದೇ ಮನೆ ಎನ್ನುತ್ತಿದ್ದಾರೆ!

Source link

Leave a Reply

Your email address will not be published. Required fields are marked *