Famous Billionaire Diets: ವಿಶ್ವದ ಶ್ರೇಷ್ಠ ಕೈಗಾರಿಕೋದ್ಯಮಿಗಳು ಮತ್ತು ಯಶಸ್ವಿ ಕಂಪನಿ ಮಾಲೀಕರಲ್ಲಿ ಅನೇಕರು ಸಾಂಪ್ರದಾಯಿಕ ಜೀವನಶೈಲಿಯನ್ನು ಇಷ್ಟಪಡುತ್ತಾರೆ ಮತ್ತು ಅವರ ಆಹಾರ ಪದ್ಧತಿಗಳು ತುಂಬಾ ಸರಳವಾಗಿವೆ.

ವಿಶ್ವದ ಅನೇಕ ಉದ್ಯಮಿಗಳು ಸಾಂಪ್ರದಾಯಿಕ ಮತ್ತು ಸರಳ ಜೀವನಶೈಲಿಯನ್ನು ನಡೆಸುತ್ತಾರೆ. ವಿಶ್ವದರ್ಜೆಯ ಬಾಣಸಿಗರು ಮತ್ತು ದುಬಾರಿ ಆಹಾರವಿದ್ದರೂ, ಅನೇಕರು ಮನೆಯ ಅಡುಗೆಯನ್ನೇ ಇಷ್ಟಪಡುತ್ತಾರೆ.

ಟೆಸ್ಲಾ, ಸ್ಪೇಸ್‌ಎಕ್ಸ್ ಮಾಲೀಕ ಎಲಾನ್ ಮಸ್ಕ್ ಆಹಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಆಹಾರವನ್ನು ಸಂತೋಷಕ್ಕಿಂತ ಅವಶ್ಯಕತೆ ಎಂದು ಪರಿಗಣಿಸುತ್ತಾರೆ. ಸಾಧಾರಣ ಊಟ ಸೇವಿಸುತ್ತಾರೆ.

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಈಗ ಪೌಷ್ಟಿಕ ಆಹಾರಕ್ಕೆ ಬದಲಾಗಿದ್ದಾರೆ. ಕಾರ್ಬೋಹೈಡ್ರೇಟ್, ಪ್ರೋಟೀನ್, ಫೈಬರ್ ಮೇಲೆ ಗಮನ ಹರಿಸುತ್ತಾರೆ. ಮೊಸರಿನೊಂದಿಗೆ ಮೆಡಿಟರೇನಿಯನ್ ಆಕ್ಟೋಪಸ್ ಅವರ ಫೇವರಿಟ್.

ವರ್ಜಿನ್ ಗ್ರೂಪ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ದಿನಕ್ಕೆ 20 ಕಪ್ ಚಹಾ ಕುಡಿಯುತ್ತಾರೆ. ಆರೋಗ್ಯಕರ ಆಹಾರದೊಂದಿಗೆ ಸಮತೋಲಿತ ಜೀವನಶೈಲಿಯನ್ನು ಇಷ್ಟಪಡುತ್ತಾರೆ. ಚಹಾ ಅವರ ಕೆಲಸಕ್ಕೆ ಇಂಧನವಂತೆ.

ಅಮೇರಿಕನ್ ಬಿಲಿಯನೇರ್ ವಾರೆನ್ ಬಫೆಟ್ ಹದಿಹರೆಯದವರಂತೆ ತಿನ್ನುತ್ತಾರೆ. ಬೆಳಗಿನ ಉಪಹಾರವನ್ನು ಮೆಕ್‌ಡೊನಾಲ್ಡ್ಸ್‌ನಲ್ಲಿ ಮಾಡುತ್ತಾರೆ. ಬರ್ಗರ್, ಫ್ರೈಸ್ ಮತ್ತು ಚೆರ್ರಿ ಕೋಕ್ ಇಷ್ಟಪಡುತ್ತಾರೆ.

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಫಾಸ್ಟ್-ಫುಡ್ ಇಷ್ಟಪಡುತ್ತಾರೆ. ಚೀಸ್‌ಬರ್ಗರ್‌ಗಳು ಮತ್ತು ಡಯಟ್ ಕೋಕ್‌ಗಳನ್ನು ಕೆಲವೊಮ್ಮೆ ಸೇವಿಸುತ್ತಾರೆ. ಅವರ ಆಹಾರ ಪದ್ಧತಿ ಹೆಚ್ಚಾಗಿ ಸರಳವಾಗಿದೆ.

Source link
ಎಲಾನ್ ಮಸ್ಕ್‌ನಿಂದ ಜೆಫ್ ಬೆಜೋಸ್‌ವರೆಗೆ: ಕೋಟ್ಯಾಧಿಪತಿಗಳು ಏನ್ ತಿಂತಾರೆ?