ಪಾಟ್ನಾ, ನವೆಂಬರ್ 18: ಬಿಹಾರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ(ವಿಧಾನಸಭೆ ಚುನಾವಣೆ)ಯಲ್ಲಿ ಆರ್ಜೆಡಿ ಹೀನಾಯ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೇ ಕುಟುಂಬ ಕಲಹ ಕೂಡ ಮುನ್ನೆಲೆಗೆ ಬಂದಿತ್ತು. ತೇಜಸ್ವಿ ಯಾದವ್ ಸಹೋದರಿ ರೋಹಿಣಿ ಆಚಾರ್ಯ ತಮ್ಮನ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ನನ್ನನ್ನು ತೇಜಸ್ವಿ ಕುಟುಂಬದಿಂದ ಹಾಗೂ ಪಕ್ಷದಿಂದ ಹೊರಹಾಕಿದ್ದಾನೆ, ನನ್ನ ಮೇಲೆ ಚಪ್ಪಲಿ ಎತ್ತಿದ್ದಾನೆ. ಕುಟುಂಬದವರು ಕೊಳಕು ಕಿಡ್ನಿ ಬದಲಾಗಿ ಚುನಾವಣಾ ಟಿಕೆಟ್ ಪಡೆದಿದ್ದಾಳೆ ಎಂದು ಹಿಯಾಳಿಸಿದ್ದಾಗಿ ರೋಹಿಣಿ ಅಳಲು ತೊಡಿಸಿಕೊಂಡಿದ್ದರು.
ಇಷ್ಟೆಲ್ಲಾ ಘಟನೆಗಳು ಬಳಿಕ ಇದೀಗ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಇದು ನಮ್ಮ ಕುಟುಂಬದ ವಿಷಯ, ತೇಜಸ್ವಿ ಹಾಗೂ ರೋಹಿಣಿ ನಡುವೆ ಇರುವ ಮನಸ್ತಾಪ ಶೀಘ್ರವೇ ಹರಿದು ಬರಲಿದೆ ಎಂದು ಹೇಳಿದ್ದಾರೆ.ಸೋಮವಾರ, 1 ಪೋಲೊ ರಸ್ತೆಯಲ್ಲಿರುವ ತೇಜಸ್ವಿ ಯಾದವ್ ಅವರ ಅಧಿಕೃತ ನಿವಾಸದಲ್ಲಿ ಆರ್‌ಜೆಡಿ ಶಾಸಕರು ಮತ್ತು ನಾಯಕರ ಸಭೆ ನಡೆಯಿತು. ಲಾಲು ಪ್ರಸಾದ್ ಯಾದವ್ ಕೂಡ ಸಭೆ ನಡೆಸಿದರು.
ಸಿದ್ಧಾಂತದ ಬಗ್ಗೆ ಯಾವುದೇ ರಾಜಿ ಇರುವುದಿಲ್ಲ ಎಂದು ಲಾಲು ಶಾಸಕರು ಮತ್ತು ನಾಯಕರಿಗೆ ಹೇಳಿದರು. ನಾವು ಬಡವರ ಪರವಾಗಿ ಧ್ವನಿ ಎತ್ತುವುದನ್ನು ಮುಂದುವರಿಸಬೇಕು. ಬಿಹಾರದಲ್ಲಿ ಇಂಡಿ ಮೈತ್ರಿಕೂಟವನ್ನು ಎನ್‌ಡಿಎ ಸೋಲಿಸಿದೆ.243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ, ಎನ್‌ಡಿಎ 202 ಸ್ಥಾನಗಳನ್ನು ಗೆದ್ದರೆ, ಆರ್‌ಜೆಡಿ 143 ಸ್ಥಾನಗಳಲ್ಲಿ ಕೇವಲ 25 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.
ಚುನಾವಣಾ ಸೋಲಿನ ಜೊತೆಗೆ, ಸ್ಥಾಪಕ ಲಾಲು ಪ್ರಸಾದ್ ಅವರ ಕುಟುಂಬದಲ್ಲಿ ಬೆಳೆಯುತ್ತಿರುವ ಭಿನ್ನಾಭಿಪ್ರಾಯದಿಂದ ಪಕ್ಷವು ಎರಡು ಸವಾಲುಗಳನ್ನು ಎದುರಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ರೋಹಿಣಿ, ತನ್ನನ್ನು ಅನಾಥಳನ್ನಾಗಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: Nitish Kumar Resigns: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ
ರೋಹಿಣಿ ಪೋಸ್ಟ್‌ನಲ್ಲಿ ಹರಿಯಾಣದ ಆರ್‌ಜೆಡಿ ಸಂಸದ ಸಂಜಯ್ ಯಾದವ್ ಮತ್ತು ಉತ್ತರ ಪ್ರದೇಶದ ರಾಜಕೀಯ ಕುಟುಂಬದಿಂದ ಬಂದ ರಮೇಶ್ ಅವರು ಆರ್‌ಜೆಡಿಯ ಚುನಾವಣಾ ಸೋಲಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಆರ್‌ಜೆಡಿಯೊಳಗಿನ ಈ ಕೌಟುಂಬಿಕ ಕಲಹಕ್ಕೆ ತೇಜಸ್ವಿ ಯಾದವ್ ಅವರನ್ನು ಸೋಮವಾರ ಎನ್‌ಡಿಎ ನಾಯಕರು ತೀವ್ರವಾಗಿ ಟೀಕಿಸಿದರು. ತನ್ನ ಮನೆಯ ಮಹಿಳೆಯರನ್ನು ಗೌರವಿಸಿದ ವ್ಯಕ್ತಿ ಬಿಹಾರದ ಭವಿಷ್ಯದ ಬಗ್ಗೆ ಹೇಗೆ ಮಾತನಾಡಲು ಸಾಧ್ಯ? ಎಂದು ಅವರು ಕೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ