ಭಾರತೀಯ ಧಾರಾವಾಹಿಗಳಿಗೆ (ಧಾರಾವಾಹಿ) ಯಾವುದು ಸಹ ಅಸಾಧ್ಯವಲ್ಲ. ಹಾವುಗಳಿಗೆ ಜೀವ ಬರುತ್ತವೆ, ಮನುಷ್ಯರು ಹಕ್ಕಿಗಳಂತೆ ಹಾರುತ್ತಾರೆ, ಸ್ಕೂಟರ್‌ನಲ್ಲಿ ಅಂತರಿಕ್ಷಕ್ಕೆ ಹೋಗಿ ಬರುತ್ತಾರೆ. ಹತ್ತನೇ ಕ್ಲಾಸು ಫೇಲ್ಡ್ ಸೊಸೆ, ಆಪರೇಷನ್ ಮಾಡಿ ಗಂಡನ ಜೀವ ಉಳಿಸುತ್ತಾಳೆ. ಮೂರನೇ ಮಹಡಿಯಿಂದ ಹಾರಿದವರು ಮೂರು ಎಪಿಸೋಡ್ ಆದ ಬಳಿಕ ನೆಲದ ಮೇಲೆ ಲ್ಯಾಂಡ್ ಆಗುತ್ತಾರೆ. ಇಂಥಹ ಹಲವು ಅದ್ಭುತಗಳನ್ನು ಭಾರತೀಯ ಧಾರಾವಾಹಿಗಳು ವಿಶೇಷವಾಗಿ ಹಿಂದಿ ಧಾರಾವಾಹಿಗಳನ್ನು ತೋರಿಸಿವೆ. ಇದೀಗ ನಿಜವಾಗಿಯೂ ವಿಶೇಷವಾದುದಕ್ಕೆ ಕೈಹಾಕಿದೆ ಹಿಂದಿಯ ಒಂದು ಧಾರಾವಾಹಿ ತಂಡ.
ಹಿಂದಿಯ ಜನಪ್ರಿಯ ಧಾರಾವಾಹಿಯಲ್ಲಿ ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ, ಮೈಕ್ರೊಸಾಫ್ಟ್ ಮಾಲೀಕ ಬಿಲ್ ಗೇಟ್ಸ್ ಕಾಣಿಸಿಕೊಳ್ಳಲಿದ್ದಾರೆ. ಹಲವಾರು ಪುಸ್ತಕ, ಡಾಕ್ಯುಮೆಂಟರಿ, ಸಿನಿಮಾಗಳಿಗೆ ವಸ್ತುವಾಗಿರುವ ಬಿಲ್ ಗೇಟ್ಸ್ ಈಗ ಹಿಂದಿ ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಹಿಂದಿಯ ಬಲು ಜನಪ್ರಿಯ ಧಾರಾವಾಹಿ, ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ’ ಈಗ ಎರಡನೇ ಸರಣಿ ಆರಂಭವಾಗಿದ್ದು, ಈ ಧಾರಾವಾಹಿಯಲ್ಲಿ ಬಿಲ್ ಗೇಟ್ಸ್ ಎಪಿಸೋಡ್ ಒಂದರಲ್ಲಿ ನಟಿಸಲಿದ್ದಾರೆ.
ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಅವರು ‘ಕ್ಯೂಂಕಿ ಸಾಸ್ ಭಿ ಕಬಿ ಬಹು ಥೀ 2’ ಧಾರಾವಾಹಿ ಮೂಲಕ ಟಿವಿ ಲೋಕಕ್ಕೆ ಮರಳಿದ್ದು, ಈ ಧಾರಾವಾಹಿಯನ್ನು ಅದ್ಧೂರಿಯಾಗಿ ತೆರೆಗೆ ತರಲಾಗುತ್ತಿದೆ. ಇದೀಗ ಇದೇ ಧಾರಾವಾಹಿಯಲ್ಲಿ ಬಿಲ್ ಗೇಟ್ಸ್ ನಟಿಸಲಿದ್ದಾರೆ. ಸ್ಮೃತಿ ಇರಾನಿ, ಬಿಲ್ ಗೇಟ್ಸ್‌ಗೆ ವಿಡಿಯೋ ಕರೆ ಮಾಡಿ, ಬಿಲ್ ಗೇಟ್ಸ್ ಜೊತೆಗೆ ಉದ್ಯಮಕ್ಕೆ ಸಂಬಂಧಿಸಿದಂತೆ ಸಲಹೆ ಪಡೆಯಲಿದ್ದಾರೆ ಹಾಗೂ ಸ್ಮೃತಿ ಅವರ ಪಾತ್ರಧಾರಾವಾಹಿಯಲ್ಲಿ ತೊಡಗಿರುವ ಉದ್ಯಮಕ್ಕೆ ಹೂಡಿಕೆಯನ್ನು ಸಹ ಮಾಡಲಿದ್ದಾರೆ.
ಇದನ್ನೂ ಓದಿ:ಕಿರುತೆರೆಗೆ ಮರಳದಂತೆ ಸ್ಮೃತಿ ಇರಾನಿಗೆ ಭರ್ಜರಿ ಸಂಭಾವನೆ
ಸ್ಮೃತಿ ಇರಾನಿ ಅವರು ಬಿಲ್ ಗೇಟ್ಸ್‌ಗೆ ಮಾಡಿದ ವಿಡಿಯೋ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಧಾರಾವಾಹಿಯಲ್ಲಿ ಬಳಸುತ್ತಿದ್ದಾರೆ. ಆ ಮೂಲಕ ಬಿಲ್ ಗೇಟ್ಸ್, ಭಾರತೀಯ ಟಿವಿ ಲೋಕಕ್ಕೆ ಅಧಿಕೃತವಾಗಿ ಎಂಟ್ರಿ ಕೊಡಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಇದೇ ಧಾರಾವಾಹಿಯಲ್ಲಿ ನಟಿ ಸಾಕ್ಷಿ ತನ್ವಾರ್ ಮತ್ತು ಕಿರಣ್ ಕರ್ಮಕಾರ್ ಅವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಇಬ್ಬರೂ ಸಹ ಟಿವಿ ಲೋಕದ ಬಲು ಜನಪ್ರಿಯ ತಾರೆಯರು. ಈಗ ಏಕಾ-ಏಕಿ ಬಿಲ್ ಗೇಟ್ಸ್ ಅವರನ್ನೇ ಅತಿಥಿ ಪಾತ್ರಕ್ಕೆ ಕರೆತರಲಾಗಿದೆ.
ಅಂದಹಾಗೆ ಬಿಲ್ ಗೇಟ್ಸ್ ಗೆ ಟಿವಿ ಮತ್ತು ಸಿನಿಮಾ ಲೋಕ ಹೊಸದೇನೂ ಅಲ್ಲ. ಈ ಅವರು ಏಳು ಡಾಕ್ಯುಮೆಂಟರಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವುಗಳಲ್ಲಿ ಕೆಲವು ಡಾಕ್ಯುಮೆಂಟರಿಗಳು ಬಿಲ್ ಗೇಟ್ಸ್ ಅವರ ಬಗ್ಗೆಯೇ ಇವೆ. ಕೆಲವು ಸಿನಿಮಾಗಳಲ್ಲಿ ಬಿಲ್ಗೇಟ್ಸ್ ಅವರ ಪಾತ್ರವನ್ನು ಬಳಸಿಕೊಳ್ಳಲಾಗಿದೆ. ಕೆಲವು ಸಿನಿಮಾಗಳಲ್ಲಿ ಅವರೇ ಕಾಣಿಸಿಕೊಂಡಿದ್ದಾರೆ. ಖ್ಯಾತ ಟಿವಿ ಶೋ ‘ಬಿಗ್ ಬ್ಯಾಂಗ್ ಥಿಯರಿ’ಯ ಒಂದು ಎಪಿಸೋಡ್‌ನಲ್ಲಿ ಕಾಣಿಸಿಕೊಂಡ ಬಿಲ್ ಗೇಟ್ಸ್ ನಟಿಸಿದ್ದಾರೆ. ಈ ಶೋನಲ್ಲಿ ಎಲಾನ್ ಮಾಸ್ಕ್ ಸಹ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ