Headlines

Bigg Boss ಗಿಲ್ಲಿ ನಟ ಜಿಮ್​ನಲ್ಲಿ ವರ್ಕ್​ ಔಟ್​: ಏಕಾಏಕಿ ಫಿಟ್ನೆಸ್​ ಮನಸ್ಸು ಮಾಡಿದ ಹಿಂದಿರೋ ರಹಸ್ಯವೇನು

Bigg Boss ಗಿಲ್ಲಿ ನಟ ಜಿಮ್​ನಲ್ಲಿ ವರ್ಕ್​ ಔಟ್​: ಏಕಾಏಕಿ ಫಿಟ್ನೆಸ್​ ಮನಸ್ಸು ಮಾಡಿದ ಹಿಂದಿರೋ ರಹಸ್ಯವೇನು

Bigg Boss ಗಿಲ್ಲಿ ನಟ ಜಿಮ್​ನಲ್ಲಿ ವರ್ಕ್​ ಔಟ್​: ಏಕಾಏಕಿ ಫಿಟ್ನೆಸ್​ ಮನಸ್ಸು ಮಾಡಿದ ಹಿಂದಿರೋ ರಹಸ್ಯವೇನು
ಬಿಗ್‌ಬಾಸ್ ಇತಿಹಾಸದಲ್ಲೇ ದಾಖಲೆ ಮತಗಳನ್ನು ಪಡೆದು ಗೆದ್ದ ಗಿಲ್ಲಿ ನಟ, ಇದೀಗ ಜಿಮ್‌ನಲ್ಲಿ ಕಠಿಣ ವರ್ಕೌಟ್ ಮಾಡುತ್ತಿದ್ದಾರೆ. ಈ ಹಿಂದೆ ಫಿಟ್ನೆಸ್ ಕಡೆಗಣಿಸಿದ್ದ ಅವರ ಈ ಬದಲಾವಣೆ, ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಪಾದಾರ್ಪಣೆ ಮಾಡುವ ಸಿದ್ಧತೆಯೇ ಎಂಬ ಕುತೂಹಲವನ್ನು ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ.
ಬಿಗ್​ಬಾಸ್​ ಇತಿಹಾಸದಲ್ಲಿಯೇ ದಾಖಲೆ ಪ್ರಮಾಣದ ಮತವನ್ನು ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದವರು ಗಿಲ್ಲಿ ನಟ. ಬಿಗ್​ಬಾಸ್​​ ಮುಗಿದ ಮೇಲೂ ಗಿಲ್ಲಿ ನಟನ ಕ್ರೇಜ್​ ಹೆಚ್ಚಾಗಿದೆ. ಜಾಹೀರಾತು, ಪ್ರಮೋಷನ್​ ಸೇರಿದಂತೆ ವಿವಿಧೆಡೆಗಳಲ್ಲಿ ಇಂದಿಗೂ ಸಕತ್​ ಡಿಮಾಂಡ್​ ಕುದುರಿಸಿಕೊಳ್ತಿದ್ದಾರೆ ಗಿಲ್ಲಿ ನಟ.

ಬಿಗ್​ಬಾಸ್​ ಮನೆಯಲ್ಲಿ ಇರುವಾಗ, ಇವರಿಗೆ ಮ್ಯೂಟೆಂಟ್​ ರಘು ಅವರು ವರ್ಕ್​ ಔಟ್​ ಮಾಡುವಂತೆ ಸಾಕಷ್ಟು ಬಾರಿ ಹೇಳಿದ್ದರೂ ಡೋಂಟ್​ ಕೇರ್​ ಅಂದಿದ್ರು ಗಿಲ್ಲಿ ನಟ. ‘ವರ್ಕೌಟ್ ಮಾಡೋ. ಫಿಟ್ ಆಗಿರ್ತೀಯಾ’ ಎಂದು ಅಡ್ವೈಸ್​ ಕೊಟ್ಟಿದ್ದರೂ ಗಿಲ್ಲಿ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ.

ಆದರೆ, ಇದೀಗ ಲುಕ್ಕೇ ಚೇಂಜ್​ ಆಗಿ ಹೋಗಿದೆ. ಗಿಲ್ಲಿ ನಟ, ಜಿಮ್​ನಲ್ಲಿ ವರ್ಕ್​ಔಟ್​ ಮಾಡುತ್ತಿದ್ದಾರೆ. ಫಿಟ್ನೆಸ್ ಟ್ರೇನರ್ ಕೌಶಿಕ್ ಗೌಡ ಅವರು ಗಿಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ.

ಗಿಲ್ಲಿ ಸ್ಯಾಂಡಲ್​ವುಡ್​ಗೆ ಹೀರೋ ಆಗಿ ಎಂಟ್ರಿ ಕೊಡಲು ಹೀಗೆ ಮಾಡ್ತಿರಬಹುದು ಎನ್ನುತ್ತಿದ್ದಾರೆ ಅವರ ಫ್ಯಾನ್ಸ್​. ಅಷ್ಟಕ್ಕೂ ಗಿಲ್ಲಿಗೆ ಬಿಗ್ ಬಾಸ್ ನಿಂದ ಸಿಕ್ಕ ಜನಪ್ರಿಯತೆಯನ್ನ ನೋಡಿದವರು ಆತ ನಟಿಸಿದ ಸಿನಿಮಾಗಳ ಪಾಲಿಗೆ ಪ್ಲಸ್ ಆಗುತ್ತೆ ಅಂದುಕೊಂಡಿದ್ರು. ಆದ್ರೆ ಗಿಲ್ಲಿ ನಟಿಸಿದ ಸರ್ಕಾರಿ ಶಾಲೆ ಎಚ್.8 ಆಗಲಿ, ಸೂಪರ್ ಹಿಟ್ ಅನ್ನೋ ಚಿತ್ರವಾಗಲಿ ಸದ್ದು ಮಾಡ್ಲಿಲ್ಲ. ಬಿಗ್ ಬಾಸ್​​ನಲ್ಲಿ ಗಿಲ್ಲಿಯನ್ನ ನೋಡಿ ಮೆಚ್ಚಿದವರು ಬಿಗ್ ಸ್ಕ್ರೀನ್​ನಲ್ಲಿ ಗಿಲ್ಲಿಯನ್ನ ನೋಡ್ಲಿಕ್ಕೆ ಬರಲಿಲ್ಲ.

ತನಗೆ ನಿರ್ದೇಶಕನಾಗೋ ಆಸೆ ಇದೆ ಎಂದಿದ್ದರು ಗಿಲ್ಲಿ. ಇವರ ಒಂದೇ ಒಂದು ಫೋನ್​ ಕಾಲ್​ ಮಾಡಿದ್ರೂ ಸಾಕು, ನಟನಾಗಲು ಅವಕಾಶ ಕೊಡುವುದಾಗಿ ಹೇಳಿದ್ದರು ತರುಣ್​ ಸುಧೀರ್​. ಗಿಲ್ಲಿಯ ಮುಂದಿನ ನಡೆ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಈ ಹಿಂದೆ ಬಿಗ್ ಬಾಸ್ ಗೆದ್ದಿದ್ದ ಪ್ರಥಮ್, ಅದೇ ಫೇಮ್​ನಿಂದ ಸಿನಿಮಾದಲ್ಲೂ ಗೆಲ್ತಿನಿ ಅಂದುಕೊಂಡು ಸಾಲು ಸಾಲು ಸಿನಿಮಾ ಮಾಡಿ ನೆಲಕಚ್ಚಿದ್ದರು. ಸದ್ಯ ಗಿಲ್ಲಿಗೂ ಇಂಥದ್ದೇ ಚಾಲೆಂಜ್ ಎದುರಾಗಿದೆ. ಮುಂದೇನು ಮಾಡಬೇಕು ಅನ್ನೋದು ತಲೆಯಲ್ಲಿ ಕೊರೀತಾ ಇದೆ.

Source link

Leave a Reply

Your email address will not be published. Required fields are marked *