ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಮೊಬೈಲ್ QR ಪಾಸ್ ಆರಂಭ
ಬೆಂಗಳೂರು, ಜನವರಿ 14: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮಂಗಳವಾರ ಮಹತ್ವದ ಘೋಷಣೆ ಮಾಡಿದೆ. ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವ ಸಲುವಾಗಿ BMRCL ಮೊಬೈಲ್ ಕ್ಯೂಆರ್ ಆಧಾರಿತ ಪಿರಿಯಾಡಿಕಲ್ ಪಾಸ್‌ಗಳನ್ನು ಪರಿಚಯಿಸಿದೆ. ಒಂದು, ಮೂರು ಮತ್ತು ಐದು ದಿನಗಳ ಕಾಲ ಅನಿಯಮಿತ ಪ್ರಯಾಣಕ್ಕೆ ಅವಕಾಶ ನೀಡುವ ಈ ಹೊಸ ಪಾಸ್‌ಗಳು ಗುರುವಾರ (ಜ.15) ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿವೆ.
ಯಾವುದೇ ಡೆಪಾಸಿಟ್ ಇಲ್ಲದ ಡಿಜಿಟಲ್ ಪಾಸ್
ಈವರೆಗೆ ಇಂತಹ ಅನಿಯಮಿತ ಪ್ರಯಾಣ ಪಾಸ್‌ಗಳು ಕೇವಲ ಕಾನ್‌ಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್ (CSC) ರೂಪದಲ್ಲಿ ಮಾತ್ರ ನೀಡಲಾಗುತ್ತಿದ್ದು, ಪ್ರಯಾಣಿಕರು ರೂ.50 ಭದ್ರತಾ ಠೇವಣಿ ಪಡೆಯಬೇಕಾಗಿತ್ತು. ಇದೀಗ ಮೊಬೈಲ್ ಕ್ಯೂಆರ್ ಪಾಸ್ ಪರಿಚಯದೊಂದಿಗೆ ಭದ್ರತಾ ಠೇವಣಿ ಪಾವತಿ ಅಗತ್ಯವಿಲ್ಲ, ಸಂಪೂರ್ಣ ಡಿಜಿಟಲ್ ಮಾಧ್ಯಮದ ಮೂಲಕ ಪಾಸ್ ಪಡೆಯಲಾಗಿದೆ.
ಪ್ರಯಾಣಿಕರು ಅಪ್ಲಿಕೇಶನ್ ಮೂಲಕ ಪಾಸ್ ಖರೀದಿಸಿ, ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸುವ ಕ್ಯೂಆರ್ ಕೋಡ್ ಅನ್ನು ಮೆಟ್ರೋ ನಿಲ್ದಾಣಗಳ ಸ್ವಯಂಚಾಲಿತ ಶುಲ್ಕ ಸಂಗ್ರಹಣೆ (AFC) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ಪ್ರವೇಶ ಮತ್ತು ನಿರ್ಗಮನ ಎರಡಕ್ಕೂ ಈ ಕ್ಯೂಆರ್ ಬಳಸಬಹುದು. ಇದರಿಂದ ಸಂಪರ್ಕರಹಿತ ಹಾಗೂ ಸುಗಮ ಪ್ರಯಾಣ ಸಾಧ್ಯವಾಗಲಿದೆ.
ಹೊಸ ದರ ವ್ಯವಸ್ಥೆ ಹೇಗಿದೆ?
ಒಂದು ದಿನದ ಅನಿಯಮಿತ ಪ್ರಯಾಣ ಪಾಸ್ 250 ರೂ.ಆಗಿದ್ದು, ಇದು ಸ್ಮಾರ್ಟ್ ಕಾರ್ಡ್‌ನ 300 ರೂ. ದರಕ್ಕಿಂತ ಕಡಿಮೆಯಾಗಿದೆ. ಮೂರು ದಿನಗಳ ಪಾಸ್ 550 ರೂ. ಮತ್ತು ಐದು ದಿನಗಳ ಪಾಸ್ 850 ರೂ. ಎಂದು ನಿಗದಿಪಡಿಸಲಾಗಿದೆ. ಒಟ್ಟಾರೆ ಸ್ಮಾರ್ಟ್ ಕಾರ್ಡ್‌ಗಿಂತ ಕಡಿಮೆ ವೆಚ್ಚದಲ್ಲಿ ಕ್ಯೂಆರ್ ಪಾಸ್ ಸಿಗುತ್ತದೆ, ಸೇವೆಯನ್ನು ನಂತರ ಮೊಬೈಲ್ ಟಿಕೆಟ್ ಪ್ಲಾಟ್‌ಫಾರ್ಮ್‌ಗಳಿಗೆ ವಿಸ್ತರಿಸುವ ಯೋಜನೆ ಇದೆ ಎಂದು ಬಿಎಂಆರ್‌ಸಿಎಲ್.
ಈ ವ್ಯವಸ್ಥೆಯಿಂದಾಗಿ ಪ್ರಯಾಣಿಕರ ಸಮಯ ಉಳಿಯುವುದರ ಜೊತೆಗೆ ಕಾರ್ಡ್ ವಿತರಣೆ ಮತ್ತು ಮರುಪಾವತಿಗಾಗಿ ಸರತಿ ಸಾಲುಗಳಲ್ಲಿ ನಿಲ್ಲುವುದು ತಪ್ಪುತ್ತದೆ. ಹೀಗಾಗಿ ಸುಗಮ ಪ್ರಯಾಣದ ಅನುಭವವನ್ನು ಆನಂದಿಸಲು ಮೊಬೈಲ್ ಕ್ಯೂಆರ್ ಆಧಾರಿತ ಪಾಸ್‌ಗಳಿಗೆ ಬದಲಾಯಿಸಲು ಬಿಎಂಆರ್‌ಸಿಎಲ್ ಪ್ರಯಾಣಿಕರನ್ನು ಒತ್ತಾಯಿಸಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 10:11 am, ಬುಧವಾರ, 14 ಜನವರಿ 26