ಬಿಗ್‌ಬಾಸ್ ವಿಜೇತ ವಿನಯ್ ಗೌಡ ಅವರು, ಡಾಗ್ ಸತೀಶ್‌ರನ್ನು ನಾಯಿಗಳ ಹೆಸರೇ ಗೊತ್ತಿಲ್ಲದ ಬ್ರೀಡರ್ ಎಂದು ಕರೆದಿದ್ದಾರೆ. ಗೂಗಲ್‌ನಲ್ಲಿ ನಂಬರ್ ಒನ್ ಎಂದು ಸ್ವಯಂ ಘೋಷಿಸಿಕೊಂಡಿರುವ ಸತ್ಯ ಬಿಚ್ಚಿಟ್ಟಿರುವ ವಿನಯ್, ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಿರುವ ವಿರುದ್ಧ ಕೇಸ್ ಹಾಕ್ಬೇಕು ಎಂದಿದ್ದಾರೆ.

ವಿಶ್ವದ ನಂಬರ್ ಒನ್ ಡಾಗ್ ಬ್ರೀಡರ್ ಎಂದುಕೊಂಡು ತಿರುಗಾಡುವ, ಬಾಯಿ ಬಿಟ್ಟರೆ, ಲಕ್ಷ, ಕೋಟಿ ಎಂದು ಬೀಗುವ ಬಿಗ್‌ಬಾಸ್ ಡಾಗ್ ಸತೀಶ್ (Bigg Boss Dog Satish) ಇದಾಗಲೇ ಸುದೀಪ್ ಸೇರಿದಂತೆ ಎಲ್ಲರ ವಿರುದ್ಧವೂ ನಾಲಿಗೆ ಹರಿಬಿಟ್ಟಿದ್ದಾರೆ. ಇದಾಗಲೇ ಅವರ ಬಗ್ಗೆ ದೂರುಗಳೂ ದಾಖಲಾಗಿವೆ.

ಇದರ ಮಧ್ಯೆಯೇ, ಬಿಗ್‌ಬಾಸ್ ವಿಜೇತ ವಿನಯ್ ಗೌಡ ಅವರು ಡಾಗ್ ಸತೀಶ್ ಅವರ ಸತ್ಯವನ್ನು ಜನರ ಮುಂದೆ ಇಟ್ಟಿದ್ದಾರೆ. ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ವಿಜಯ್ ಗೌಡ ಅವರು, ನಾಲ್ಕಾರು ನಾಯಿಗಳ ಹೆಸರೇ ಗೊತ್ತಿಲ್ಲದ ಡಾಗ್ ಬ್ರೀಡರ್ ಆತ. ರಜತ್ ಅವರ ಸಂದರ್ಶನದಲ್ಲಿಯೇ ನಾನು ನೋಡಿದ್ದೇನೆ ಎಂದಿದ್ದಾರೆ.

ಗೂಗಲ್‌ನಲ್ಲಿ ನಾನೇ ನಂಬರ್ ಒನ್ ಡಾಗ್ ಬ್ರೀಡರ್ ಎಂದು ಬರುತ್ತದೆ ಎಂದು ಹೇಳಿಕೊಂಡು ತಿರುಗುತ್ತಾರೆ. ಇದು ನಿಜನೇ. ಆದರೆ, ನಾಲ್ಕಾರು ಸಂದರ್ಶನದಲ್ಲಿ ನಾನೇ ನಂಬರ್ ಒನ್ ಎಂದು ಹೇಳುತ್ತಾ ಹೋದರೆ ಗೂಗಲ್ ಅದನ್ನೇ ಪಿಕ್ ಮಾಡಿ ಹಾಕುತ್ತದೆ. ನೀವು ಕೆಳಗೆ ಸ್ಕ್ರೋಲ್ ಮಾಡಿದರೆ ಅಲ್ಲಿ ಇದು ಗೂಗಲ್ ಹೇಳುವುದಲ್ಲ. ಸ್ವಯಂ ಘೋಷಿತವಾಗಿ ಹೇಳಿಕೊಂಡಿರುವುದು ಎನ್ನುವ ಸೂಚನೆಯೂ ಇರುತ್ತದೆ, ಅದನ್ನು ನೋಡಿ ಎಂದಿದ್ದಾರೆ.

ಭಾರತೀಯ ಡಾಗ್ ಅಸೋಸಿಯೇಷನ್ ಅವರು ಇವರನ್ನು ಬ್ಯಾನ್ ಮಾಡುವ ಅಗತ್ಯವಿದೆ. ಒದ್ದು ಓಡಿಸಬೇಕಿದೆ. ಸಿಎಂ ಬಂದರೂ ವಿಡಿಯೋ ಡಿಲೀಟ್ ಮಾಡಲ್ಲ ಎನ್ನುವ ಮೂಲಕ ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಿ ಕ್ರಿಮಿನಲ್ ಆಫೆನ್ಸ್ ಮಾಡಿದ್ದಾರೆ. ಇಂಥವರನ್ನು ’ಸಿ’ ಎನ್ನಬೇಕು, ಆ ಕೆಟ್ಟ ಪದ ನನ್ನ ಬಾಯಿಯಿಂದ ಹೊರಡಲ್ಲ ಎಂದಿದ್ದಾರೆ ವಿನಯ್ ಗೌಡ.

ಅವರಿಗೆ ಮಾನಸಿಕ ಸಮಸ್ಯೆ ಇದೆ. ಅವರಿಗೆ ಶೀಘ್ರದಲ್ಲಿ ಟ್ರೀಟ್‌ಮೆಂಟ್ ಬೇಕಿದೆ. ಇದರಿಂದ ಬೇರೆಯವರೂ ನೆಮ್ಮದಿಯಾಗಿ ಇರಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ ವಿನಯ್.

ಸೋಷಿಯಲ್ ಮೀಡಿಯಾದವರು, ಪಾಪರಾಜಿಗಳು ಐದು ನೂರು ಬೀಸಾಕಿದರೆ ನನ್ನ ಹಿಂದೆ ಬರುತ್ತಾರೆ ಎಂದು ಕುಡಿದು ಮಾತನಾಡಿರೋದು ಗೊತ್ತಾಗಿದೆ. ಇಂಥವರನ್ನು ಏನು ಮಾಡಬೇಕು, ಮಾಧ್ಯಮಗಳೂ ನನ್ನ ಬಳಿ ಇವೆ. ಎಲ್ಲರೂ ನನ್ನ ಮಾತು ಕೇಳ್ತಾರೆ ಎನ್ನುತ್ತಾ ಮಾತನಾಡುವ ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ವಿನಯ್ ಗೌಡ ಕಿಡಿ ಕಾರಿದ್ದಾರೆ.

Source link
ನಾಯಿಗಳ ಹೆಸ್ರೇ ಗೊತ್ತಿಲ್ಲದ ’ಸಿ’ ಆತ: ಒದ್ದು ಓಡಿಸಿ ಟ್ರೀಟ್‌ಮೆಂಟ್ ಕೊಡ್ಬೇಕು: Bigg Boss ವಿನಯ್ ಗೌಡ ಕಿಡಿ