17

Image Credit : Instagram
ಟಾಸ್ಕ್ಗಳ ಭರಾಟೆ
ಬಿಗ್ಬಾಸ್ನಲ್ಲಿ ಇದೀಗ ಟಾಸ್ಕ್ಗಳ ಭರಾಟೆ ಜೋರಾಗಿ ನಡೆಯುತ್ತಿದೆ. ಇದಾಗಲೇ ಬಿಗ್ಬಾಸ್ 74ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನು ಷೋ ಮುಗಿಯಲು ಕೆಲವೇ ದಿನಗಳು ಬಾಕಿ ಇವೆ. ಇಂಥ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಕ್ಕೆ ಹೋಗಲು ಇಷ್ಟ ಪಡುವುದಿಲ್ಲ. ತಮ್ಮ ಉಳಿವಿಗಾಗಿ ಶ್ರಮಿಸುತ್ತಲೇ ಇದ್ದಾರೆ.
27
Image Credit : Instagram
ಏಳು ಮಂದಿ ನಾಮಿನೇಟ್
ಈ ವಾರ ಗಿಲ್ಲಿ ನಟ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ, ಅಶ್ವಿನಿ, ರಾಶಿಕಾ ಮನೆಯಿಂದ ಹೊರಕ್ಕೆ ಹೋಗುವವರಲ್ಲಿ ನಾಮಿನೇಟ್ ಆಗಿದ್ದಾರೆ. ಈ ಏಳು ಮಂದಿ ಪೈಕಿ ಯಾರು ಔಟ್ ಆಗುತ್ತಾರೋ ಕಾದು ನೋಡಬೇಕಿದೆ.
37
Image Credit : Instagram
ಅಶ್ವಿನಿ ಗೌಡ ಸಲಹೆ
ಆದರೆ ಇದರ ನಡುವೆಯೇ ಮಾಳುಗೆ ಹೊಸ ಲುಕ್ ಬಂದಿದೆ. ಅವರ ಕೂದಲಿಗೆ ಕತ್ತರಿ ಬಿದ್ದಿದೆ. ಅಶ್ವಿನಿ ಗೌಡ (Bigg Boss Ashwini Gowda) ಅವರ ಮಾತಿನ ಮೇರೆಗೆ ಈ ಕಟಿಂಗ್ ಮಾಡಲಾಗಿದೆ.
47
Image Credit : Instagram
ಎರಡು ಟೀಮ್
ಇದಾಗಲೇ ಬಿಗ್ಬಾಸ್ ಮನೆಯಲ್ಲಿ, ಟಾಸ್ಕ್ ಸಂಬಂಧ ಎರಡು ಗುಂಪು ಮಾಡಲಾಗಿದೆ. ಒಂದು ರಜತ್ ಟೀಂ ಇನ್ನೊಂದು ಅಶ್ವಿನಿ ಗೌಡ ಟೀಂ, ರಜತ್ ಅವರ ಗುಂಪಿನಲ್ಲಿ ಧನುಷ್, ಗಿಲ್ಲಿ, ಕಾವ್ಯ, ರಘು ಹಾಗೂ ರಾಶಿಕಾ, ಕಾವ್ಯ ಇದ್ದು, ಬಾಕಿ ಇರುವ ಸ್ಪರ್ಧಿಗಳು ಅಶ್ವಿನಿ ಗೌಡ ಗುಂಪಿನಲ್ಲಿ ಇದ್ದಾರೆ.
57
Image Credit : Instagram
ಒಂದು ಗುಂಪು ವಿಲನ್
ಒಂದು ಗುಂಪಿನ ಸ್ಪರ್ಧಿಗಳನ್ನು ವಿಲನ್ ಮಾಡಲಾಗಿದೆ. ಅವರು ಈಗ ಇನ್ನೊಂದು ಟೀಮ್ಗೆ ಕಷ್ಟ ಕೊಡಬೇಕಿದೆ. ಕಠಿಣ ಟಾಸ್ಕ್ಗಳನ್ನೂ ನೀಡಬೇಕಿದೆ. ಆದ್ದರಿಂದ ಪರಸ್ಪರ ಎರಡೂ ಟೀಮ್ಗಳು ಜಿದ್ದಿಗೆ ಬಿದ್ದವರಂತೆ ಕಠಿಣ ಟಾಸ್ಕ್ ಕೊಡುತ್ತಿದ್ದಾರೆ.
67
Image Credit : Instagram
ಕಾವ್ಯಾ ಕೂದಲಿಗೆ ಬಣ್ಣ
ನಿನ್ನೆ ಕಾವ್ಯಾ ಶೈವ (Bigg Boss Kavya Shaiva) ಅವರ ಕೂದಲಿಗೆ ಬಣ್ಣ ಹಾಕಲಾಗಿದ್ದು, ರಜತ್ಗೆ ಟ್ಯಾಟೂ ಹಾಕಲಾಗಿತ್ತು. ಆದರೆ ಇದೀಗ ಮಾಳು ಅವರ ಕೂದಲು ಕಟ್ ಮಾಡುವಂತೆ ಅಶ್ವಿನಿ ಗೌಡ ಹೇಳಿದ್ದರಿಂದ ಕಟ್ ಮಾಡಲಾಗಿದೆ.
77
Image Credit : Instagram
ಹೇಗಿದೆ ಹೊಸ ಲುಕ್?
ಮಾಳು ಹೊಸ ಲುಕ್ ಹೇಗಿದೆ ಎನ್ನುವ ಹೆಸರಿನಲ್ಲಿ ಈ ಪ್ರೊಮೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ಮಾಳು ಅವರನ್ನು ವಿಶೇಷ ರೀತಿಯಲ್ಲಿ ನೋಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.