Headlines

ದೇಶದ ಮೊದಲ ಅಂತಾರಾಜ್ಯ ಮೆಟ್ರೋ ಸಂಪರ್ಕಕ್ಕೆ ಕೊಕ್: ಹೊಸೂರು ಮೆಟ್ರೋ ಯೋಜನೆ ಕೈಬಿಟ್ಟ ಬಿಎಂಆರ್​ಸಿಎಲ್

ದೇಶದ ಮೊದಲ ಅಂತಾರಾಜ್ಯ ಮೆಟ್ರೋ ಸಂಪರ್ಕಕ್ಕೆ ಕೊಕ್: ಹೊಸೂರು ಮೆಟ್ರೋ ಯೋಜನೆ ಕೈಬಿಟ್ಟ ಬಿಎಂಆರ್​ಸಿಎಲ್


ಬೆಂಗಳೂರು, ಅಕ್ಟೋಬರ್ 23: ಬೆಂಗಳೂರಿನಿಂದ ತಮಿಳುನಾಡಿನ ಹೊಸೂರರನ್ನು (ಹೊಸೂರು) ಸಂಪರ್ಕಿಸಲು ಉದ್ದೇಶಿಸಲಾಗಿದೆ ಮೆಟ್ರೋ (ನಮ್ಮ ಮೆಟ್ರೋ) ಮಾರ್ಗಕ್ಕೆ ಬಿಎಂಆರ್ ಸಿಎಲ್ (BMRCL) ಕೊಕ್ ನೀಡಿದೆ. ಆರಂಭದಲ್ಲಿ ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕರು ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯ ತಾಂತ್ರಿಕ ಸಮಸ್ಯೆಯ ಕಾರಣ ಬಿಎಂಆರ್‌ಸಿಎಲ್ ಯೋಜನೆ ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದ್ದು, ರಾಜ್ಯ ಸರ್ಕಾರಕ್ಕೂ ಈ ಕುರಿತು ವರದಿ ನೀಡಿದೆ. ಬೆಂಗಳೂರು ಮೆಟ್ರೋವನ್ನು 470 ಕಿ.ಮೀ.ಗೆ ವಿಸ್ತರಿಸಲು ಯೋಜನೆ ಹಾಕಿಕೊಳ್ಳುವಂತೆ ಕೇಂದ್ರ ಸರ್ಕಾರ ಬಿಎಂಆರ್‌ಸಿಎಲ್‌ಗೆ ಮನವಿ ಮಾಡಿತ್ತು. ಬಿಎಂಆರ್ ಸಿಎಲ್ ಈ ಯೋಜನೆ ಬಗ್ಗೆ ಅಧ್ಯಾಯವನ್ನು ನಡೆಸಿತ್ತು. 23 ಕಿ.ಮೀ. ಹೊಸೂರು-ಬೊಮ್ಮಸಂದ್ರ ಕಾರಿಡಾರ್‌ಗೆ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳಬಹುದು. ಆದರೆ ನಮ್ಮ ಮೆಟ್ರೋಗೆ ಸಂಯೋಜಿಸಲು ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್ ಕರ್ನಾಟಕ ಸರ್ಕಾರಕ್ಕೆ ಇದೆ.

ಬೆಂಗಳೂರು – ಹೊಸೂರು ಮಾರ್ಗವು ಆರ್.ವಿ ರಸ್ತೆ ಬೊಮ್ಮಸಂದ್ರ ಎಲ್ಲೋ ಮಾರ್ಗದ ವಿಸ್ತೃತ ಮಾರ್ಗವಾಗಿದೆ. ಚೆನ್ನೈ ಮೆಟ್ರೋಗೂ, ನಮ್ಮ ಮೆಟ್ರೋ ಮಾರ್ಗಕ್ಕೂ ಸಾಕಷ್ಟು ವ್ಯತ್ಯಾಸ ಇರುವ ಕಾರಣ ತಮಿಳುನಾಡಿನ ಹೊಸೂರು ಮಾರ್ಗಕ್ಕೆ ತಾಂತ್ರಿಕವಾಗಿ ಹೊಂದಾಣಿಕೆ ಸಾದ್ಯವಿಲ್ಲ. ಹೀಗಾಗಿ ಇದನ್ನು ಜಾರಿ ಮಾಡುವುದು ಕಷ್ಟ ಸಾಧ್ಯ ಎಂದು ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ.

ನಮ್ಮ ಮೆಟ್ರೋ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆವಾಗಲೇ ಚೆನ್ನಾಗಿ ಇರುತ್ತದೆ. ಇದರಿಂದ ಹೊಸೂರು ಅಭಿವೃದ್ಧಿಯೂ ಆಗುತ್ತದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಬೆಂಗಳೂರಿನ ಅಭಿವೃದ್ಧಿ ಕುಂಠಿತವಾಗುತ್ತದೆ. ಇಲ್ಲಿಂದ ದುಡಿಮೆ ಮಾಡಿಕೊಂಡು ಹೋಗಿ ಅವರ ರಾಜ್ಯ ಉದ್ದಾರ ಮಾಡುತ್ತಾರೆ. ನೀರಿನ ವಿಚಾರಕ್ಕೆ ಎಷ್ಟೊಂದು ಗಲಾಟೆ ಮಾಡುತ್ತಾರೆ, ಅವರಿಗೆ ನಾವು ಮೆಟ್ರೋ ಕೊಡಬೇಕಾ ಎಂದು ಕರ್ನಾಟಕದ ಪ್ರಯಾಣಿಕರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬೊಮ್ಮಸಂದ್ರ ಹೊಸೂರು ಮೆಟ್ರೋ ಯೋಜನೆಗೆ ಕರ್ನಾಟಕ ವಿರೋಧ: ಕಾರಣ ಇಲ್ಲಿದೆ

ಒಟ್ಟಿನಲ್ಲಿ, ಮೊದಲು ಕನ್ನಡಪರ ಸಂಘಟನೆಗಳು ಭಾರಿ ವಿರೋಧಕ್ಕೆ ಗುರಿಯಾಗಿ, ಇದೀಗ ತಾಂತ್ರಿಕ ಹೊಸೂರು ಮೆಟ್ರೋ ಮಾರ್ಗದ ಯೋಜನೆ ಬಿಎಂಆರ್‌ಸಿಎಲ್ ಕೈ ಬಿಟ್ಟಿದೆ. ಚೆನ್ನೈ ಮೆಟ್ರೋ ನಿಗಮ ಮತ್ತೆ ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಕಾದು ನೋಡಬೇಕಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *