ರಾಜಕೀಯ ಪಕ್ಷವೂ ಗೆಲ್ಲುವುದಾಗಿ ಹೇಳಿಕೆ ನೀಡುತ್ತಿದೆ ಆದರೆ ರಿಯಾಲಿಟಿ ಏನೆಂದರೆ ಅವೆಲ್ಲಾ ಪಕ್ಷಗಳು ಸೇರಿದರೂ ಗೆಲುವು ಸಾಧ್ಯವಿಲ್ಲ ಎಂದು ಮಿಮ್ಸ್ ಮಾಡಲಾಗಿದೆ. ಅದರಲ್ಲಿ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್ ನಡುವಿನ ಸಂಭಾಷಣೆಯಂತೆ ಪೋಸ್ಟರ್ ಬಳಸಲಾಗಿತ್ತು, ಅದರಲ್ಲಿ ತೇಜಸ್ವಿ ಯಾದವ್ ತಲೆಯ ಮೇಲೆ ಕೈಹೊತ್ತುಕೊಂಡರೆ ಲಾಲೂ ಮಗನಿಗೆ ಸಮಾಧಾನ ಮಾಡುತ್ತಾ ನಿನ್ನಿಂದ ಇದು ಸಾಧ್ಯವಾಗಲಿಲ್ಲ ಎಂದು ಹೇಳುತ್ತಿರುವಂತೆ ಕ್ರಿಯೇಟ್ ಮಾಡಲಾಗಿದೆ.
ಮತ್ತೊಂದು ಕಡೆ ಆಯೆಶಾ ಎಂಬುವವರು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರಶಾಂತ್ ಕಿಶೋರ್ ಚಿತ್ರವಿದೆ. ಅದರಲ್ಲಿ ಗೆಲುವಂತೂ ನಿಮ್ಮದಾಗಿಲ್ಲ ಕೊನೆಯಲ್ಲಿ ಎಲ್ಲಾದರೂ ನಿಮ್ಮ ಹೆಸರಿರಬಹುದು ಎಂದು ಹುಡುಕಿಕೊಳ್ಳಿ ಎಂದು ತಮಾಷೆ ಮಾಡುತ್ತಿದೆ.
ಸೂರಜ್ ಕುಶ್ವಾಹ ಎಂಬುವವರು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ನಿತೀಶ್ ಕುಮಾರ್ ಲಾಲೂ ಪ್ರಸಾದ್ ಯಾದವ್ ಗೆ ಚುನಾವಣೆ ಬಗ್ಗೆ ಕಿವಿ ಮಾತು ಹೇಳುತ್ತಿದೆ. ಓ ಭೇಟಾ ಜಿ ಹಿಂದಿ ಹಾಡನ್ನು ಹಾಡುತ್ತಾ ಚುನಾವಣೆಯಲ್ಲಿ ಈ ಬಾರಿ ಗೆಲುವು ನಮ್ಮದೇ ಎಂದು ಮಾರ್ಮಿಕವಾಗಿ ಹೇಳುತ್ತದೆ.
ರವೀಶ್ ಎಂಬುವವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ದೊಡ್ಡ ಮೀನು ಸಣ್ಣ ಮೀನಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಂದರೆ ಮಹಾಘಟಬಂಧನದಿಂದ ಹೆಚ್ಚು ಮತಗಳನ್ನು ಪಡೆಯಬಹುದು, ನಮಗೆ ಇಷ್ಟವಾಗಿದೆ ಎಂದು ತೋರಿಸಿದರೂ ಕೊನೆಗೆ ಗಳಿಸಿದ್ದು ಇಷ್ಟವೇ ಮತ ಎಂಬಂತಿದೆ.
ಸಾಗರ್ ಎಂಬುವವರು ಪೋಸ್ಟರ್ನಲ್ಲಿ ತೇಜಸ್ವಿ ಯಾದವ್ ಕಾರಿನಲ್ಲಿ ಕುಳಿತಿದ್ದಾರೆ. ನಾನು ಮುಖ್ಯಮಂತ್ರಿಯಾಗುವ ಸರದಿ ಬಂದಾಗ ಎಕ್ಸಿಟ್ ಪೋಲ್ ಕೂಡ ನಿಜವಾಗೋಯ್ತು ಎಂದು ಬೇಸರದಿಂದ ಹೇಳಿಕೊಂಡಿದೆ.




