Headlines

ದಕ್ಷಿಣ ಭಾರತದ ಬಿಜೆಪಿ ಫೈರ್ ಭ್ರ್ಯಾಂಡ್ ಅಣ್ಣಾಮಲೈಗೆ ಟಿಕೆಟ್ ಇಲ್ಲ, ಸೈಡ್‌ಲೈನ್ ಆದ್ರಾ ಸಿಂಘಮ್?

ದಕ್ಷಿಣ ಭಾರತದ ಬಿಜೆಪಿ ಫೈರ್ ಭ್ರ್ಯಾಂಡ್ ಅಣ್ಣಾಮಲೈಗೆ ಟಿಕೆಟ್ ಇಲ್ಲ, ಸೈಡ್‌ಲೈನ್ ಆದ್ರಾ ಸಿಂಘಮ್?

ದಕ್ಷಿಣ ಭಾರತದ ಬಿಜೆಪಿ ಫೈರ್ ಭ್ರ್ಯಾಂಡ್ ಅಣ್ಣಾಮಲೈಗೆ ಟಿಕೆಟ್ ಇಲ್ಲ, ಸೈಡ್‌ಲೈನ್ ಆದ್ರಾ ಸಿಂಘಮ್?

ದಕ್ಷಿಣ ಭಾರತದ ಬಿಜೆಪಿ ಫೈರ್ ಭ್ರ್ಯಾಂಡ್ ಅಣ್ಣಾಮಲೈಗೆ ಟಿಕೆಟ್ ಇಲ್ಲ, ಸೈಡ್‌ಲೈನ್ ಆದ್ರಾ ಸಿಂಘಮ್? ತಮಿಳುನಾಡಿನಲ್ಲಿ ನೆಲಕಚ್ಚಿದ್ದ ಬಿಜೆಪಿಗೆ ಮರುಜೀವ ನೀಡಿ ಹೊಸ ಅಲೆ ಸೃಷ್ಟಿಸಿದ ಅಣ್ಣಾಮಲೈಗೆ ಕಡೆಗಣಿಸಿದ್ದೇಕೆ?

ತಮಿಳುನಾಡಿನಲ್ಲಿ ಬಿಜೆಪಿಗೆ ಮರುಜೀವ ಕೊಟ್ಟ ಹೊಸ ಕೇಸರಿ ಅಲೆ ಸೃಷ್ಟಿಸಿದ ಕೆ ಅಣ್ಣಾಮಲೈ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು. ದಕ್ಷಿಣ ಭಾರತದಲ್ಲಿ ಬಿಜೆಪಿಯ ಫೈರ್ ಬ್ರ್ಯಾಂಡ್ ಫೇಸ್ ಆಗಿ ಗುರುತಿಸಿಕೊಂಡಿದ್ದ ಅಣ್ಣಾಮಲೈಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಪಟ್ಟ ನೀಡಲಾಗಿತ್ತು. ಆದರೆ ಮೈತ್ರಿ ಮಾತುಕತೆಯಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈಯನ್ನು ಬಿಜೆಪಿ ಕಡೆಗಣಿಸಿದ ಅನ್ನೋ ಮಾತು ಕೇಳಿಬಂದಿತ್ತು. ಇದೀಗ ತಮಿಳುನಾಡು ಟಿಕೆಟ್ ಘೋಷಣೆಯಾದಾಗ ಈ ಮಾತು ಬಲವಾಗಿ ಕೇಳಿಬರುತ್ತಿದೆ.

ತಮಿಳುನಾಡಿನಲ್ಲಿ 234 ಸ್ಥಾನಗಳ ಪೈಕಿ ಮೈತ್ರಿ ಪಕ್ಷವಾದ ಎಐಡಿಎಂಕೆ ಬಹುಪಾಲು ಸೀಟು ಪಡೆದರೆ ಬಿಜೆಪಿ 27 ಸೀಟು ಮಾತ್ರ ಪಡದಿದೆ. ಈ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದ್ದು, ಅಣ್ಣಾಮಲೈಗೆ ಟಿಕೆಟ್ ನೀಡಿಲ್ಲ. ಇದು ಅಣ್ಣಾಮಲೈಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುವಂತೆ ಮಾಡಿದೆ.

ಕೆ ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದ ಜೊತೆ ಪಕ್ಷ ಸಂಘಟನೆ ಮಹತ್ತರ ಜವಾಬ್ದಾರಿ ಹೊತ್ತಿದ್ದರು. ಈ ಮೂಲಕ ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಪಕ್ಷ ಕಟ್ಟುವ ಗುರಿ ಇಟ್ಟುಕೊಂಡಿದ್ದರು. ಇದರಂತೆ ಸಾಗಿದ್ದರು. ಆಧರೆ ಯಾವಾಗ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಬೇಕಾಯಿತೋ ಅಲ್ಲಿಗೆ ತಮಿಳುನಾಡಿನಲ್ಲಿ ಬಿಜೆಪಿ ಮಂಕಾಯಿತು.

ಅಣ್ಣಾಮಲೈ ದಕ್ಷಿಣ ಭಾರತದಲ್ಲೇ ಹೊಸ ಅಲೆ ಸೃಷ್ಟಿಸಿದ್ದರು. ಹೀಗಾಗಿ ಇದೇ ವೇಳೆ ನಟ ವಿಜಯ್ ಜೊಸೆಫ್ ರಾಜಕೀಯ ಪ್ರವೇಶ ವಿಳಂಬವಾಗಿತ್ತು. ಅಣ್ಣಾಮಲೈ ಅಬ್ಬರದ ಮುಂದೆ ತಮಿಳುನಾಡಿನಲ್ಲಿ ಸಾಂಪ್ರದಾಯಿಕ ರಾಜಕೀಯ ಪಕ್ಷಗಳು, ನಾಯಕರು ಒಂದು ಹೆಜ್ಜೆ ಹಿಂದೆ ಇಟ್ಟಿದ್ದರು. ಆದರೆ ಯಾವಾಗ ಅಣ್ಣಾಮಲೈ ಕಡೆಗಣನೆಯಾಗುತ್ತಿದ್ದಂತೆ ನಟ ವಿಜಯ್ ಈ ಸ್ಥಾನ ಆಕ್ರಮಿಸಿಕೊಂಡರು.

ಅಣ್ಣಾಮಲೈಗೆ ಬಿಜೆಪಿ ಹೈಕಮಾಂಡ್ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆ ಎಂದು ಹೇಳಲಾಗುತ್ತದೆ. ಆದರೆ ಅಣ್ಣಾಮಲೈ ಸಾಮರ್ಥ್ಯವನ್ನು ಬಿಜೆಪಿ ಕಡೆಗಣಿಸುತ್ತಿರುವುದು ಸುಳ್ಳಲ್ಲ, ಇಷ್ಟೇ ಅಲ್ಲ ಪ್ರತಿ ಬಾರಿ ಅಣ್ಣಾಮಲೈಗೆ ಹೊಸ ಜವಾಬ್ದಾರಿ ನೀಡಲಾಗುತ್ತಿದೆ ಮಾತು ಬರುತ್ತಲೇ ಇದೆ. ಆದರೆ ತಮಿಳನಾಡು ವಿಧಾನಸಭೆ ಚುನಾವಣೆ ಸಮಯದಲ್ಲೇ ಹಲ್ಲು ಕಿತ್ತ ಹಾವಿನಂತೆ ಮಾಡಿದ್ದಾರೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.

ಅಣ್ಣಾಮಲೈಗೆ ಪ್ರಮುಖ ಜವಾಬ್ದಾರಿ?

Source link

Leave a Reply

Your email address will not be published. Required fields are marked *