Headlines

Rose Day : ಪತಿಗೆ ಪ್ರೀತಿಯ ಮಳೆಗೈದ ಪತ್ನಿ, ಮನೆಗೆ ಬಂದ ಪೊಲೀಸ್

Rose Day : ಪತಿಗೆ ಪ್ರೀತಿಯ ಮಳೆಗೈದ ಪತ್ನಿ, ಮನೆಗೆ ಬಂದ ಪೊಲೀಸ್

Rose Day : ಪತಿಗೆ ಪ್ರೀತಿಯ ಮಳೆಗೈದ ಪತ್ನಿ, ಮನೆಗೆ ಬಂದ ಪೊಲೀಸ್

Rose Day Viral Video : ಬಿಹಾರದಲ್ಲಿ ದಂಪತಿ ಖುಷಿ ಖುಷಿಯಾಗಿ ರೋಸ್ ಡೇ ಆಚರಿಸಿದ್ದಾರೆ. ಆದ್ರೆ ವಿಡಿಯೋ ವೈರಲ್ ಆಗ್ತಿದ್ದಂತೆ ತಲೆನೋವು ಶುರುವಾಗಿದೆ. ಮನೆಗೆ ಬಂದ ಪೊಲೀಸ್ ತನಿಖೆ ಕೈಗೆತ್ತಿಕೊಂಡಿದ್ದಾರೆ.

ವ್ಯಾಲೆಂಟೈನ್ ವೀಕ್ ನಲ್ಲಿ ರೋಸ್ ಡೇ ಆಚರಿಸಲಾಗುತ್ತೆ. ಈ ರೋಸ್ ಡೇ ಆಚರಣೆ ದಂಪತಿಗೆ ದುಬಾರಿಯಾಗಿದೆ. ರೋಸ್ ಡೇ ಆಚರಿಸಿ ಅದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಂತೆ ಪೊಲೀಸರು ಮನೆಗೆ ಬಂದಿದ್ದಾರೆ. ಸದ್ಯ ವಿಚಾರಣೆ ನಡೀತಿದೆ.

ಘಟನೆ ನಡೆದಿರೋದು ಬಿಹಾರದ ಮುಂಗೇರ್ನಲ್ಲಿ. ರೋಸ್ ಡೇ ದಿನ ಹೆಂಡ್ತಿ ಕಾಂಚನ್ ದೇವಿ ತನ್ನ ಗಂಡನಿಗೆ ರೋಸ್ ನೀಡಿದ್ದಾಳೆ. ಇದ್ರ ವಿಡಿಯೋನಾ ಸೋಶಿಯಲ್ ಮೀಡಿಯಾದಲ್ಲಿ ಹಂಚ್ಕೊಂಡಿದ್ದಾಳೆ. ಬರೀ ರೋಸ್ ನೀಡಿದ್ರೆ ಯಾರಿಗೇನೂ ಆಗ್ತಿರಲಿಲ್ಲ. ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರೋ ಸ್ಥಿತಿ ಕೂಡ ಬರ್ತಾ ಇರಲಿಲ್ಲ. ಆದ್ರೆ ರೋಸ್ ಜೊತೆ ಗಂಡನಿಗೆ ಒಂದು ಗ್ಲಾಸ್ ವೈನ್ ಹಾಕಿದ್ದಾಳೆ. ಆಲ್ಕೋಹಾಲ್ ಬಾಟಲ್, ಗ್ಲಾಸ್ ನಲ್ಲಿರೋ ಆಲ್ಕೋಹಾಲ್ ಸ್ಪಷ್ಟವಾಗಿ ಕಾಣ್ತಿದೆ. ಗಂಡನಿಗೆ ಮದ್ಯ ನೀಡ್ತಾ ಹೆಂಡ್ತಿ ನಗ್ತಿದ್ದರೆ, ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಮನೆಗೆ ಬಂದಿದ್ದಾರೆ.

ರೋಸ್ ಡೇ ದಿನ ಆಲ್ಕೋಹಾಲ್ ನೀಡಿದ್ರೆ ಏನಾಯ್ತು ಎನ್ನುವ ಪ್ರಶ್ನೆ ಅನೇಕರನ್ನು ಕಾಡ್ಬಹುದು. ಆದ್ರೆ ಬಿಹಾರದಲ್ಲಿ ಮದ್ಯಪಾನವನ್ನು ನಿಷೇಧಿಸಲಾಗಿದೆ. ಕಠಿಣ ಕಾನೂನು ಜಾರಿಯಲ್ಲಿದೆ. ಹಾಗಿರುವಾಗ ಈ ದಂಪತಿ ಕೈಗೆ ಮದ್ಯಪಾನದ ಬಾಟಲ್ ಹೇಗೆ ಸಿಕ್ತು ಎನ್ನುವ ಪ್ರಶ್ನೆ ಏಳೋದು ಸಹಜ.

ಗಂಡನಿಗೆ ಬರೀ ಆಲ್ಕೋಹಾಲ್ ನೀಡಿದ್ದು ಮಾತ್ರವಲ್ಲ ಇನ್ನೊಂದು ವಿಡಿಯೋದಲ್ಲಿ ಕಾಂಚನ್ ದೇವಿ ಗನ್ ಹಿಡಿದಿದ್ದಾಳೆ. ಕೈನಲ್ಲಿ ಪಿಸ್ತೂಲ್ ಹಿಡಿದು ಫೋಸ್ ನೀಡ್ತಿರುವ ಮಹಿಳೆ ಭೋಜ್ಪುರಿ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾಳೆ. ಈ ಬಗ್ಗೆಯೂ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸದ್ಯ ಇದು ಲೈಸೆನ್ಸ್ ಇರೋ ಗನ್ ಎಂಬುದು ಗೊತ್ತಾಗಿದೆ. ಆದ್ರೆ ಮಹಿಳೆ ಅಥವಾ ಆಕೆ ಪತಿ ಹೆಸರಿನಲ್ಲಿ ಗನ್ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇಂಥ ವಿಡಿಯೋ ಪೋಸ್ಟ್ ಮಾಡೋದು ಅಪರಾಧ. ಹಾಗಾಗಿ ಪೊಲೀಸರು ಕಾಂಚನ್ ದೇವಿ ಹಾಗೂ ಗನ್ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ವಿಡಿಯೋದಲ್ಲಿರುವ ದಂಪತಿ ಖಾಸಿಮ್ ಬಜಾರ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿಗಳಾದ ರಾಹುಲ್ ಕುಮಾರ್ ಮತ್ತು ಕಾಂಚನ್ ಕುಮಾರಿ. ರಾಹುಲ್ ಒಬ್ಬ ಉದ್ಯಮಿ. ಅವರ ಪತ್ನಿ ಕಾಂಚನ್ ಇನ್ಸ್ಟಾಗ್ರಾಮ್ನಲ್ಲಿ 2.99 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಅವರು ಆಗಾಗ್ಗೆ ಲಿಪ್ ಸಿಂಕ್ ಮಾಡುತ್ತಾ ಭೋಜ್ಪುರಿ ಹಾಡುಗಳಿಗೆ ನೃತ್ಯ ಮಾಡೋದನ್ನು ಕಾಣ್ಬಹುದು. ವಿಡಿಯೋ ಬಗ್ಗೆ ಮಾಹಿತಿ ಸಿಕ್ತಿದ್ದಂತೆ ಸದರ್ ಎಸ್ಡಿಪಿಒ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದೆ. ತನಿಖಾ ತಂಡ ಮಹಿಳೆ ಮನೆ ಮೇಲೆ ದಾಳಿ ನಡೆಸಿದೆ. ವೀಡಿಯೊದಲ್ಲಿ ಬಳಸಲಾದ ಪಿಸ್ತೂಲ್ ದೀನ್ ದಯಾಳ್ ಚೌಕ್ ನಿವಾಸಿ ವಿಶಾಲ್ ಕುಮಾರ್ಗೆ ಸೇರಿದ್ದು, ಅವರು ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಅಧಿಕಾರಿಗಳು ದಂಪತಿ ಮತ್ತು ಪಿಸ್ತೂಲ್ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ಬಿಹಾರ್ ಸರ್ಕಾರ ಮದ್ಯಮಾರಾಟವನ್ನು ಸಂಪೂರ್ಣ ನಿಷೇಧಿಸಿದೆ. ಆದ್ರೆ ಅಕ್ರಮ ಮದ್ಯಮಾರಾಟ ದಿನ ದಿನಕ್ಕೂ ಹೆಚ್ಚಾಗ್ತಿದೆ. 2025 ರಲ್ಲಿ, ಬಿಹಾರದಲ್ಲಿ 36 ಲಕ್ಷ ಲೀಟರ್ಗೂ ಹೆಚ್ಚು ಮದ್ಯ ವಶಪಡಿಸಿಕೊಳ್ಳಲಾಗಿದೆ.

Source link

Leave a Reply

Your email address will not be published. Required fields are marked *