ಬೆಂಗಳೂರು, ಅಕ್ಟೋಬರ್ 29: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಅನ್ನೋ ಹೆಸರಲ್ಲಿ ಮರಗಳು (ಮರಗಳು) ಕಣ್ಮರೆಯಾಗುತ್ತಿದೆ, ಇತ್ತ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ ಸಾವಿರಾರು ಮರಗಳ ಮಾರಣಹೋಮಕ್ಕೆ ಬಿಎಂಆರ್ ಸಿಎಲ್ (BMRCL) ಮುಂದಾಗುತ್ತಿದೆ. ಇದಕ್ಕೆ ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿತ್ತಳೆ ಮಾರ್ಗಕ್ಕಾಗಿ 1093 ಮರಗಳನ್ನು ಕಟ್ ಮಾಡಲು ಮುಂದಾದ ನಮ್ಮ ಮೆಟ್ರೋ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಭಿವೃದ್ಧಿ ಅನ್ನೋ ಹೆಸರಲ್ಲಿ ಸಾವಿರಾರು ಮರಗಳ ಮಾರಣಹೋಮ ಆಗಿದೆ. ಇದರಿಂದ ಬೆಂಗಳೂರಿಗರು ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ರು, ಇದೀಗ ಮತ್ತೆ ನಗರದಲ್ಲಿ ಸಾವಿರಾರು ಮರಗಳನ್ನು ಕಟ್ ಮಾಡಲು ಬಿಎಂಆರ್ ಸಿಎಲ್ ಮುಂದಾಗಿದೆ. ಮೆಟ್ರೋ ಮೂರನೇ ಯೋಜನೆಗಾಗಿ ಬರೋಬ್ಬರಿ 1092 ಕಡಿಯಲು ಮತ್ತು ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ತಪ್ಪು ಲೆಕ್ಕ ನೀಡಿತಾ BRCL? ಗಣಿತ ಪಾಠದ ಅವಶ್ಯಕತೆ ಇದೆ ಎಂದ ತೇಜಸ್ವಿ ಸೂರ್ಯ
1ನೇ ಕಾರಿಡಾರ್ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿಲೋ ಮೀಟರ್ ಮಾರ್ಗದಲ್ಲಿ 21 ನಿಲ್ದಾಣಗಳಿರಲಿ. 2ನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆಯವರೆಗೂ ಇಲ್ಲಿ 12.50 ಕಿಲೋ ಮೀಟರ್ ಇದ್ದು 9 ನಿಲ್ದಾಣಗಳು ಇರಲಿ. ಎರಡು ಮೆಟ್ರೋ ಮಾರ್ಗ ಒಟ್ಟು 44.65 ಕಿ.ಮೀ ಉದ್ದವಿದ್ದು, 15,611 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ.
ಇರುವ ಮರಗಳನ್ನೆಲ್ಲಾ ಕಟ್ ಮಾಡಿದರೆ ನಾವು ಉಸಿರಾಡುವುದು ಹೇಗೆ: ಇನಾಯತ್
ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ಇನಾಯತ್, ನಮ್ಮ ಮನೆಯ ಮುಂಭಾಗ ಮೆಟ್ರೋ ಬರ್ತಿರೋದು ಸಂತೋಷದ ವಿಷಯ. ಆದರೆ ಇರುವ ಮರಗಳನ್ನೆಲ್ಲಾ ಕಟ್ ಮಾಡಿದರೆ ನಾವು ಉಸಿರಾಡುವುದು ಹೇಗೆ, ನಿಮಯಗಳ ಪ್ರಕಾರ ಒಂದು ಮರ ಕಟ್ ಮಾಡಿದರೆ ಹತ್ತು ಗಿಡಗಳನ್ನು ನೆಡಬೇಕು ಅನ್ನೋ ರೂಲ್ಸ್ ಇದೆ. ಅದನ್ನು ಬಿಎಂಆರ್ ಸಿಎಲ್ ಅಧಿಕಾರಿಗಳು ಪಾಲಿಸಬೇಕು.
ಈ ಹಿಂದೆ ಕಿತ್ತಳೆ ಮಾರ್ಗದ ಕಾಮಗಾರಿಗಾಗಿ 11 ಸಾವಿರ ಮರಗಳನ್ನು ಕಟ್ ಮಾಡಲು ಸಿದ್ದತೆ ಮಾಡಿಕೊಂಡಿದ್ದ ಬಿಎಂಆರ್ ಸಿಎಲ್, ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ, 6500 ಮರಗಳನ್ನು ಕಟ್ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೂ ಪರಿಸರ ಹೋರಾಟಗಾರರು ಒಪ್ಪಲಿಲ್ಲ. ಇದೀಗ ಬಿಎಂಆರ್ ಸಿಎಲ್ ಅಧಿಕಾರಿಗಳು 2183 ಮರಗಳನ್ನು ಕಡಿಯಲು ಜಿಬಿಎ ಅಧಿಕಾರಿಗಳನ್ನು ಕೇಳಿದ್ದು, ಇದರಲ್ಲಿ ಮೊದಲ ಹಂತದಲ್ಲಿ 1092 ಮರಗಳನ್ನು ಕುಡಿಯಲು ಮತ್ತು ಇಲಾಖೆಗೆ ಜಿಬಿಎ ಅರಣ್ಯ ಇಲಾಖೆಗೆ ಅನುಮತಿ ನೀಡಿದ್ದು, ಈ ಮೂರನೇ ಹಂತದ ಮೆಟ್ರೋ ಕಾಮಗಾರಿ ವೇಳೆ 10,045 ಮರಗಳಿಗೆ ಮುಕ್ತಿ ಸಿಗಲಿದೆ.
ಪರಿಸರ ಹೋರಾಟಗಾರ ಅರುಣ್ ಹೇಳಿದಷ್ಟು
ಸದ್ಯ ಈ ಕುರಿತಾಗಿ ಪರಿಸರ ಹೋರಾಟಗಾರ ಅರುಣ್ ಮಾತನಾಡಿದ್ದು, ಒಂದು ಮರ ಕಟ್ ಮಾಡಿದರೆ, ಹತ್ತು ಗಿಡಗಳನ್ನು ನೀಡಬೇಕೆಂಬ ನಿಯಮವಿದೆ. ಒಂದು ಸಾವಿರ ಮರಗಳಿಗೆ ಬದಲಾಗಿ ಹತ್ತು ಸಾವಿರ ಮರಗಳನ್ನು ಯಾವ ಜಾಗದಲ್ಲಿ ನೆಡುತ್ತೀರಿ ಮತ್ತು ಹಿಂದೆ ಮೆಟ್ರೋ ಕಾಮಗಾರಿಗಾಗಿ ಕಟ್ ಮಾಡಿದ ನೆಟ್ಟ ಗಿಡಗಳಿಗೆ ಎಲ್ಲಿಲ್ಲದ ಅಸಮಾಧಾನವಿದೆ.
ಇದನ್ನೂ ಓದಿ: ದೇಶದ ಮೊದಲ ಅಂತಾರಾಜ್ಯ ಮೆಟ್ರೋ ಸಂಪರ್ಕಕ್ಕೆ ಕೊಕ್: ಹೊಸೂರು ಮೆಟ್ರೋ ಯೋಜನೆ ಕೈಬಿಟ್ಟ ಬಿಎಂಆರ್ ಸಿಎಲ್
ಒಟ್ಟಿನಲ್ಲಿ ಈಗಲೇ ಜಜನರಿಗೆ ಉಸಿರಾಡಲು ಶುದ್ಧವಾದ ಗಾಳಿ ಸಿಗುತ್ತಿಲ್ಲ. ಹೀಗಿರುವಾಗ ಇರುವ ಮರಗಳನ್ನು ಈ ಮಹಾನಗರ ಪಾಲಿಕೆ ಅಧಿಕಾರಿಗಳು ಅನ್ನೋ ಹೆಸರಲ್ಲಿ ಕಟ್ ಮಾಡಿದರೆ, ಬೆಂಗಳೂರು ಮತ್ತೊಂದು ದೆಹಲಿಯಲ್ಲಿ ಅನುಮಾನ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.