ಬೆಂಗಳೂರು, ಜನವರಿ 20: ಬಿಎಂಟಿಸಿ (ಬಿಎಂಟಿಸಿ) ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ನಿಗಮವು ಯುಪಿಐ ಸ್ಕ್ಯಾನ್ ಅನ್ನು ಹಾಕಿದೆ. ಆದರೆ ಕೆಲ ಕಿಲಾಡಿ ಕಂಡಕ್ಟರ್ಗಳು ಬಿಎಂಟಿಸಿ ಬಸ್ನಲ್ಲಿರುವ ಯುಪಿಐ ಸ್ಕ್ಯಾನರ್ಗಳನ್ನು ಕಿತ್ತು, ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್ಗಳು (UPI ಸ್ಕ್ಯಾನರ್) ನೀಡಿ, ತಮ್ಮ ಬ್ಯಾಂಕ್ ಅಕೌಂಟ್ಗೆ ಲಕ್ಷಾಂತರ ರೂಪಾಯಿ ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕನ್ನಡ ಬಾರದವರಿಗೆ ತಮ್ಮ ಮೊಬೈಲ್ ಯುಪಿಐ ಸ್ಕ್ಯಾನರ್ ನೀಡಿ ಹಣ ಪೀಕುತ್ತಿದ್ದಾರೆ ಎಂಬ ಆರೋಪಗಳಿವೆ.
ತನಿಖೆಯಲ್ಲಿ ಬಯಲಾಯ್ತು ಬಿಎಂಟಿಸಿ ಬಸ್ ಕಂಡಕ್ಟರ್ಗಳ ಕಳ್ಳಾಟ
ಇದೀಗ ತನಿಖೆ ವೇಳೆ ಕೂಡ, ಕಂಡಕ್ಟರ್ಗಳ ಕಳ್ಳಾಟ ಬಯಲಾಗಿದೆ. ಪ್ರತಿಯೊಬ್ಬರ ಅಕೌಂಟ್ನಲ್ಲೂ ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಪ್ರಯಾಣಿಕರಿಂದ ಹಾಕಿಸಿಕೊಂಡಿರುವುದು ಬಯಲಿಗೆ ಬಂದಿದೆ.
ವಂಚನೆ ಎಸಗಲು ಉಪಯೋಗಿಸುವ ತಂತ್ರ ಇಲ್ಲಿದೆ ನೋಡಿ!
ಶಕ್ತಿ ಯೋಜನೆ ಉಚಿತ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ‘ಉಚಿತ ಟಿಕೆಟ್’ ಎಂದು ಪ್ರಿಂಟ್ ಮಾಡಲಾಗಿದೆ. ಇಂಗ್ಲಿಷ್ನಲ್ಲಿ ‘ಉಚಿತ ಟಿಕೆಟ್’ ಎಂದು ಪ್ರಿಂಟ್ ಮಾಡಿಲ್ಲ. ಇದನ್ನು ಬಂಡವಾಳ ಮಾಡಿಕೊಳ್ಳಲು ಕನ್ನಡ ಬಾರದ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಶಕ್ತಿ ಯೋಜನೆ ಟಿಕೆಟ್ ನೀಡುವ ಕಂಡಕ್ಟರ್ಗಳು ಅವರಿಂದ ವೈಯಕ್ತಿಕ ಯುಪಿಐ ಸ್ಕ್ಯಾನರ್ಗೆ ದುಡ್ಡು ಹಾಕಿಕೊಳ್ಳುತ್ತಾರೆ.
ಈ ಕಿಲಾಡಿ ಕಂಡಕ್ಟರ್ಗಳು ಡಿಪೋದಿಂದ ಬಸ್ಗಳು ಹೊರಗೆ ಬರುತ್ತಿದ್ದಂತೆಯೇ ಬಸ್ನಲ್ಲಿರುವ ಬಿಎಂಟಿಸಿ ನಿಗಮದ ಯುಪಿಐ ಸ್ಕ್ಯಾನರ್ಗಳನ್ನು ಕಿತ್ತು ಇಟ್ಟುಕೊಳ್ಳುತ್ತಾರೆ. ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಖರೀದಿಸಬೇಕು ಎಂದು ಕಂಡಕ್ಟರ್ಗಳ ಬಳಿ ಕೇಳಿದಾಗ, ತಮ್ಮ ಮೊಬೈಲ್ನಲ್ಲಿರುವ ಸ್ಕ್ಯಾನರ್ಗಳನ್ನು ನೀಡಿ ಪ್ರಯಾಣಿಕರಿಂದ ಸ್ವಂತ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆಗೆ ಒಳಗಾಗಿದ್ದಾರೆ. ಪ್ರತಿಯೊಬ್ಬರ ಅಕೌಂಟ್ನಲ್ಲಿ 50 ಸಾವಿರ ರೂಪಾಯಿವರೆಗೆ ಯುಪಿಐ ಮಾಡಿಸಿಕೊಂಡಿರುವುದು ಬಯಲಾಗಿದೆ. ಬಿಎಂಟಿಸಿ ಸೆಕ್ಯುರಿಟಿ ಅಧಿಕಾರಿಗಳು ಈ ಬಿಎಂಟಿಸಿ ಎಂಡಿ ಶಿವಕುಮಾರ್ ಅವರಿಗೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಿಎಂಟಿಸಿ ಚಾಲಕರ ಹೃದಯ ಹಿಂಡುತ್ತಿದೆಯೇ ಅಧಿಕಾರಿಗಳ ಒತ್ತಡ?
ಒಟ್ಟಿನಲ್ಲಿ ಶಕ್ತಿ ಯೋಜನೆಯ ಟಿಕೆಟ್ ಹೊರ ರಾಜ್ಯದವರಿಗೆ ಕೊಡುತ್ತಿದೆ, ನಿಗಮದ ಯುಪಿಐ ಸ್ಕ್ಯಾನರ್ಗಳನ್ನು ಕಿತ್ತು ತಮ್ಮ ಸ್ವಂತ ಯುಪಿಐ ಸ್ಕ್ಯಾನರ್ಗಳಿಗೆ ಹಣ ನೀಡಿ ನಿರ್ವಾಹಕರ ವಿರುದ್ಧ ಬಿಎಂಟಿಸಿ ನಿಗಮ ಕಠಿಣ ಕ್ರಮ ಕೈಗೊಳ್ಳಲು ಹೋದರೆ ಮತ್ತಷ್ಟು ಕಂಡಕ್ಟರ್ಗಳು ಈ ದಾರಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ