ಟಿವಿ9 ಹಿರಿಯ ನಿರೂಪಕ ರಂಗನಾಥ್ ಭಾರದ್ವಾಜ್​ಗೆ ಬಿಲ್ವ ಪ್ರಶಸ್ತಿ

ಟಿವಿ9 ಹಿರಿಯ ನಿರೂಪಕ ರಂಗನಾಥ್ ಭಾರದ್ವಾಜ್​ಗೆ ಬಿಲ್ವ ಪ್ರಶಸ್ತಿ


ಬೆಂಗಳೂರು, ನವೆಂಬರ್ 18: ಟಿವಿ9 ವಾಹಿನಿಯ ಹಿರಿಯ ನಿರೂಪಕ ರಂಗನಾಥ್ ಭಾರದ್ವಾಜ್ ಅವರಿಗೆ ಪ್ರತಿಷ್ಠಿತ ಬಿಲ್ವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಯಾವುದೆ ಎಜುಕೇಷನ್ ಟ್ರಸ್ಟ್ ನ ವೆಂಕಟಶಿವಾರೆಡ್ಡಿ ಹಾಗೂ ಸಂಸದ ತೇಜಸ್ವಿ ಸೂರ್ಯ, ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ರಂಗನಾಥ್ ಭಾರದ್ವಾಜ್, ಬಿಲ್ವ ಪ್ರಶಸ್ತಿಯನ್ನು ನಿಮಗೆ ಕೊಡುತ್ತೇವೆ ಎಂದಾಗ ನನಗೆ ತುಂಬಾ ಆಶ್ಚರ್ಯ ಅಂತ ಅನ್ನಿಸ್ತು. ಅದರಲ್ಲೂ ಪರಿಸರಕ್ಕೆ ಸಂಬಂಧಪಟ್ಟಿರುವ ಈ ಪ್ರಶಸ್ತಿ ಪಡೆಯಲು ನನ್ನ ಸಾಧನೆ ಏನು? ಎಂದು ಯೋಚಿಸಿದೆ. ಆದರೆ, ಇನ್ನು ಮುಂದೆ ಪರಿಸರದ ಕೆಲಸಗಳಲ್ಲಿ, ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂಬ ಸಂಕಲ್ಪ ಮಾಡುತ್ತಿದ್ದೇನೆ. ಯಲ್ಲಪ್ಪ ರೆಡ್ಡಿಯವರ ಎಲ್ಲ ಹೋರಾಟದ ಜೊತೆಗೆ ನಾನು ನಿಲ್ಲುತ್ತೇನೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *