ಹಾಟ್​ ಅವತಾರದಲ್ಲಿ ಪಡ್ಡೆಗಳ ನಶೆ ಏರಿಸಿದ Bigg Boss ತನಿಷಾ ಕುಪ್ಪಂಡ: ಥಹರೇವಾರಿ ಕಮೆಂಟ್ಸ್​

ಹಾಟ್​ ಅವತಾರದಲ್ಲಿ ಪಡ್ಡೆಗಳ ನಶೆ ಏರಿಸಿದ Bigg Boss ತನಿಷಾ ಕುಪ್ಪಂಡ: ಥಹರೇವಾರಿ ಕಮೆಂಟ್ಸ್​

ಹಾಟ್​ ಅವತಾರದಲ್ಲಿ ಪಡ್ಡೆಗಳ ನಶೆ ಏರಿಸಿದ Bigg Boss ತನಿಷಾ ಕುಪ್ಪಂಡ: ಥಹರೇವಾರಿ ಕಮೆಂಟ್ಸ್​

ಬಿಗ್​ಬಾಸ್​ ಖ್ಯಾತಿಯ ನಟಿ ತನಿಷಾ ಕುಪ್ಪಂಡ, ನಟನೆ ಮಾತ್ರವಲ್ಲದೆ ‘ಕೋಣ’ ಚಿತ್ರದ ಮೂಲಕ ನಿರ್ಮಾಪಕಿಯಾಗಿಯೂ ಯಶಸ್ಸು ಕಂಡಿದ್ದಾರೆ. ಇತ್ತೀಚೆಗೆ ತಮ್ಮ ಹಾಟ್​ ಫೋಟೋಶೂಟ್​ ಮೂಲಕವೂ ಅವರು ಸದ್ದು ಮಾಡುತ್ತಿದ್ದಾರೆ.

ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ (Bigg Boss Tanisha Kuppanda) ಈಗ ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್​ ಆಗಿದ್ದಾರೆ. ಅದರಲ್ಲಿಯೂ ಬಿಗ್​ಬಾಸ್​ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದರು.

‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ನಟಿ ಇದೀಗ ಪೆನ್​ಡ್ರೈವ್​ ಸಿನಿಮಾದಲ್ಲಿಯೂ ಸಕತ್​ ನಟನೆ ಮಾಡಿದ್ದಾರೆ. ಇಲ್ಲಿ ಅವರು ಪೊಲೀಸ್​​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಇದೀಗ ನಿರ್ಮಾಣ ಹಂತಕ್ಕೂ ಇಳಿದು ಸಕ್ಸಸ್ ಕಂಡಿದ್ದಾರೆ. ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕ ಪಾಲ್, ರವಿಕಿರಣ್ .ಎನ್ ಅವರು ‘ಕೋಣ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಶಾಂಕ್ ಶೇಷಗಿರಿ ಅವರ ಸಂಗೀತ ನಿರ್ದೇಶನವಿದೆ. ವೀನಸ್ ನಾಗರಾಜ್‌ ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಉಮೇಶ್ ಆರ್. ಬಿ. ಅವರ ಸಂಕಲನವಿದ್ದು, ಸಾಹಸ ನಿರ್ದೇಶಕರಾಗಿ ವಿನೋದ್‌ಕುಮಾರ್ ಹಾಗೂ ನೃತ್ಯ ನಿರ್ದೇಶನವನ್ನು ಮುರುಗನ್ ಮಾಡಿದ್ದಾರೆ. ತನಿಷಾ ಕುಪ್ಪಂಡ ಈಚೆಗೆ ಪೈರಸಿ ವಿರುದ್ಧ ಜಗ್ಗೇಶ್​ ಅವರ ಕೈಜೋಡಿಸಿದ್ದರು. ಅದರಲ್ಲಿ ಯಶಸ್ಸನ್ನೂ ಕಂಡಿದ್ದರು.

ಹೀಗೆ ಸಕತ್​ ಬಿಜಿಯಾಗಿರೋ ತನಿಷಾ ಅವರು, ಇದೀಗ ಸಕತ್​ ಹಾಟ್​ ಅವತಾರದಲ್ಲಿ ಮತ್ತೊಮ್ಮೆ ವಿಡಿಯೋ ಶೂಟ್​ ಮಾಡಿಸಿಕೊಂಡಿದ್ದಾರೆ. ಸ್ಲಿಟ್​ ಡ್ರೆಸ್​ನಲ್ಲಿ ಈ ವಿಡಿಯೋಶೂಟ್​ ಮಾಡಿಸಿಕೊಂಡಿದ್ದು, ಪಡ್ಡೆಗಳ ನಶೆ ಏರಿಸಿದ್ದಾರೆ. ಇವರ ಈ ವಿಡಿಯೋಗೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ.

ತನಿಷಾ ಅವರು ಸದ್ಯ ನಾನ್​ವೆಜ್​ ಬಿಟ್ಟು ಸದ್ದು ಮಾಡುತ್ತಿದ್ದಾರೆ. ಈ ಬಗ್ಗೆ ಅವರೇ ಖುದ್ದಾಗಿ ವಿಷಯ ತಿಳಿಸಿದ್ದಾರೆ. ಹಾಗೆಂದು ಅವರು ಪರ್ಮನೆಂಟ್​ ಆಗೇನೂ ನಾನ್​ವೆಜ್​ ಬಿಟ್ಟಿಲ್ಲ. ಆದ್ರೆ ಕೆಲವು ದಿನಗಳ ಮಟ್ಟಿಗೆ ಬಿಟ್ಟಿರುವುದಾಗಿ ಹೇಳಿದ್ದಾರೆ. ಅದಕ್ಕೆ ಕಾರಣವೂ ಇದೆ. ಅಂದಹಾಗೆ ತನಿಷಾ ಅವರ ಕೋಣ ಚಿತ್ರ ಮುಂದಿನ ಚಿತ್ರ ನವೆಂಬರ್​ ತಿಂಗಳಿನಲ್ಲಿ ರಿಲೀಸ್​ ಆಗಲಿದೆ. ಅದರ ಪ್ರಮೋಷನ್​ ಶುರು ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಚಾಮುಂಡೇಶ್ವರಿ ದೇವಿಯಲ್ಲಿ ಪೂಜೆ ಸಲ್ಲಿಸಲು ಹೋಗಿದ್ದಾರೆ. ಆಗ ಅವರಿಗೆ ನಾನ್​ ವೆಜ್​ ಬಿಡಬೇಕು ಎನ್ನಿಸಿದೆಯಂತೆ. ಅದಕ್ಕಾಗಿ ಇದನ್ನು ಬಿಟ್ಟಿರುವುದಾಗಿ ಹೇಳಿದ್ದಾರೆ.

ನಾನು ಮೊದಲ ಸಲ ಚಾಮುಂಡಿ ಬೆಟ್ಟಕ್ಕೆ ಹೋದೆ. ಅಲ್ಲಿಗೆ ಹೋಗಿ ಬಂದಾಗ ನಾನ್​ವೆಜ್​ ಬಿಡಬೇಕು ಎನ್ನಿಸಿತು. ಆದ್ದರಿಂದ ದೇವಿಯ ಬಳಿ ಹೇಳಿಕೊಂಡಿದ್ದೇನೆ, ಆದ್ದರಿಂದ ನಾನ್​ವೆಜ್​ ತಿನ್ನುವುದಿಲ್ಲ ಎಂದಿದ್ದಾರೆ. ಹಾಗೆಂದು ದೇವಿಯ ಬಳಿ ಅವರು ಬೇಡಿಕೊಂಡದ್ದು ಅವರ ಮುಂಬರುವ ಚಿತ್ರ ರಿಲೀಸ್​ ಆಗುವವರೆಗೂ ನಾನ್​ವೆಜ್​ ತಿನ್ನಲ್ಲ ಎಂದು ಅಷ್ಟೇ. ಅದೀಗ ರಿಲೀಸ್​ ಆಗಿರುವುದರಿಂದ ನಾನ್​ವೆಜ್​ ತಿನ್ನುತ್ತಿದ್ದಾರೋ ಗೊತ್ತಿಲ್ಲ.

Source link

Leave a Reply

Your email address will not be published. Required fields are marked *