Bigg Boss ಸೂರಜ್​ ಸಿಂಗ್​ -ರಾಶಿಕಾ ಶೆಟ್ಟಿ ಚಿನ್ನ ಖರೀದಿ! ಬಂಗಾರದ ಚೈನ್​ ಉಡುಗೊರೆ- ಏನಿದು ಗುಡ್​ ನ್ಯೂಸ್​?

Bigg Boss  ಸೂರಜ್​ ಸಿಂಗ್​ -ರಾಶಿಕಾ ಶೆಟ್ಟಿ ಚಿನ್ನ ಖರೀದಿ! ಬಂಗಾರದ ಚೈನ್​ ಉಡುಗೊರೆ- ಏನಿದು ಗುಡ್​ ನ್ಯೂಸ್​?

Bigg Boss  ಸೂರಜ್​ ಸಿಂಗ್​ -ರಾಶಿಕಾ ಶೆಟ್ಟಿ ಚಿನ್ನ ಖರೀದಿ! ಬಂಗಾರದ ಚೈನ್​ ಉಡುಗೊರೆ- ಏನಿದು ಗುಡ್​ ನ್ಯೂಸ್​?

ಬಿಗ್​ಬಾಸ್​ ಖ್ಯಾತಿಯ ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ  ಚಿನ್ನ ಖರೀದಿ ಮಾಡಿದ್ದು, ರಾಶಿಕಾ ಸೂರಜ್‌ಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ, ಇಲ್ಲೊಂದು ಟ್ವಿಸ್ಟ್​ ಇದೆ. ಏನದು? ಜೋಡಿ ಈ ಹಿಂದೆ ಹೇಳಿದ್ದೇನು?

ಬಿಗ್​ಬಾಸ್​ 12 (Bigg Boss 12)ರ ಕ್ಯೂಟ್​ ಜೋಡಿಗಳಲ್ಲಿ ಒಂದಾಗಿದ್ದು ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಜೋಡಿ. ರಾಶಿಕಾ ಶೆಟ್ಟಿ ಅವರು, ಮನೆಯಲ್ಲಿ ಹೆಚ್ಚು ಸದ್ದು ಮಾಡಿದ್ದೇ ಸೂರಜ್​ ಸಿಂಗ್​ ಅವರ ಜೊತೆಗಿನ ಆತ್ಮೀಯ ಒಡನಾಟದಿಂದ. ಸೂರಜ್​ ಅವರು ವೈಲ್ಡ್​ಕಾರ್ಡ್​ ಎಂಟ್ರಿ ಕೊಟ್ಟಾಗ ಈ ಮನೆಯ ಸುಂದರಿಗೆ ಗುಲಾಬಿ ಕೊಡಬೇಕು ಎಂದಾಗ ಅವರು ಅದನ್ನು ಕೊಟ್ಟಿದ್ದು ರಾಶಿಕಾ ಅವರಿಗೆ.

ಅಲ್ಲಿಂದಲೇ ಅವರ ಸ್ನೇಹ ಶುರುವಾಗಿತ್ತು. ಒಂದು ಹಂತದಲ್ಲಿ ಬಿಗ್​ಬಾಸ್​ ವೀಕ್ಷಕರಿಗೆ ರಾಶಿಕಾ ಶೆಟ್ಟಿ ಅವರೇ ಸೂರಜ್​ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಎನ್ನಿಸಿದ್ದು ಉಂಟು. ಅವರ ಜೊತೆಯಲ್ಲಿಯೇ ಇರುವುದು, ಅವರ ಬಳಿ ಮಾತ್ರ ಮಾತನಾಡುವುದು… ಇಂಥ ಘಟನೆಗಳು ಹಲವಾರು ನಡೆದಿದ್ದವು. ಆ ಬಳಿಕ ಸೂರಜ್​ ಅವರು ಎಲಿಮಿನೇಟ್​ ಆಗಿ ಹೊರಕ್ಕೆ ಬಂದಾಗ, ರಾಶಿಕಾ ಶೆಟ್ಟಿ ಬಿಕ್ಕಿಬಿಕ್ಕಿ ಅತ್ತಿದ್ದರಿಂದಲೂ ಇವರಿಬ್ಬರ ನಡುವೆ ಸಮ್​ಥಿಂಗ್​ ಇದೆ ಎಂದೇ ಹೇಳಲಾಗುತ್ತಿತ್ತು. ಹೊರಗೆ ಬಂದ ಮೇಲೂ ಈ ಜೋಡಿಗೆ ಇದೇ ವಿಷಯವಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು.

ಇದೀಗ ಮತ್ತೆ ಈ ಜೋಡಿ ಸಕತ್​ ಸೌಂಡ್​ ಮಾಡಿದೆ. ಅದೇನೆಂದರೆ ಇನ್ನೇನು ಯುಗಾದಿ ಹಬ್ಬ ಹತ್ತಿರವಿದೆ. ಇದರ ಬೆನ್ನಲ್ಲೇ ಈ ಜೋಡಿ ಚಿನ್ನದ ಖರೀದಿ ಮಾಡಿದೆ. ರಾಶಿಕಾ ಶೆಟ್ಟಿ ಸೂರಜ್​ ಸಿಂಗ್​ಗೆ ಚಿನ್ನದ ಸರವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ಅಷ್ಟಕ್ಕೂ ಏನಿದು ಗುಡ್​ನ್ಯೂಸ್​ ಅಂತ ಕೇಳ್ತೀರಾ. ಅಂಥದ್ದೇನೂ ಇಲ್ಲ. ಚಿನ್ನದ ಮಳಿಗೆಯೊಂದರ ಪ್ರಚಾರಕ್ಕಾಗಿ ಇದಾಗಲೇ ಹಲವಾರು ಸೆಲೆಬ್ರಿಟಿಗಳು ಬಂದಿದ್ದು, ಅದೇ ರೀತಿ ಸೂರಜ್​ ಮತ್ತು ರಾಶಿಕಾ ಶೆಟ್ಟಿಯನ್ನು ಪ್ರೊಮೋಷನ್​ಗಾಗಿ ಕರೆಸಲಾಗಿದೆ. ಸೆಲೆಬ್ರಿಟಿಗಳು ಚಿನ್ನ ಖರೀದಿ ಮಾಡಿದಂತೆ ತೋರಿಸಿದರೆ, ಜನರು ಆಕರ್ಷಿತರಾಗಿ ಖರೀದಿ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹೀಗೆ ಚಿನ್ನ ಖರೀದಿ ಮಾಡಿದಂತೆ ತೋರಿಸಲಾಗುತ್ತದೆ ಅಷ್ಟೇ. ಹಿಂದೆ ಬಿಗ್​ಬಾಸ್​​ ವಿನ್ನರ್​ ಗಿಲ್ಲಿನಟನಿಗೆ ಕೆಜಿಗಟ್ಟಲೆ ಚಿನ್ನ ಹಾಕಿದಾಗ, ಅದನ್ನು ಅವರು ವಾಪಸ್​ ಮಾಡಿರಲಿಲ್ಲವೆ, ಇದೂ ಕೂಡ ಹಾಗೆನೇ.

ಇದಾಗಲೇ ಈ ಜೋಡಿ, ತಮ್ಮಿಬ್ಬರ ನಡುವೆ ಅಂಥದ್ದೇನೂ ಇಲ್ಲ, ಒಳ್ಳೆಯ ಗೆಳೆತನ ಅಷ್ಟೇ ಎಂದಿದೆ. ಸೂರಜ್​ ಅವರು ಎಷ್ಟು ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅದಕ್ಕಾಗಿಯೇ ಅವರ ಮೇಲೆ ಸ್ನೇಹ ಇರೋದು ನಿಜ. ಅವರ ಪವಿತ್ರ ಬಂಧನ ಸಿನಿಮಾ ಪ್ರಮೋಷನ್​ಗೂ ನಾನು ನನ್ನೆಲ್ಲಾ ಕಮಿಟ್​ಮೆಂಟ್​ ಬಿಟ್ಟು ಹೋಗಿದ್ದು ಕೂಡ ಇದೇ ಕಾರಣಕ್ಕೆ ಎಂದಿದ್ದರು ರಾಶಿಕಾ (Bigg Boss Rashika Shetty)

ಬಿಗ್​ಬಾಸ್​ ಮನೆಯಲ್ಲಿ ನನ್ನ ಪವಿತ್ರ ಬಂಧನ ಯಾರ ಜೊತೆ ಎಂದು ಹೇಳುವುದಾದರೆ, ಅದು ಸೂರಜ್​ ಜೊತೆಗೆನೇ. ಅವರು ಬಿಗ್​ಬಾಸ್​ ಮನೆಗೆ ಬಂದಿರಲಿಲ್ಲವೆಂದರೆ, ನನಗೆ ಯಾರ ಜೊತೆನೂ ಫ್ರೆಂಡ್​ಷಿಪ್​ ಆಗ್ತಾ ಇರಲಿಲ್ಲ. ಯಾರ ಜೊತೆನೂ ಕಂಫರ್ಟ್​ ಎನ್ನಿಸುತ್ತಾ ಇರಲಿಲ್ಲ ಎಂದಿದ್ದರು. ಸೂರಜ್​ ಕೂಡ ತಾವಿಬ್ಬರೂ ಒಳ್ಳೆಯ ಫ್ರೆಂಡ್ಸ್​ ಅಷ್ಟೇ ಎಂದಿದ್ದಾರೆ.

Source link

Leave a Reply

Your email address will not be published. Required fields are marked *