ಕಾರವಾರ, ನವೆಂಬರ್ 13: ಯಾವುದಾದರೂ ಅಪಘಾತಗಳು ನಡೆದರೆ, ತುರ್ತು ಅಗತ್ಯ ಬಂದರೆ ಉನ್ನತ ಚಿಕಿತ್ಸೆ ನೀಡುವ ಸಾಮರ್ಥ್ಯ ಇರುವ ಆಸ್ಪತ್ರೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲ. ಇಂತಹ ಜನರು ಒಂದೋ ನೆರೆ ಜಿಲ್ಲೆಯ ಉಡುಪಿ, ಮಂಗಳೂರಿಗೆ ಬೇಕು. ಇಲ್ಲವೇ ಹುಬ್ಬಳ್ಳಿಯ ದಾರಿ ಹಿಡಿಯಬೇಕು. ಹೀಗಾಗಿ ಜಿಲ್ಲೆಗೊಂದು ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬುದು ಸ್ಥಳೀಯ ಜನರ ಬಹುಕಾಲದ ಕೂಗು. ಈ ವಿಚಾರವಾಗಿ ಇಲ್ಲಿಯವರೆಗೂ ಅನೇಕ ಹೋರಾಟಗಳು ನಡೆದಿವೆ. ಸರ್ಕಾರದ ಗಮನವನ್ನೂ ಸೆಳೆಯಲಾಗಿದೆ. ಹೀಗಿದ್ದರೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾತ್ರ ಈ ಗಗನ ಕುಸುಮವಾಗಿರುವ ಹಿನ್ನಲೆ ಜಿಲ್ಲೆಯ ಯುವಕರು ಹೊಸ ಆಂದೋಲನ ಆರಂಭಿಸಿದ್ದಾರೆ. ಕೊಡಿ ಇಲ್ಲವಾದರೆ ದಯಾಮರಣ ಕರುಣಿಸಿ ಎಂದು ಸಿಎಂಗೆ ರಕ್ತದಲ್ಲಿ ಪತ್ರ ಬರೆಯುವ ಆಸ್ಪತ್ರೆ ಚಳವಳಿ ಆರಂಭಿಸಿದ್ದಾರೆ.
ಉತ್ತರ ಕನ್ನಡ ಭೌಗೋಳಿಕವಾಗಿ ಅತಿ ದೊಡ್ಡದಾಗಿದ್ದರೆ, ಕಡಲ ತೀರಕ್ಕೆ ಹೊಂದಿಕೊಂಡಿರೋ ಈ ಜಿಲ್ಲೆಯಲ್ಲಿ ಸುಸಜ್ಜಿತ ವೈದ್ಯಕೀಯ ಸೇವೆ ಸಿಗದ ಕಾರಣ ಅದೆಷ್ಟೋ ಮನೆಗಳ ಬೆಳಕು ಅರಿವೇ. ಯಾವುದೇ ಉನ್ನತ ಚಿಕಿತ್ಸೆಗಳು ಬೇಕಾಗಿದ್ದರೂ ನೂರಾರು ಕಿಲೋ ಮೀಟರ್ ಅಲೆಯಬೇಕಾದ ಸ್ಥಿತಿ ಜನರದ್ದಾಗಿದೆ. ಹೀಗಾಗಿ ಅದೆಷ್ಟೋ ಮಂದಿ ಆಸ್ಪತ್ರೆಗೆ ಸೇರಿಸುವ ವೇಳೆ ದಾರಿ ಮಧ್ಯೆ ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನಲೆ ಸಿಎಂಗೆ ಪತ್ರ ಬರೆಯುವ ಅಭಿಯಾನ ಆರಂಭಗೊಂಡಿದ್ದು, ಭಟ್ಕಳ ಮೂಲದ ಮಸ್ತಾಪ್ಪ ನಾಯ್ಕ್ ಬೆಳಸೆ ನೇತೃತ್ವದ ತಂಡ ಸರ್ಕಾರದ ಗಮನ ಸೆಳೆಯಲು ಯತ್ನಿಸಿದೆ.
ಇದನ್ನೂ ಓದಿ: ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತು ಆಮಿಷ, ನೂರಾರು ಮಂದಿಗೆ ಮಕ್ಮಲ್ ಟೋಪಿ
ಆಸ್ಪತ್ರೆ ನೀಡಿ ಇಲ್ಲವೇ ದಯಾಮರಣ ಕರುಣಿಸಿ ಎಂದು ಮಸ್ತಾಪ್ಪ ನಾಯ್ಕ್ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ಇವರ ಜೊತೆಗೆ ಸುಮಾರು 7 ಲಕ್ಷ ಜನರ ಅಂಚೆ ಪತ್ರದ ಮೂಲಕ ಆಸ್ಪತ್ರೆಗಾಗಿ ಸಿಎಂಗೆ ಮನವಿ ಮಾಡಲು ಮುಂದಾಗಿದ್ದು, ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದಲೂ ಅಭಿಯಾನ ಆರಂಭವಾಗಿದೆ. ಇದುವರೆಗೂ ಹೋರಾಟಗಳಿಗೆ ಮಣಿಯದ ಸರ್ಕಾರ, ಈ ಪತ್ರ ಅಭಿಯಾನಕ್ಕಾದರೂ ನಡೆದಿತ್ತು. ಬಜೆಟ್ ನಲ್ಲಿ ಅನುದಾನ ನೀಡಿ ಉತ್ತರ ಕನ್ನಡ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲಿ ಎಂಬ ಆಶಯ ಜನರದ್ದು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.