ಬಿಕ್ಲು ಶಿವ ಕೊಲೆ ಕೇಸ್​​: ಶಾಸಕ ಬೈರತಿ ಬಸವರಾಜ್​​ ಫೆ.21ರವರೆಗೆ ಸಿಐಡಿ ಕಸ್ಟಡಿಗೆ

ಬಿಕ್ಲು ಶಿವ ಕೊಲೆ ಕೇಸ್​​: ಶಾಸಕ ಬೈರತಿ ಬಸವರಾಜ್​​ ಫೆ.21ರವರೆಗೆ ಸಿಐಡಿ ಕಸ್ಟಡಿಗೆ


ಬೆಂಗಳೂರು, ಫೆಬ್ರವರಿ 15: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್ಫೆ.21ರವರೆಗೆ ಲಭ್ಯಡಿ ಕಸ್ಟಡಿಗೆ 42ನೇ ಇಸಿಜೆಎಂ ಕೋರ್ಟ್ ಜಡ್ಜ್ ನಿಗದಿಪಡಿಸಲಾಗಿದೆ. ಜಯದೇವ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳ ಬಳಿಕ ಕೋರಮಂಗಲದಲ್ಲಿರುವ 42ನೇ ಇಸಿಜೆಎಂ ಕೋರ್ಟ್ ಜಡ್ಜ್ ನಿವಾಸಕ್ಕೆ ಶಾಸಕರನ್ನು ಹಾಜರುಪಡಿಸಲಾಯಿತು. ಈ ವೇಳೆ ಪೊಲೀಸ್ ಪರ ಎಸ್ಪಿ ಅಶೋಕ್ ನಾಯ್ಕ್ ಶಾಸಕರು ಹೃದಯ ಸಂಬಂಧಿ ಸಮಸ್ಯೆಯ ಬಗ್ಗೆ ಉಲ್ಲೇಖಿಸಿರುವ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರಾಗಲು ಈ ಹಿಂದೆ ಸೂಚಿಸಲಾಗಿತ್ತು.

ಜಡ್ಜ್ ನಿವಾಸದ ಬಳಿ ಎಸ್ಪಿಪಿ ಅಶೋಕ್ ನಾಯ್ಕ್ ಪ್ರತಿಕ್ರಿಯೆ ನೀಡಿದ್ದು, ಬೈರತಿ ಬಸವರಾಜ್ ಅವರ ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಲಾಗಿದೆ. ಪರೀಕ್ಷೆ ವೇಳೆ ಹೃದಯ ಸಂಬಂಧಿ ಕಾಯಿಲೆ ಇರುವುದು ಗೊತ್ತಾಗಿದ್ದ ಹಿನ್ನೆಲೆ ಜಯದೇವ ಆಸ್ಪತ್ರೆಗೆ ದಾಖಲಿಸಲು ಬೌರಿಂಗ್ ವೈದ್ಯರು ತಿಳಿಸಿದ್ದರು. ವೈದ್ಯರ ಆಧಾರದ ಚಿಕಿತ್ಸೆಗೆ ನ್ಯಾಯಾಧೀಶರು ಕೂಡ ಸೂಚನೆ ನೀಡಿದ್ದರು. ಬೈರತಿ ಬಸವರಾಜ್ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ನಾರ್ಮಲ್ ಎಂದು ವೈದ್ಯಕೀಯ ವರದಿ ಬಂದಿದೆ. ಇಲ್ಲ ನ್ಯಾ.ಶಿವಕುಮಾರ್ ಅವರ ಮುಂದೆ ಶಾಸಕರನ್ನು ಹಾಜರುಪಡಿಸಿದ್ದೇವೆ ಎಂದು.

ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ಪೊಲೀಸ್ ವಶಕ್ಕೆ

ಬೈರತಿ ಬಸವರಾಜ್ ನಿವಾಸಕ್ಕೆ ಬಿಜೆಪಿ ನಾಯಕರ ತಂಡ ಭೇಟಿ

ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಬೈರತಿ ಬಸವರಾಜ್ ನಿವಾಸಕ್ಕೆ ಬಿಜೆಪಿ ನಾಯಕರ ತಂಡ ಭೇಟಿ ನೀಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ವರ್ತೂರು ಪ್ರಕಾಶ್, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಎಸ್.ಹರೀಶ್ ತಂಡ ಬೈರತಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯೇಂದ್ರ, ಬಿಎಸ್‌ವೈ ಬಗ್ಗೆ ಭೈರತಿ ಇಟ್ಟ ವಿಶ್ವಾಸಕ್ಕೆ ನಾವು ಬೆಲೆ ಕಟ್ಟಲು ಆಗಲ್ಲ. ಎಲ್ಲವೂ ಕೂಡ ನಮ್ಮ ಪರೀಕ್ಷೆಯ ಸಮಯ. ತಂದೆ, ಕುಟುಂಬದ ಮೇಲೆ ಹಾಕಿದ್ದ 25-30 ಕೇಸ್ ಎದುರಿಸಿದ್ದೇನೆ. ರಾಜಕೀಯ ಷಡ್ಯಂತ್ರಗಳು ಹೇಗೆ ನಡೆಯುತ್ತವೆ ಎಂಬುದು ಗೊತ್ತಿದೆ. ಯಾರೂ ಸಹ ಕಳೆದುಕೊಳ್ಳಬಾರದು. ನಾನು, ಯಡಿಯೂರಪ್ಪ, ಪಕ್ಷ ಅವರ ಜೊತೆ ಇದ್ದೇ ಇರುತ್ತೇವೆ. ರಾಜಕೀಯವಾಗಿಯೂ ಯಾರೂ ಆತಂಕ ಪಡುವ ಅಗತ್ಯವಿಲ್ಲ.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *