Video: ಕಾಳು ನೀಡಿ ಹಸಿವು ನೀಗಿಸಿದ ಮಹಿಳೆಯೊಂದಿಗೆ ಜಗಳಕ್ಕಿಳಿದ ಪಕ್ಷಿ

Video: ಕಾಳು ನೀಡಿ ಹಸಿವು ನೀಗಿಸಿದ ಮಹಿಳೆಯೊಂದಿಗೆ ಜಗಳಕ್ಕಿಳಿದ ಪಕ್ಷಿ


ಮನುಷ್ಯರಿಗಿಂತ (ಮಾನವ) ಪ್ರಾಣಿ ಪಕ್ಷಿಗಳೇ ಲೇಸು. ಒಂದು ತುತ್ತು ಅನ್ನ ಹಾಕಿದರೆ ಸಾಕು, ಜೀವಂತ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳುತ್ತವೆ. ಕಾಳಜಿ ವಹಿಸುವ ಜೀವವನ್ನು ಹಚ್ಚಿಕೊಂಡು ಬಿಡುತ್ತವೆ. ಇದೀಗ ಮಾನವ ಮತ್ತು ಪಕ್ಷಿಯ (ಹಕ್ಕಿ) ಸ್ನೇಹಪರ ಸಂಬಂಧವನ್ನು ತೋರಿಸುವ ದೃಶ್ಯವೊಂದು ವೈರಲ್ ಆಗಿದೆ. ಮಹಿಳೆಯೊಬ್ಬಳು ಮನೆಯ ಹತ್ತಿರ ಹಾರಿ ಬಂದು ಕುಳಿತಿರುವ ಪಕ್ಷಿಗಳೊಂದಿಗೆ ಸಂಭಾಷಣೆ ನಡೆಸಿದ್ದಾಳೆ. ಪಕ್ಷಿಯೊಂದು ಆಕೆಯ ಮಾತಿಗೆ ಪ್ರತಿಕ್ರಿಯಿಸುತ್ತಾ ಜಗಳ ಇಳಿದಂತಿದೆ ಈ ದೃಶ್ಯ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಿಳೆಯೊಂದಿಗೆ ಜಗಳವಾಡಿದ ಪಕ್ಷಿ

@shaheena451 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ ಹಕ್ಕಿ ಭಯಪಡುವ ಬದಲು ತನ್ನ ಅಧಿಕಾರವನ್ನು ಪ್ರತಿಪಾದಿಸುವಷ್ಟು ನಂಬಿಕೆಯನ್ನು ಸಹೋದರಿ ಹೇಗೆ ಗಳಿಸಿದಳು?, ತುಂಬಾ ಸುಂದರವಾಗಿದೆ. ಅವಳು ಪ್ರಕೃತಿಯನ್ನೇ ಗೆದ್ದಿದ್ದಾಳೆ ಎಂದು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಮನೆಯ ಬಾಲ್ಕನಿಯಲ್ಲಿ ಹಕ್ಕಿಗಳು ಬಂದು ಕುಳಿತಿರುವುದನ್ನು ನೋಡಬಹುದು. ಅದರಲ್ಲಿ ಒಬ್ಬ ಮಹಿಳೆಯೊಂದಿಗೆ ಮುದ್ದಾಗಿ ಸಂಭಾಷಣೆ ನಡೆಸುವುದನ್ನು ನೋಡಬಹುದು. ಪಕ್ಷಿಯು ಮಹಿಳೆಯ ಮೇಲೆ ಪ್ರೀತಿಯನ್ನು ತೋರುತ್ತಾ ಆಕೆಯ ಮುಂದೆ ಕುಳಿತು ಏನೋ ಹೇಳುತ್ತಿದೆ. ಆದರೆ ಈ ಮಹಿಳೆ ಮಾತ್ರ ಧ್ವನಿ ಏರಿಸಿ ಮಾತನಾಡುತ್ತಾಳೆ. ತನ್ನ ಕೈಯಿಂದ ಅದನ್ನು ತಳ್ಳುತ್ತಾಳೆ. ಈ ಹಕ್ಕಿಯೂ ಕೂಡ ಕೋಪವನ್ನು ವ್ಯಕ್ತಪಡಿಸುವಂತೆ ಈ ದೃಶ್ಯವಿದೆ. ತನ್ನದೇ ಆದ ಬೈಯಲು ಶುರುವಿಟ್ಟ ಪಕ್ಷಿಯ ಕೋಪವನ್ನು ಅರಿತುಕೊಂಡ ಮಹಿಳೆಯೂ ಬಾಯಿಮುಚ್ಚುವಂತೆ ಗದರುವುದನ್ನು ನೋಡಬಹುದು.

ಇದನ್ನೂ ಓದಿ:ಪಂಜರದಲ್ಲಿ ಬಂಧಿಸಿದ್ದ ಪಕ್ಷಿಗಳನ್ನು ಸ್ವತಂತ್ರವಾಗಿ ಹಾರಲು ಬಿಟ್ಟು ಖುಷಿ ಪಟ್ಟ ವ್ಯಕ್ತಿ

ನವೆಂಬರ್ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಮಾಡಲಾಗಿದೆ. ಒಬ್ಬ ಬಳಕೆದಾರ, ನಿಜವಾಗಿಯೂ ಅದ್ಭುತವಾಗಿದೆ, ಪ್ರತಿಯೊಂದು ಪದವು ಅರ್ಥಪೂರ್ಣ ಮತ್ತು ಶಾಂತವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಹೃದಯ ಸ್ಪರ್ಶಿ ದೃಶ್ಯ ಎಂದರೆ, ಮತ್ತೊಬ್ಬರು ಈ ಪ್ರಾಣಿ ಪಕ್ಷಿ ನೀವು ಬೆರೆತರೆ ನಿಮ್ಮೊಂದಿಗೆ ಬೆರೆತು ಹೋಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:42 pm, ಶುಕ್ರ, 14 ನವೆಂಬರ್ 25





Source link

Leave a Reply

Your email address will not be published. Required fields are marked *