Headlines

ಬಿಗ್‌ಬಾಸ್‌ನಲ್ಲಿ ಮೋಡಿ ಮಾಡಿದ್ದ ಗಿಲ್ಲಿ ನಟ, ಕಾವ್ಯ ಶೈವ ಜೋಡಿ ಈ ಧಾರಾವಾಹಿಯಲ್ಲಿ ಮತ್ತೆ ಒಂದಾಗಲಿದೆಯಾ?

ಬಿಗ್‌ಬಾಸ್‌ನಲ್ಲಿ ಮೋಡಿ ಮಾಡಿದ್ದ ಗಿಲ್ಲಿ ನಟ, ಕಾವ್ಯ ಶೈವ ಜೋಡಿ ಈ ಧಾರಾವಾಹಿಯಲ್ಲಿ ಮತ್ತೆ ಒಂದಾಗಲಿದೆಯಾ?

ಬಿಗ್‌ಬಾಸ್‌ನಲ್ಲಿ ಮೋಡಿ ಮಾಡಿದ್ದ ಗಿಲ್ಲಿ ನಟ, ಕಾವ್ಯ ಶೈವ ಜೋಡಿ ಈ ಧಾರಾವಾಹಿಯಲ್ಲಿ ಮತ್ತೆ ಒಂದಾಗಲಿದೆಯಾ?

Gilli Nata and Kavya Shaiva new project: ಬಿಗ್‌ಬಾಸ್‌ನಲ್ಲಿ ಮೋಡಿ ಮಾಡಿದ್ದ ಗಿಲ್ಲಿ ನಟ, ಕಾವ್ಯ ಶೈವ ಜೋಡಿ ಈಗ ಕಿರುತೆರೆಯಲ್ಲಿ ಒಂದಾಗಲಿದೆಯಾ? ಹೀಗೊಂದು ಗಾಸಿಪ್ ಕನ್ನಡ ಕಿರುತೆರೆಯಲ್ಲಿ ಕೇಳಿ ಬರುತ್ತಿದೆ. ಇದು ನಿಜಾನಾ?.

ಬಿಗ್‌ಬಾಸ್ ಕನ್ನಡ ಸೀಸನ್ 12 ಮುಗಿದಿದ್ದರೂ ಅದರ ಕ್ರೇಜ್ ಮಾತ್ರ ಇನ್ನೂ ಕಮ್ಮಿಯಾಗಿಲ್ಲ. ಈ ಬಾರಿಯ ಸೀಸನ್‌ನಲ್ಲಿ ಕನ್ನಡಿಗರ ಮನೆಮಾತಾಗಿದ್ದ ಜೋಡಿ ಎಂದರೆ ಅದು ವಿನ್ನರ್ ಗಿಲ್ಲಿ ನಟ ಮತ್ತು ಸುಂದರ ನಟಿ ಕಾವ್ಯ ಶೈವ. ಈ ಜೋಡಿಯ ಕೆಮಿಸ್ಟ್ರಿ ಮತ್ತು ಸ್ನೇಹ ಬಿಗ್‌ಬಾಸ್ ಮನೆಯೊಳಗೆ ಮಾತ್ರವಲ್ಲದೆ ಹೊರಗಡೆಯೂ ಭಾರಿ ಸದ್ದು ಮಾಡಿತ್ತು. ಇದೀಗ ಈ ಹಿಟ್ ಜೋಡಿ ಮತ್ತೆ ತೆರೆಯ ಮೇಲೆ ಒಂದಾಗಲಿದ್ದಾರೆ ಎಂಬ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ.

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯ ಶೈವ ಅವರ ಆಟ, ತುಂಟಾಟ ಮತ್ತು ಪರಸ್ಪರ ಬೆಂಬಲ ನೀಡುವ ಶೈಲಿಯನ್ನು ಕಂಡು ಕನ್ನಡಿಗರು ಫಿದಾ ಆಗಿದ್ದರು. ಈ ಜೋಡಿ ನಿಜ ಜೀವನದಲ್ಲೂ ಸತಿ-ಪತಿಯಾಗಲಿ ಎಂದು ಅದೆಷ್ಟೋ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಆದರೆ, ತಾವಿಬ್ಬರೂ ಕೇವಲ ‘ಬೆಸ್ಟ್ ಫ್ರೆಂಡ್ಸ್’ ಎಂದು ಇಬ್ಬರೂ ಸ್ಪಷ್ಟಪಡಿಸಿದ್ದರು. ಆದರೂ ಇವರನ್ನು ಒಟ್ಟಿಗೆ ನೋಡುವ ಹಂಬಲ ಅಭಿಮಾನಿಗಳಲ್ಲಿ ಕಿಂಚಿತ್ತೂ ಕಡಿಮೆಯಾಗಿಲ್ಲ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಮೂಡಿಬರಲಿರುವ ಹೊಚ್ಚ ಹೊಸ ಧಾರಾವಾಹಿಯೊಂದಕ್ಕೆ ಗಿಲ್ಲಿ ನಟ ಮತ್ತು ಕಾವ್ಯ ಶೈವ ಅವರನ್ನು ಮುಖ್ಯ ಭೂಮಿಕೆಗೆ ಆಯ್ಕೆ ಮಾಡಲಾಗಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಗಿಲ್ಲಿ ನಟ ಸದ್ಯ ವಿನ್ನರ್ ಪಟ್ಟ ಅಲಂಕರಿಸಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದು, ಸಾಲು ಸಾಲು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕಾವ್ಯ ಶೈವ ಕೂಡ ಕಿರುತೆರೆಯಿಂದ ಬೆಳ್ಳಿತೆರೆಯತ್ತ (ಸಿನಿಮಾ) ಮುಖ ಮಾಡಿದ್ದಾರೆ.

ಈ ಸುದ್ದಿಯ ನಡುವೆ ಒಂದಷ್ಟು ಕುತೂಹಲಕಾರಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಬಿಗ್‌ಬಾಸ್ ಗೆದ್ದ ಮೇಲೆ ಸಾಮಾನ್ಯವಾಗಿ ನಟರು ಸಿನಿಮಾಗಳತ್ತ ಒಲವು ತೋರಿಸುತ್ತಾರೆ. ಹೀಗಿರುವಾಗ ಗಿಲ್ಲಿ ನಟ ಮತ್ತೆ ಧಾರಾವಾಹಿಗೆ ಮರಳುತ್ತಾರಾ? ಈಗಾಗಲೇ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾವ್ಯ ಶೈವ, ಸಿನಿಮಾ ಬಿಟ್ಟು ಮತ್ತೆ ಸೀರಿಯಲ್ ಲೋಕಕ್ಕೆ ಕಾಲಿಡುತ್ತಾರಾ?

ಒಟ್ಟಿನಲ್ಲಿ ಈ ಜೋಡಿ ಮತ್ತೆ ಒಂದಾಗುತ್ತೆ ಅಂದ ಮೇಲೆ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅಧಿಕೃತ ಮಾಹಿತಿ ಹೊರಬರುವವರೆಗೂ ಅಭಿಮಾನಿಗಳು ಕಾದು ನೋಡಬೇಕಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆದಲ್ಲಿ, ಕನ್ನಡ ಕಿರುತೆರೆಯಲ್ಲಿ ಈ ಜೋಡಿ ಹೊಸ ದಾಖಲೆ ಬರೆಯುವುದರಲ್ಲಿ ಅನುಮಾನವಿಲ್ಲ.

Source link

Leave a Reply

Your email address will not be published. Required fields are marked *