ಬೆಂಗಳೂರು, ಡಿಸೆಂಬರ್ 16: ಬಿಎಂಆರ್ಸಿಎಲ್ (BMRCL) ಮಾಡಿರುವ ಅವಾಂತರದಿಂದ ಪ್ರಯಾಣಿಕರು ಕಂಗೆಡಿಸಿದ್ದಾರೆ. ರೂಪೇನಾ ಅಗ್ರಹಾರದಲ್ಲಿ ಯೆಲ್ಲೋ ಲೈನ್ ಮೆಟ್ರೋ (ಹಳದಿ ಲೈನ್ ಮೆಟ್ರೋ) ಸ್ಟೇಷನ್ ಇದೆ. ಆದರೆ ಅದಕ್ಕೆ ಬೊಮ್ಮನಹಳ್ಳಿ ಎಂದು ಹೆಸರಿಟ್ಟಿದ್ದಾರೆ. ಬೊಮ್ಮನಹಳ್ಳಿಗೂ ರೂಪೇನಾ ಅಗ್ರಹಾರಕ್ಕೂ ಒಂದು ಕಿಲೋಮೀಟರ್ ಅಂತರವಿದೆ. ಹೀಗಾಗಿ ಜನರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಬೊಮ್ಮನಹಳ್ಳಿ ಎಂದು ಇಳಿಯುವ ಪ್ರಯಾಣಿಕರಿಗೆ, ಆಮೇಲೆ ಗೊತ್ತಾಗುತ್ತದೆ ಅದು ರೂಪೇನಾ ಅಗ್ರಹಾರ ಎಂಬುದಾಗಿ. ಹೀಗಾಗಿ, ಮತ್ತೆ ಆಟೋದಲ್ಲಿ ಪ್ರಯಾಣ ಮಾಡಬೇಕಾದ ದುಸ್ಥಿತಿ ಇದೆ. ಬೊಮ್ಮನಹಳ್ಳಿಗೆ ರೂಪೇನಾಹಾರವನ್ನು ಸೇರಿಸಿ ಸ್ಥಳೀಯ ನಿವಾಸಿಗಳ ಹೆಸರು ಮತ್ತು ಹೆಸರು ಸೇರಿಸಿಲ್ಲ ಎಂದು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೊಮ್ಮನಹಳ್ಳಿಯಲ್ಲೂ ಮೆಟ್ರೋ ನಿಲ್ದಾಣವಿದೆ. ಅದಕ್ಕೆ ಹೊಂಗಸಂದ್ರ ಎಂದು ನಾಮಕರಣ ಮಾಡಿದ್ದಾರೆ! ಹೊಂಗಸಂದ್ರ ಇರುವುದು ಎರಡ್ಮೂರು ಕಿಲೋಮೀಟರ್ ದೂರದಲ್ಲಿ. ಆದರೂ ಬೊಮ್ಮನಹಳ್ಳಿಗೆ ಹೊಂಗಸಂದ್ರ ಎಂದು ಹೆಸರಿಟ್ಟಿದ್ದಾರೆ.
ಯೆಲ್ಲೋ ಲೈನ್ 4 ಮೆಟ್ರೋ ಸ್ಟೇಷನ್ ಹೆಸರಲ್ಲಿ ಗೊಂದಲ
ಯೆಲ್ಲೋ ಲೈನ್‌ನಲ್ಲಿ ನಾಲ್ಕು ಮೆಟ್ರೋ ಸ್ಟೇಷನ್‌ಗಳ ಹೆಸರಲ್ಲೂ ಗೊಂದಲ ಉಂಟಾಗಿದೆ. ನಗರದ ಸಿಟಿ ಮತ್ತು ಕೋನಪ್ಪನ ಅಗ್ರಹಾರ ಸ್ಟೇಷನ್ ಗೊಂದಲ ಉಂಟು ಮಾಡಿದ್ದು, ನಗರದ ಸಿಟಿ ಹಾಗೂ ಕೋನಪ್ಪನ ಅಗ್ರಹಾರ ಸ್ಟೇಷನ್ ನಲ್ಲಿ ಬಿಎಂಆರ್ ಸಿಯಲ್ಲಿ ಗೊಂದಲ ಸೃಷ್ಟಿಯಾಗಿದೆ. ನಿರ್ಮಾಣ ಸಿಟಿಯಲ್ಲಿ ನಿಲ್ದಾಣ ನಿರ್ಮಿಸಿ ಕೋನಪ್ಪನ ಅಗ್ರಹಾರ ಅಂತ ಹೆಸರಿಡಲಾಗಿದೆ. ಕೋನಪ್ಪನ ಅಗ್ರಹಾರದ ನಿಲ್ದಾಣಕ್ಕೆ ಸಿಟಿ ಎಂದು ನಾಮಕರಣ ಮಾಡಿ ಯಡವಟ್ಟು ಮಾಡಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಕ್ರಿಸ್ಮಸ್, ಹೊಸ ವರ್ಷದ ಉಡುಗೊರೆ: 12 ನಿಮಿಷಗಳಲ್ಲಿ ಸಂಚಾರಿ ಯಲ್ಲೋ ಲೈನ್ ಮೆಟ್ರೋ
ಒಟ್ಟಿನಲ್ಲಿ ಇದು ಬಿಎಂಆರ್ ಸಿಎಲ್‌ಗೆ ಆಟ ಜನರಿಗೆ ಪ್ರಾಣ ಸಂಕಟ ಎಂಬಂತಾಗಿದೆ. ಈ ಸ್ಟೇಷನ್ ಗೊಂದಲವನ್ನು ಶೀಘ್ರವೇ ಪರಿಹರಿಸಲು ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ಬಿಎಂಸಿಎಲ್ ನಿಲ್ದಾಣಗಳ ಹೆಸರನ್ನು ಮರು ಪರಿಶೀಲನೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ