
ಬಿಸಲಿನ ತಾಪಕ್ಕೆ ಪ್ರಸ್ತುತ ಬಣಗುಡುತ್ತಿದ್ದ ಬಯಲು ಸೀಮೆಯ ಜನ, ಕಳೆದ ಕೆಲವು ದಿನಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಥಂಡಿ ಮತ್ತು ಕೊರೆಯುವ ಚಳಿ ಇಬ್ಬನಿಯ ವಾತಾವರಣಕ್ಕೆ ಚಡಪಡಿಸುತ್ತಿದೆ, ಜೊತೆಗೆ ಬಯಲು ಸೀಮೆಯಲ್ಲಿ ಊಟದ ವಾತಾವರಣ ಸೃಷ್ಟಿಗೆ ಜನರು ಎಂಜಾಯ್ ಮಾಡುತ್ತಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಂಜಿನ ಮಳೆಯ ಜೊತೆಗೆ ಚಳಿಯ ವಾತಾವರಣ ನಿರ್ಮಾಣವಾಗಿದೆ. ಮೈ ಕೊರೆಯಂತಹ ಚಳಿಗೆ ಜನ ಚಡಪಡಿಸಿದೆ. ಹಿಂದೆಂದು ಕಾಣದಂತ ತಂಪು ವಾತಾವರಣ ಮತ್ತು ಚಳಿಯಿಂದ ಜನ ಮನೆ ಬಿಟ್ಟು ಹೊರ ಬರಲು ಭಯಪಡುವಂತಾಗಿದೆ.

ಶೀತ, ಗಾಳಿ ಮತ್ತು ಚಳಿಯಿಂದ ತುಂಬಾ ಬೆಚ್ಚನೆಯ ಉಡುಪುಗಳನ್ನು ಧರಿಸಿದಾಗ ಚಳಿ ಮಾತ್ರ ಕಡಿಮೆಯಾಗುತ್ತಿಲ್ಲ. ಸದಾ 25-30 ಡಿಗ್ರಿ ತಾಪಮಾನ ಇರುತ್ತಿದ್ದ ಪ್ರದೇಶದಲ್ಲಿ 14-18 ಡಿಗ್ರಿಗೆ ಇಳಿದಿದೆ. ಈ ಚಳಿಗೆ ಜನರು ಚಡಪಡಿಸುತ್ತಿದ್ದಾರೆ. ಈ ಥಂಡಿ ವಾತಾವರಣದಿಂದ ಜನರು ಅಗತ್ಯವಿದ್ದರಷ್ಟೇ ಮನೆಯಿಂದ ಹೊರಬರುತ್ತಿದ್ದಾರೆ. ಯಾವುದೇ ರಸ್ತೆಗಳಲ್ಲಿ ಜನರ ಓಡಾಟ ವ್ಯಾಪಾರ ವಹಿವಾಟು ಕೂಡ ಕಡಿಮೆಯಾಗಿದೆ.

ಇನ್ನು ಮುಂಜಾನೆಯಿಂದ ಸಂಜೆಯವರೆಗೂ ಕೋಲಾರ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಆವರಿಸುವ ಹಿಬ್ಬನಿ ಸಂಜೆಯಾದರೂ ಹಾಗೇ ಇದೆ. ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಬೆಟ್ಟದ ತಪ್ಪಿಲಿನ ರಸ್ತೆಗಳಂತೂ-ಕಾಶ್ಮೀರದ ವಾತಾವರಣದ ರೀತಿ ಸುಂದರ ಪ್ರಕೃತಿ ಸೊಬಗನ್ನು ನಿರ್ಮಾಣ ಮಾಡಿವೆ. ಇಬ್ಬನಿಂದ ಆವೃತವಾಗಿರುವ ಬೆಟ್ಟಗಳನ್ನ ನೋಡುವುದಕ್ಕೆ ನಿಜವಾಗಿಯೂ ಎರಡು ಕಣ್ಣು ಸಾಲದಾಗಿದೆ.

ಕಳೆದ ಹದಿನೈದು ದಿನದಿಂದ ಎಲ್ಲೆಡೆ ದಟ್ಟವಾದ ಮಂಜು ಆವರಿಸಿರುತ್ತದೆ. ಬೆಳಗ್ಗೆ 12 ಗಂಟೆಯಾದ್ರೂ ದಟ್ಟವಾದ ಹಿಬ್ಬನಿ ಮತ್ತು ಚಳಿ ನಗರವನ್ನೆಲ್ಲಾ ಆವರಿಸಿರುತ್ತದೆ. ಒಂದು ವಾರದಿಂದ ಸೂರ್ಯನ ದರ್ಶನವೂ ಸಹ ಜನರಿಗೆ ಆಗಿಲ್ಲ. ಅತ್ತ ದಿತ್ವಾ ಚಂದುಮಾರುತ ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿದ್ದರಿಂದ ಮತ್ತಷ್ಟು ಚಳಿಯ ಅನುಭವ ಜನರಿಗೆ ಆಗುತ್ತಿದೆ.

ಇಷ್ಟು ದಿನ ಮಳೆಯ ಅನುಭವದಲ್ಲಿದ್ದ ಜಿಲ್ಲೆಯ ಜನರಿಗೆ ಪ್ರಕೃತಿ ಕಟ್ಟಿಕೊಟ್ಟಿರುವ ಈ ಸುಂದರ ಮಂಜಿನ ಸೊಬಗು, ಚುಮುಚುಮು ಚಳಿಯ ವಾತಾವರಣ ಜನರಿಗೆ ಒಂದು ರೀತಿಯ ಕಿರಿಕಿರಿ ಅನ್ನಿಸಿತು ಕೂಡ ಒಂದು ರೀತಿ ಹೊಸ ಅನುಭವ ನೀಡುತ್ತಿರುವುದಂತು ಸುಳ್ಳಲ್ಲ.
ರಂದು ಪ್ರಕಟಿಸಲಾಗಿದೆ – 4:43 pm, ಸೋಮ, 1 ಡಿಸೆಂಬರ್ 25