
ಪಾಟ್ನಾ: ಬಿಹಾರದ ರೈಲೊಂದರ ಜನರಲ್ ಬೋಗಿಯಲ್ಲಿ ಸೀಟಿಗಾಗಿ ನಡೆದ ಜಗಳದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಹರಿದಾಡುತ್ತಿದೆ. ಯುವಕನೊಂದಿಗೆ ಮಹಿಳೆಯೊಬ್ಬಳು ಏಕಾಏಕಿ ಜಗಳಕ್ಕೆ ಇಳಿದಿದ್ದು, ಚಪ್ಪಲಿ ತೋರಿಸಿ ಆತನಿಗೆ ಬೈಯಲು ಶುರು ಮಾಡಿದ್ದಾಳೆ. ಆದರೂ ಕೂಡ ಎಲ್ಲವನ್ನೂ ಕೇಳಿಸಿ ಸಹಿಸಿಕೊಂಡು ಸುಮ್ಮನಾಗಿದ್ದಾನೆ. ಆದರೆ ಮಹಿಳೆ ಯಾವಾಗ ತನ್ನ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಲು ಶುರುಮಾಡಿದಳು ಎಂದು ಕೇರಳದ ಯುವಕ ಆಕೆ ಮಹಿಳೆಯೆಂದು ಲೆಕ್ಕಿಸದೆ ಮುಖಮೂತಿ ನೋಡದೆ ಸರಿಯಾಗಿ ಜಾಡಿಸಿದ್ದಾನೆ. ಸದ್ಯ ವಿಡಿಯೋ ಎಲ್ಲಡೆ ವೈರಲ್ಆಗಿದ್ದು, ಬಾರೀ ಚರ್ಚೆಗೆ ಕಾರಣವಾಗಿದೆ.
ಮಹಿಳೆ ಕೈಯಲ್ಲಿ ಚಪ್ಪಲಿ ಹಿಡಿದು ಯುವಕನಿಗೆ ಬೆದರಿಕೆ ಹಾಕುತ್ತಿರುವುದು, ನನ್ನ ಮಗ ಬೆಂಗಳೂರಿನಲ್ಲಿ ಇಂಜಿನಿಯರ್, ನನ್ನ ಪತಿ ಸೂಪರ್ ವೈಸರ್ ಎಂದು ಅಹಂಕಾರದಿಂದ ಹೇಳುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆದರೂ ಕೂಡ ಶಾಂತ ರೀತಿಯಿಂದಲೇ ಯುವಕ ವರ್ತಿಸುವುದನ್ನು ಕಾಣಬಹುದಾಗಿದೆ. ಆದರೆ ತನ್ನ ಪತ್ನಿಗೆ ಮುಜುಗರಕ್ಕೀಡುಮಾಡುವಂತಹ ಪದಗಳನ್ನು ಮಹಿಳೆ ಬಳಸುತ್ತಿದ್ದಂತೆ ಕೋಪಗೊಂಡ ಯುವಕ ಏಕಾಏಕಿ ಸೀಟಿನಿಂದ ಎದ್ದು ಸರಿಯಾಗಿ ಆ ಹೆಂಗಸಿಗೆ ಕಾಪಾಳಮೋಕ್ಷ ಮಾಡಿದ್ದಾನೆ. @bihta_vision ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಸದ್ಯ ವ್ಯಾಪಕವಾಗಿ ಹರಿದಾಡುತ್ತಿದೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್
ವಿಡಿಯೋ ವೈರಲ್ ಆಗುತ್ತಿದೆ, ನೆಟ್ಟಿಗರು ಮಹಿಳೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ರೈಲು ಪ್ರಯಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಗೌರವದಿಂದ ನಡೆದುಕೊಳ್ಳುವುದು ಅವಶ್ಯಕ ಎಂಬ ಅಭಿಪ್ರಾಯವಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(@bihta_vision)