ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ

ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ


ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ, ಬಿಗ್ ಬಾಸ್ ಮನೆಯೊಳಗಿನ ಅನುಭವಗಳ ಬಗ್ಗೆ ಹಂಚಿಕೊಳ್ಳುವ ವೇಳೆ ದರ್ಶನ ಅವರ ಬಗ್ಗೆಯೂ ಅಚ್ಚರಿಯ ವಿಚಾರಗಳನ್ನು ಹೇಳಿದ್ದಾರೆ. ಡೆವಿಲ್ ಚಿತ್ರದ ವೇಳೆ ಡಿ ಬಾಸ್ ದರ್ಶನ್ ಅವರನ್ನು ಭೇಟಿ ಮಾಡಿದ್ದ ಘಟನೆಯನ್ನು ಗಿಲ್ಲಿ ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದಾರೆ. ‘ದರ್ಶನ್ ಅವರು ನನ್ನನ್ನು ಕರೆದು ಹಾಸ್ಯವನ್ನು ಮೆಚ್ಚಿ, ನೀವು ಕಾಮಿಡಿ ಎಲ್ಲಾ ಸಕ್ಕತ್ತಾಗಿ ಮಾಡ್ತೀರಾ ಎಂದು ಹೇಳಿದ್ದರು. ದರ್ಶನದೊಂದಿಗೆ ಈ ಸಿನಿಮಾದಲ್ಲಿ ನಟಿಸಿರುವುದು ನನಗೆ ತುಂಬಾ ಖುಷಿಯಾಗಿದೆ. ಜೊತೆಗೆ ಇದು ನನ್ನ ಅದೃಷ್ಟ’ ಎಂದು ಗಿಲ್ಲಿ ಹೇಳಿದ್ದಾರೆ. ಇದರೊಂದಿಗೆ ನಟ ಶಿವರಾಜ್‌ಕುಮಾರ್ ಅವರು ಗಿಲ್ಲಿ ವಿನ್ನರ್ ಆಗಿ ಹೊರಬಂದಾಗ ಶುಭ ಹಾರೈಸಿದ್ದಾರೆ ಎಂದು ಹೇಳಿದ್ದಾರೆ. ಜನರಿಂದ ಸಿಕ್ಕ ಪ್ರೀತಿ, ಸೆಲೆಬ್ರಿಟಿಗಳ ಮೆಚ್ಚುಗೆಯನ್ನು ಗಿಲ್ಲಿ ಮರೆಯಲಾಗದ ನೆನಪು ಎಂದು ಬಣ್ಣಿಸಿದ್ದಾರೆ.

ಬಿಗ್ ಬಾಸ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *