Headlines

BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಕಂಡಕ್ಟರ್​ಗಳು: ತನಿಖೆ ವೇಳೆ ಕಳ್ಳಾಟ ಬಯಲು

BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಕಂಡಕ್ಟರ್​ಗಳು: ತನಿಖೆ ವೇಳೆ ಕಳ್ಳಾಟ ಬಯಲು


ಬೆಂಗಳೂರು, ಜನವರಿ 19: ‘ಶಕ್ತಿ’ ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ದಾರೆ, ಇತ್ತ ಬಿಎಂಟಿಸಿಯ (ಬಿಎಂಟಿಸಿ) ಕೆಲ ಕಿಲಾಡಿ ಕಂಡಕ್ಟರ್‌ಗಳು (ಕಂಡಕ್ಟರ್) ಮಾತ್ರ, ಅನ್ನ ತಿಂದ ಮನೆಗೆ ಕನ್ನ ಹಾಕುವ ಕೆಲಸ ಮಾಡಿ ನಿಗಮಕ್ಕೆ ಸೇರಬೇಕಿದ್ದ, ಲಕ್ಷ ಲಕ್ಷ ಹಣವನ್ನು ತಮ್ಮ ಜೇಬಿಗೆ ಹಾಕಿಕೊಳ್ಳಲು ಮುಂದಾಗುತ್ತಿದ್ದಾರೆ.

ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಸಹಾಯವಾಗಲಿ ಎಂದು ಬಿಎಂಟಿಸಿ ನಿಗಮ ಯುಪಿಐ ಸ್ಕ್ಯಾನರ್‌ಗಳನ್ನು ಹಾಕಿದೆ. ಆದರೆ ಕೆಲ ಕಿಲಾಡಿ ಕಂಡಕ್ಟರ್‌ಗಳು ಬಿಎಂಟಿಸಿ ಬಸ್‌ನಲ್ಲಿರುವ ಯುಪಿಐ ಸ್ಕ್ಯಾನರ್‌ಗಳನ್ನು ಕಿತ್ತು, ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್‌ಗಳನ್ನು ನೀಡಿ, ತಮ್ಮ ಬ್ಯಾಂಕ್ ಅಕೌಂಟ್‌ಗೆ ಲಕ್ಷಾಂತರ ರೂ ಹಣ ಹಾಕುತ್ತಿದ್ದಾರೆ. ಅದರಲ್ಲೂ ಕನ್ನಡ ಬಾರದವರಿಗೆ ತಮ್ಮ ಮೊಬೈಲ್ ಯುಪಿಐ ಸ್ಕ್ಯಾನರ್ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದಾರಂತೆ.

ಇದನ್ನೂ ಓದಿ: ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ ಮೂರು ಸಾವಿರ ಬಸ್ ಮಾರ್ಗಗಳು: ಪರಿಷ್ಕರಣೆ

ಇನ್ನು ತನಿಖೆಯಲ್ಲಿ ಈ ಕಂಡಕ್ಟರ್‌ಗಳ ಕಳ್ಳಾಟ ಕೂಡ ಬಯಲಾಗಿದೆ. ಪ್ರತಿಯೊಬ್ಬರ ಅಕೌಂಟ್ನಲ್ಲೂ ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಪ್ರಯಾಣಿಕರಿಂದ ಹಾಕಿಸಿಕೊಂಡಿರುವುದು ತನಿಖೆಯಿಂದ ಬಯಲಾಗಿದೆ. ಶಕ್ತಿ ಯೋಜನೆ ಉಚಿತ ಟಿಕೆಟ್ ಮೇಲೆ ಕನ್ನಡದಲ್ಲಿ ಉಚಿತ ಟಿಕೆಟ್ ಎಂದು ಮುದ್ರಿಸಲಾಗಿದೆ. ಇಂಗ್ಲಿಷ್ನಲ್ಲಿ ಉಚಿತ ಟಿಕೆಟ್ ಎಂದು ಮುದ್ರಿಸಿಲ್ಲ. ಇದನ್ನು ಬಂಡವಾಳ ಮಾಡಿಕೊಂಡು ಕನ್ನಡ ಬಾರದ ನಾರ್ತ್, ಸೌತ್ ಇಂಡಿಯನ್ಸ್‌ಗೆ ಶಕ್ತಿ ಯೋಜನೆ ಉಚಿತ ಟಿಕೆಟ್ ನೀಡುತ್ತಿದೆ.

ಈ ಕಿಲಾಡಿ ಕಂಡಕ್ಟರ್‌ಗಳು ಡಿಪೋದಿಂದ ಬಸ್‌ಗಳು ಹೊರಗೆ ಬರ್ತಿದ್ದಂತೆ, ಬಿಎಂಟಿಸಿ ಬಸ್‌ನಲ್ಲಿರುವ ಬಿಎಂಟಿಸಿ ನಿಗಮದ ಯುಪಿಐ ಸ್ಕ್ಯಾನರ್‌ಗಳನ್ನು ಕಿತ್ತು ಇಟ್ಟುಕೊಳ್ಳುತ್ತಾರಂತೆ. ಯುಪಿಐ ಮೂಲಕ ಪೇಮೆಂಟ್ ಮಾಡಿ ಟಿಕೆಟ್ ಖರೀದಿಸಬೇಕು ಎಂದು ಕಂಡಕ್ಟರ್ ಬಳಿ ಕೇಳಿದಾಗ, ತಮ್ಮ ಮೊಬೈಲ್‌ನಲ್ಲಿರುವ ಸ್ವಂತ ಖಾತೆ ಪ್ರಯಾಣಿಕರನ್ನು ನೀಡಿ ಪ್ರಯಾಣಿಕರಿಂದ ತಮ್ಮ ಅಕೌಂಟ್‌ಗೆ ಹಣ ಹಾಕುತ್ತಿದ್ದಾರೆ. ಈ ಬಗ್ಗೆ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆ ಆರೋಪದಲ್ಲಿ ಹತ್ತಕ್ಕೂ ಹೆಚ್ಚು ಕಂಡಕ್ಟರ್‌ಗಳು ಸಿಕ್ಕಿಬಿದ್ದಿದ್ದಾರೆ.

ಪ್ರಯಾಣಿಕರು ಹೇಳಿದಷ್ಟು

ಹೀಗೆ ಸಿಕ್ಕಿಬಿದ್ದ ಪ್ರತಿಯೊಬ್ಬ ಕಂಡಕ್ಟರ್ ಅಕೌಂಟ್ ನಲ್ಲಿ 50 ಸಾವಿರ ರೂ. ಯುಪಿಐ ಮಾಡಿಸಿಕೊಂಡಿರುವುದು ಬಯಲಾಗಿದೆ. ಬಿಎಂಟಿಸಿ ಸೆಕ್ಯುರಿಟಿ ಅಧಿಕಾರಿಗಳು ಈ ಬಗ್ಗೆ ಬಿಎಂಟಿಸಿ ಎಂಡಿ ಶಿವಕುಮಾರ್ ಅವರಿಗೆ ವರದಿ ಸಲ್ಲಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಪ್ರಯಾಣಿಕ ಮಂಜುನಾಥ್, ಇಂತಹವರನ್ನು ಕೆಲಸದಿಂದ ಮನೆಗೆ ಕಳಿಸಬೇಕು.

ಇದನ್ನೂ ಓದಿ: ಬೆಂಗಳೂರು: ಮತ್ತೆ ಕುಖ್ಯಾತಿಗೆ ಒಳಗಾದ ಬಿಎಂಟಿಸಿ ಸಂಸ್ಥೆ; ಬಸ್ ಹರಿದು ಬಾಲಕಿ ದಾರುಣ ಸಾವು

ಶಕ್ತಿ ಯೋಜನೆಯ ಟಿಕೆಟ್‌ಗಳನ್ನು ಹೊರ ರಾಜ್ಯದವರಿಗೆ ನೀಡುತ್ತಿದೆ, ನಿಗಮದ ಸ್ಕ್ಯಾನರ್‌ಗಳನ್ನು ಕಿತ್ತು ತಮ್ಮ ಸ್ವಂತ ಯುಪಿಐ ಸ್ಕ್ಯಾನರ್‌ಗಳಿಗೆ ಹಣ ಹಾಕುತ್ತಿರುವ ಕಂಡಕ್ಟರ್‌ಗಳ ವಿರುದ್ಧ ಬಿಎಂಟಿಸಿ ನಿಗಮ ಕಠಿಣ ಕ್ರಮಕೈಗೊಳ್ಳದಿದ್ದರೆ, ಇವರಿಂದ ಮತ್ತಷ್ಟು ಕಂಡಕ್ಟರ್‌ಗಳು ಈ ದಾರಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *